ಮಾಲಿನ್ಯ ಅಥವಾ ಇನ್ನಿತರ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುತ್ತದೆ. ಈ ಬಿಳಿ ಕೂದಲಿನ ಸಮಸ್ಯೆಗೆ ಮತ್ತೊಂದು ಕಾರಣ ಎಂದರೆ ಮೆಲನಿನ್ ಉತ್ಪಾದನೆ ಕಡಿಮೆ ಆಗುವುದು. ಸಣ್ಣವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ಬಿಳಿ ಕೂದಲು ಹಲವರಲ್ಲಿ ಮುಜುಗರ ಕೂಡ ಉಂಟು ಮಾಡುತ್ತದೆ. ಇದೇ ಕಾರಣಕ್ಕೆ ಹೇರ್ ಡೈ ಮೊರೆ ಹೋಗುತ್ತಾರೆ. ಅಥವಾ ಕಲರಿಂಗ್ ಆಯ್ಕೆ ಮಾಡುತ್ತಾರೆ. ಈ ರೀತಿಯ ಬಿಳಿ ಕೂದಲ ಸಮಸ್ಯೆಗೆ ಇದೀಗ ಮನೆಯಲ್ಲಿಯೇ ನೈಸರ್ಗಿಕ ಹೇರ್ ಪ್ಯಾಕ್ ಮೂಲಕ ಹೊಸ ರೂಪ ಪಡೆಯಬಹುದು.
ಕೂದಲಿಗೆ ವಿಧ ವಿಧವಾದ ಬಣ್ಣ ಹಚ್ಚುವುದು ಇಂದಿನ ಟ್ರೆಂಡ್ ಆಗಿದೆ. ಈ ರೀತಿಯ ಬಣ್ಣ ನಿಮ್ಮ ಕೂದಲಿಗೆ ಹಚ್ಚುವ ಇರಾದೆ ಇದ್ದರೂ ರಾಸಾಯನಿಕಗಳಿಂದ ಕೂದಲು ಹಾಳಾಗುತ್ತದೆ ಎಂಬ ಕೊರಗು ಮೂಡುತ್ತದೆ. ಇದರಿಂದ ಮುಕ್ತಿ ಪಡೆಯಲು ಇರುವ ಮಾರ್ಗ ನೈಸರ್ಗಿಕ ಬಣ್ಣಗಳು. ಈ ನೈಸರ್ಗಿಕ ಬಣ್ಣಗಳು ಕೂದಲಿಗೆ ಪೋಷಣೆಯನ್ನು ಒದಗಿಸುವ ಜೊತೆಗೆ ನಿಮ್ಮಿಷ್ಟದಂತೆ ಕೂದಲನ್ನು ಸ್ಟೈಲಿಶ್ ಆಗಿ ಕಾಣುವಂತೆ ಕೂಡ ಮಾಡುತ್ತದೆ. ಹಾಗಾದ್ರೆ ಮನೆಯಲ್ಲಿಯೇ ನಿಮಿಷ್ಟವಾದ ಬಣ್ಣ ತಯಾರಿಸಲು ಈ ರೀತಿ ಮಾಡಿ ಸಾಕು.
ಕಾಫಿ: ಇದರ ಘಮ ಕಾಫಿ ಪ್ರಿಯರನ್ನು ಮಾತ್ರವಲ್ಲದೇ, ಇದರ ಅಂಶಗಳು ಸೌಂದರ್ಯ ವರ್ಧಕರನ್ನು ಸೆಳೆಯುತ್ತದೆ. ಮುಖದ ಅಂದ ಹೆಚ್ಚಿಸುವ ಕಾಫಿಯನ್ನು ಕೂದಲಿನ ಬಣ್ಣಕ್ಕೂ ಬಳಕೆ ಮಾಡಬಹುದು. ಎರಡು ಸ್ಪೂನ್ ಕಾಫಿ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಈ ನೀರು ಅರ್ಧಕ್ಕೆ ಬರುವಂತೆ ನೋಡಿಕೊಳ್ಳಿ, ಬಳಿಕ ಅದನ್ನು ತಣ್ಣಗೆ ಆಗಿಸಿ. ನಂತರ ಅದನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಗಂಟೆ ಬಳಿಕ ಇದನ್ನು ಕಡಿಮೆ ರಾಸಾಯನಿಕ ಶಾಂಪೊವಿನಿಂದ ತೊಳೆಯಿರಿ. ಇದರಿಂದ ಕೂದಲು ಗಾಢಾ ಕೆಂಪು ಬಣ್ಣ ಪಡೆಯುತ್ತದೆ.
ಬೀಟ್ರೂಟ್: ಬೀಟ್ರೋಟ್ ಹೊಳುಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ. ಇದು ತಣ್ಣಗೆ ಆದ ಬಳಿಕ ಅದನ್ನು ಶೋಧಿಸಿ, ಕೂದಲಿಗೆ ಹಚ್ಚಿ. ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಕೆಂಪು ಮತ್ತು ನೇರಳೆ ಬಣ್ಣ ಪಡೆಯುತ್ತದೆ.