ಕರ್ನಾಟಕ

karnataka

ETV Bharat / sukhibhava

ಭಾರತದಲ್ಲಿ ತಯಾರಿಸಿದ 40ಕ್ಕೂ ಹೆಚ್ಚು ಕೆಮ್ಮಿನ ಸಿರಪ್​ಗಳು ಪ್ರಮಾಣಿತ ಗುಣಮಟ್ಟದಲಿಲ್ಲ: ವರದಿಯಲ್ಲಿ ಬಹಿರಂಗ

ಭಾರತದಲ್ಲಿ ಉತ್ಪಾದಿತ ಅನೇಕ ಕೆಮ್ಮಿನ ಸಿರಪ್​ಗಳನ್ನು ಸೇವಿಸಿದ ಗ್ಯಾಂಬೀಯಾ ಮತ್ತು ಉಜ್ಜೇಕಿಸ್ತಾನ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆ ಈ ಕುರಿತು ಪರೀಕ್ಷೆ ನಡೆಸಲಾಗಿದೆ.

manufacturing cough syrups in the country have failed quality tests
manufacturing cough syrups in the country have failed quality tests

By ETV Bharat Karnataka Team

Published : Dec 5, 2023, 10:22 AM IST

ನವದೆಹಲಿ:ದೇಶದಲ್ಲಿ ಕೆಮ್ಮಿನ ಔಷಧ ತಯಾರು ಮಾಡುತ್ತಿರುವ 40 ಕಂಪನಿಗಳ ಸಿರಪ್​ಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫವಾಗಿದೆ. ಈ ಕುರಿತು ವರದಿ ನೀಡಿರುವ ಸಿಡಿಎಸ್​ಸಿಒ, ಭಾರತದಲ್ಲಿ ತಯಾರಿಸಿದ ಕೆಮ್ಮು ಸಿರಪ್‌ಗಳನ್ನು ಜಾಗತಿಕವಾಗಿ 141 ಮಕ್ಕಳ ಸಾವುಗಳಿಗೆ ಕಾರಣವಾಗುತ್ತಿರುವ ವರದಿಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತಿರುವ ಔಷಧಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಇವು ಅರ್ಹತೆ ಪಡೆಯಲು ವಿಫಲವಾಗಿವೆ.

ಸೆಂಟ್ರಲ್​ ಡ್ರಗ್​ ಸ್ಟ್ಯಾಡಂರ್ಡ್​​ ಕಂಟ್ರೋಲ್​ ಆರ್ಗನೈಸೇಷನ್​ (ಸಿಡಿಎಸ್​ಸಿಒ) ಈ ವರದಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಯಲ್ಲಿ 1,105 ಔಷಧಗಳ ಮೌಲ್ಯ ಮಾಪನ ನಡೆಸಲಾಗಿದೆ. ಇದರಲ್ಲಿ 59 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂದು ಘೋಷಿಸಲಾಗಿದೆ.

ನವೆಂಬರ್​ನಲ್ಲಿ ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಸೌಂದರ್ಯವರ್ಧಕಗಳ ಪಟ್ಟಿಯ ಅಡಿ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಉತ್ಪನ್ನಗಳು ಪ್ರಮಾಣಿತ ಗುಣಮಟ್ಟವಲ್ಲ ಅಥವಾ ಕಲಬೆರಕೆ ಅಥವಾ ತಪ್ಪಾದ ಬ್ರ್ಯಾಂಡ್​ ಎಂದು ಘೋಷಿಸಲಾಗಿದೆ. ಈ ದತ್ತಾಂಶವನ್ನು ಸರ್ಕಾರಿ ಪರೀಕ್ಷಾ ಪ್ರಯೋಗಾಲಯದಿಂದ ಪಡೆಯಲಾಗಿದೆ. ಈ ವರದಿಯಲ್ಲಿ ಯಾವುದೇ ಉತ್ಪನ್ನಗಳು ಕಲಬೆರಕೆ ಅಥವಾ ತಪ್ಪು ಬ್ರ್ಯಾಂಡ್​ ಎಂದು ಕಂಡು ಬಂದಿಲ್ಲ.

ಭಾರತದಲ್ಲಿ ಉತ್ಪಾದಿತ ಅನೇಕ ಕೆಮ್ಮಿನ ಸಿರಪ್​ಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಇದನ್ನು ಸೇವಿಸಿದವರಲ್ಲಿ ಸಾವಿನ ವರದಿಗಳಾಗಿದ್ದವು. ಈ ಹಿನ್ನೆಲೆ ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ರಫ್ತು ಮಾಡುವ ಕೆಮ್ಮಿನ ಸಿರಪ್​ಗಳ ಗುಣಮಟ್ಟದ ಮೇಲೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂದಿತು. ಡಿಜಿಎಫ್​ಟಿ ನಿರ್ದೇಶನ ಹಿನ್ನಲೆ ಸಿಡಿಎಸ್​ಸಿಇ ರಫ್ತು ಅನುಮತಿ ಪಡೆಯುತ್ತಿರುವ ಎಲ್ಲ ಕೆಮ್ಮಿನ ಸಿರಪ್​ಗಳ ಪರೀಕ್ಷೆ ನಡೆಸುತ್ತಿದೆ.

ಮಕ್ಕಳ ಸಾವಿಗೆ ಕಾರಣವಾದ ಔಷಧಗಳು: ಗ್ಯಾಂಬೀಯಾ ಮತ್ತು ಉಜ್ಜೇಕಿಸ್ತಾನ ನೋಯ್ಡಾ ಮೂಲದ ಔಷಧ ಸಂಸ್ಥೆ ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್ ಡಾಕ್ -1 ಅನ್ನು ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ್ದರು. ಇರಾಕ್​ನಲ್ಲಿ ಮಹಾರಾಷ್ಟ್ರದ ಫಾರ್ಮಾಸ್ಯುಟಿಕಲ್​ ಕಂಪನಿ ತಯಾರಿಸಿದ ಕೆಮ್ಮಿನ ಸಿರಪ್​ ಸೇವಿಸಿದ ಮಕ್ಕಳ ಸ್ಥಿತಿ ಕೂಡ ಗಂಭೀರಗೊಂಡಿತು. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿ, ಇವುಗಳಲ್ಲಿ ರಾಸಾಯನಿಕ ಅಂಶ ಇದ್ದು ಬಳಕೆ ಮಾಡದಂತೆ ಜಾಗತಿಕ ಎಚ್ಚರಿಕೆ ನೀಡಿತು. (ಐಎಎನ್​ಎಸ್​)

ಇದನ್ನೂ ಓದಿ: ಇರಾಕ್​ನಲ್ಲಿ ಮಾರಾಟವಾಗುತ್ತಿರುವ ಭಾರತದ ಸಿರಪ್​ನಲ್ಲಿ ವಿಷಕಾರಿ ರಾಸಾಯನಿಕ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ABOUT THE AUTHOR

...view details