ಬೆಂಗಳೂರು: ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿದ್ದು, ಭಾರತದಲ್ಲಿ ಇದು ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಜಾಗತಿಕವಾಗಿ ಕ್ಯಾನ್ಸರ್ ಸಂಬಂಧಿ ಸಾವಿನಲ್ಲಿ ಇದು ಕೂಡ ಪ್ರಮುಖವಾಗಿದೆ. ಪ್ರತಿ ವರ್ಷ ಆಗಸ್ಟ್ 1 ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನಾಗಿ ಆಚರಣೆ ಮಾಡಲಾಗುವುದು. ಈ ಮೂಲಕ ಈ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯತ್ನ ನಡೆಸಲಾಗಿದೆ.
ಅಂಕಿ - ಅಂಶಗಳ ಪ್ರಕಾರ, ಪುರಷರಲ್ಲಿ ಶೇ 90 ರಷ್ಟು ಮಂದಿಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಹೊಂದಿದ್ದರೆ, ಮಹಿಳೆಯರಲ್ಲಿ ಶೇ 80ರಷ್ಟು ಮಂದಿಯಲ್ಲಿ ಶ್ವಾಸಕೋಶ ಕ್ಯಾನ್ಸರ್ ಕಂಡು ಬಂದಿದೆ. ಇದಕ್ಕೆ ಪ್ರಮುಖ ಕಾರಣ ಧೂಮಪಾನವಾಗಿದೆ. ಪರೋಕ್ಷ ಧೂಮಪಾನ, ರಾಡೊನ್ ಗ್ಯಾಸ್, ಕಲ್ನಾರಿನ, ಇತರ ಕಾರ್ಸಿನೋಜೆನೊ, ವಾಯು ಮಾಲಿನ್ಯ, ಕುಡಿಯುವ ನೀರಿನಲ್ಲಿ ಆರ್ಸೆನಿಕ್, ಶ್ವಾಸಕೋಶಗಳಿಗೆ ಹಿಂದಿನ ವಿಕಿರಣ ಮತ್ತು ಕುಟುಂಬದ ಇತಿಹಾಸಗಳು ಶ್ವಾಸಕೋಶ ಕ್ಯಾನ್ಸರ್ಗೆ ಪ್ರಮುಖ ಕಾರಣವಾಗಿದೆ.
ಡಾ ಸುಧಾಕರ್ ನಾದೆಲ್ಲಾ ಹೆಳುವಂತೆ, ಶ್ವಾಸಕೋಶ ಕ್ಯಾನ್ಸರ್ನ ಬಹುತೇಕ ಲಕ್ಷಣಗಳು ಅಂತಿಮ ಹಂತದಲ್ಲಿ ಕಾಣುತ್ತದೆ. ಇದರಿಂದ ಚಿಕಿತ್ಸೆ ಕೂಡ ಹೆಚ್ಚು ಸಮಸ್ಯೆದಾಯಕವಾಗಿದೆ. ಕ್ಯಾನ್ಸರ್ ಪತ್ತೆ ತಡವಾಗಿ ಆಗುವುದರಿಂದ ರೋಗಿಯ ಬದುಕುಳಿಯುವ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹರಡುವ ಮುನ್ನವೇ ಪತ್ತೆ ಮಡುವುದರಿಂದ ಅವರು ಬದುಕುಳಿಯುವ ಸಾಧ್ಯತೆ ಶೇ 556ರಷ್ಟು ಹೆಚ್ಚಿರುತ್ತದೆ. ಶ್ವಾಸಕೋಶ ಕ್ಯಾನ್ಸರ್ನ ರೋಗಿಗಳ ಮುಂಚೆಯೇ ಸ್ಕ್ರೀನಿಂಗ್ ಒಳಗಾಗುವುದರಿಂದ ಅವರು ಬದುಕುಳಿಯುವ ಸಾಧ್ಯತೆ ಇದೆ. ಇನ್ನು ಭಾರತದಲ್ಲಿ ಟಿಬಿ ಕೂಡ ಸ್ಥಳೀಯವಾಗಿ ಹರಡಿರುವುದರಿಂದ ಟಿವಿ ಮತ್ತು ಶ್ವಾಸಕೋಶ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿ ವ್ಯತ್ಯಾಸ ಪತ್ತೆ ಮಾಡುವುದು ಕಷ್ಟವಾಗಿದೆ.
ಶ್ವಾಸಕೋಶ ಕ್ಯಾನ್ಸರ್ನ ಕೆಲವು ಲಕ್ಷಣಗಳಿದ್ದು, ಅದರಿಂದ ಚಿಂತೆ ಮಾಡಬೇಕಿಲ್ಲ. ಆದರೆ ವಯಸ್ಸಾದ ವಯಸ್ಸಿನಲ್ಲಿ ಮೌಲ್ಯಮಾಪನ ಮಾಡಬೇಕು. ನಿರಂತರ ಕೆಮ್ಮು, ಉಸಿರಾಡಲು ಕಷ್ಟ, ದೀರ್ಘ ಬ್ರಾಂಕಾಯ್ಟಿಸ್, ಎದೆ ನೋವು, ಅನಿರೀಕ್ಷಿತ ತೂಕ ನಷ್ಟ, ಮೂಳೆ ನೋವು ಚಿಂತಿಸುವ ವಿಚಾರವಾಗಿದೆ.
50 ರಿಂದ 80 ವರ್ಷದ ರೋಗಿಗಳು 20 ವರ್ಷದ ಧೂಮಪಾನದ ಇತಿಹಾಸ ಹೊಂದಿರುವವರು, 15 ವರ್ಷಗಳ ಕಾಲ ಧೂಮಪಾನ ಮಾಡಿದವರು. ಪರಿಸರ ಅಥವಾ ಹಾನಿಕಾರಕ ಅನಿಲಕ್ಕೆ, ವಾಯು ಮಾಲಿನ್ಯಕ್ಕೆ ತುತ್ತಾದವರು ಶ್ವಾಸಕೋಶ ಕ್ಯಾನ್ಸರ್ ಅಪಾಯವನ್ನು ಹೊಂದಿದ್ದು, ಇವರು ಒಮ್ಮೆ ಸ್ಕ್ರೀನಿಂಗ್ಗೆ ಒಳಗಾಗುವುದು ಸೂಕ್ತ.
ಇತ್ತೀಚಿನ ದಿನಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮೌಲ್ಯಮಾಪನ ಮತ್ತು ನಿರ್ವಹಣೆಯಲ್ಲಿನ ಬಯೋಮಾರ್ಕರ್ಸ್, ಲಿಕ್ವಿಡ್ ಬಯಾಪ್ಸಿ, ಇಮ್ಯುನೊಥೆರಪಿ, ರೊಬೊಟಿಕ್ಸ್, ಸ್ಟೀರಿಯೊಟಾಕ್ಟಿಕ್ ರೇಡಿಯೇಶನ್ ಇತ್ಯಾದಿಗಳು ಚಿಕಿತ್ಸೆಯ ಫಲಿತಾಂಶಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಿದೆ.