ಲಖನೌ(ಉತ್ತರಪ್ರದೇಶ): ಕೇಂದ್ರಿಯ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಹ ವಿಷಕಾರಕ ಮಟ್ಟದಲ್ಲಿ ಸೀಸದ ಪ್ರಮಾಣಕ್ಕೆ ಮಣಿಪಾಲದ ಮಕ್ಕಳು ಒಡ್ಡಿಕೊಳ್ಳುತ್ತಿದ್ದಾರೆ ಕಿಂಗ್ ಜಾರ್ಜ್ ಮೆಡಿಕಲ್ ಯುನಿವರ್ಸಿಟಿ ಸಂಶೋಧಕರ ಅಧ್ಯಯನದಲ್ಲಿ ಬಯಲಾಗಿದೆ.
ಭಾರತದ 10 ಜಿಲ್ಲೆಗಳ 60 ನಗರದ ಶಾಲೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. 6 ರಿಂದ 16ವರ್ಷದ 2,247 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ ಲಖನೌ ಮಕ್ಕಳ ರಕ್ತದ ಸೀಸದ ಮಟ್ಟ ಪ್ರತಿ ಡೆಸಿಲಿಟ್ರೆಗೆ 19.2 ಮೈಕ್ರೋಗ್ರಾಂನಷ್ಟು ಕಂಡು ಬಂದಿದೆ.
ಇನ್ನು ಕರ್ನಾಟಕದ ಉಡುಪಿ ಜಿಲ್ಲೆಯ ಮಣಿಪಾಲ ನಗರದ ಮಕ್ಕಳಲ್ಲಿ ಸೀಸದ ಪ್ರಮಾಣ ಪ್ರತಿ ಡೆಸಿಲೀಟರ್ಗೆ 30.2 ಮೈಕ್ರೋಗ್ರಾಂನಷ್ಟು ಕಂಡು ಬಂದಿದೆ. ರೋಗ ನಿಯಂತ್ರಣ ಪ್ರಕಾರ ಪ್ರತಿ ವ್ಯಕ್ತಿಯಲ್ಲಿ ರಕ್ತದ ಸೀಸದ ಮಟ್ಟ ಪ್ರತಿ ಡೆಸಿಲೀಟರ್ಗೆ 5 ಮೈಕ್ರೋಗ್ರಾಂನಷ್ಟು ಮಿತಿಯನ್ನು ನೀಡಲಾಗಿದೆ. ಆದರೆ, ಈ ಮಕ್ಕಳಲ್ಲಿ ಮಿತಿ ಮೀರಿದ ಮಟ್ಟಕ್ಕಿಂತ ನಾಲ್ಕು ಐದು ಪಟ್ಟು ಸೀಸದ ಅಂಶ ಪತ್ತೆಯಾಗಿದೆ.
ಈ ಅಧ್ಯಯನವನ್ನು ಇಂಡಿಯನ್ ಜರ್ನಲ್ ಆಫ್ ಪಿಡಿಯಾಟ್ರಿನ್ಸ್ನಲ್ಲಿ ಪ್ರಕಟಿಸಲಾಗಿದೆ. ಏಪ್ರಿಲ್ 2019ರಿಂದ ಫೆಬ್ರವರಿ 2020ರವರೆಗೆ ಈ ಅಧ್ಯಯನ ನಡೆಸಲಾಗಿದೆ. ಉಳಿದಂತೆ ಎಂಟಿ ಜಿಲ್ಲೆಗಳಲ್ಲಿ ಶಿಫಾರಸು ಮಿತಿಗಿಂತ ಅಧಿಕ ಪ್ರಕರಣದಲ್ಲಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ರಕ್ಷಣ ಮಾಡುವ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಕೆಜಿಎಂಯುನ ಅಧ್ಯಯನದ ಪ್ರಮುಖ ಸಂಶೋಧಕಿ ಪ್ರೊ ಶಲ್ಲೆ ಅವಸ್ಥಿ ತಿಳಿಸಿದ್ದಾರೆ.
ಸೀಸದ ಲೋಹವನ್ನು ಕೈಗಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಮಕ್ಕಳು ಮತ್ತು ಹದಿವಯಸ್ಸಿನವರಲ್ಲಿ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಕಾರಣ ಇದು ಅವರ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳಬಹುದಾಗಿದ್ದು, ಅನೇಕ ಆರೋಗ್ಯ ಪರಿಣಾಮಕ್ಕೆ ಕಾರಣವಾಗುತ್ತದೆ. ಅದರಲ್ಲೂ ಕೇಂದ್ರ ನರ ವ್ಯವಸ್ಥೆ ಮೇಲಿನ ಪರಿಣಾಮ ಹೆಚ್ಚಿದೆ. ಈ ಸೀಸವೂ ಎನಮೆಲ್ ಪೈಂಟ್ಸ್ನಿಂದ ಬಣ್ಣದ ಮೂರ್ತಿ ಮತ್ತು ಆಟಿಕೆಗಳಲ್ಲಿ ಕಂಡು ಬಂದಿದ್ದು, ಇದು ಅದರ ಮೂಲವಾಗಿರಬಹುದು.