ವಾಷಿಂಗ್ಟನ್:ಊಟದ ನಡುವಿನ ಮಧ್ಯಂತರ ಅಂತರಕ್ಕಿಂತ ಎಷ್ಟು ಊಟ ಮಾಡುತ್ತೇವೆ ಮತ್ತು ಎಷ್ಟು ಪ್ರಮಾಣದಲ್ಲಿ ಮಾಡುತ್ತೇವೆ ಎಂಬುದು ಮುಖ್ಯ. ಊಟ ಮತ್ತು ಕ್ಯಾಲೋರಿಯೊಂದಿಗೆ ಸಂಬಂಧ ಹೊಂದಿದೆ ಎಂದು ಸಂಶೋಧನೆಗಳು ಹೇಳಿವೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್, ಜರ್ನಲ್ ಪ್ರಕಾರ, ಮಂಧ್ಯತರ ಉಪವಾಸ ಜನಪ್ರಿಯವಾಗಿದ್ದು, ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಅಧ್ಯಯನ ಹಿರಿಯ ಲೇಖಕ ವೆಂಡೆ ಎಲ್ ಬೆನೆಟ್ ತಿಳಿಸಿದ್ದಾರೆ.
ಮೊದಲ ಊಟ ಮತ್ತು ದಿನದ ಕೊನೆ ಊಟದ ಮಧ್ಯೆ ತೂಕದ ಬದಲಾವಣೆ ಆಗುತ್ತದೆ. ಈ ಸಂಬಂಧ ಮೆರಿಲ್ಯಾಂಡ್ ಮತ್ತು ಪೆನ್ನಿಸೆಲ್ವೆನಿಯ ಜೊತೆ ಎಲೆಕ್ಟ್ರಾನಿಕ ಆರೋಗ್ಯ ವರದಿ ಅನ್ವಯ ಸರಿ ಸುಮಾರು 550 ಮಂದಿಯನ್ನು ಮೂರು ಆರೋಗ್ಯ ವ್ಯವಸ್ಥೆಯಲ್ಲಿ ಈ ಅಧ್ಯಯನ ನಡೆಸಲಾಗಿದೆ. ಭಾಗಿದಾರರಲ್ಲಿ ಅಧ್ಯಯನಕ್ಕೆ ಎರಡು ವರ್ಷದ ಮುನ್ನವೇ ಅವರ ಎತ್ತರ ಮತ್ತು ತೂಕವನ್ನು ದಾಖಲಿಸಲಾಗಿದೆ.
ಬಹುತೇಕ ಅಂದರೆ ಶೇ 80ರಷ್ಟು ಬಿಳಿ ವಯಸ್ಕರು ಶೇ 12ರಷ್ಟು ಸ್ವಯಂ ವರದಿ ಹೊಂದಿದ್ದರೆ, ಶೇ 3ರಷ್ಟು ಕಪ್ಪು ವಯಸ್ಕರರು ಸ್ವಯಂ ಗುರುತು ಹೊಂದಿದ್ದಾರೆ. 18 ರಿಂದ 51 ವರ್ಷ ವಯೋಮಿತಿ ಹೊಂದಿರುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸಾಮಾನ್ಯವಾಗಿ ಇವರ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) 30.8 ಆಗಿದ್ದು, ಇದನ್ನು ಬೊಜ್ಜು ಎಂದು ಪರಿಗಣಿಸಲಾಗಿದೆ.
ಅತಿ ಹೆಚ್ಚು ದೇಹ ತೂಕ ಹೊಂದಿರುವ ಕಪ್ಪು ಮಹಿಳೆಯರೂ ಕೂಡಾ ಈ ಅಧ್ಯಯನದಲ್ಲಿ ಭಾಗಿಯಾಗಿದ್ದಾರೆ. ಅವರಲ್ಲಿ ಕಡಿಮೆ ಶಿಕ್ಷಣ ಮತ್ತು ಅದಿಕ ರಕ್ತದೊತ್ತಡ ಅಥವಾ ಡಯಾಬೀಟಿಸ್ ಹೊಂದಿದ್ದು ಕಡಿಮೆ ವ್ಯಾಯಾಮ, ತರಕಾರಿ ಮತ್ತು ಹಣ್ಣು ಕಡಿಮೆ ತಿನ್ನುತ್ತಾರೆ. ಕಡಿಮೆ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಹೊಂದಿರುವ ವಯಸ್ಕರಿಗೆ ಹೋಲಿಸಿದರೆ, ಇವರ ಕೊನೆಯ ಊಟದಿಂದ ನಿದ್ರೆಯವರೆಗೆ ದೀರ್ಘಾವಧಿ ಮತ್ತು ಮೊದಲ ಊಟದಿಂದ ಕೊನೆಯ ಊಟದವರೆಗೆ ಕಡಿಮೆ ಅವಧಿ ಹೊಂದಿರುವುದು ಕಂಡು ಬಂದಿದೆ.