ಬೆಂಗಳೂರು:ಅತಿ ಹೆಚ್ಚಿನ ಮದ್ಯ ಸೇವನೆ ಲಿವರ್ ಸಿರೋಸಿಸ್, ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಯಂತಹ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿತು. ಆದರೆ, ಇದೀಗ ಹೊಸ ಅಧ್ಯಯನವೊಂದು, ಅತಿ ಹೆಚ್ಚು ಮದ್ಯ ಸೇವನೆಯಿಂದ ಇವಷ್ಟೇ ಸಮಸ್ಯೆ ಇಲ್ಲ. ಇದರಿಂದಾಗಿ ಕಡಿಮೆ ಮಾಂಸಖಂಡದ ಮಟ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ತಿಳಿಸಿದೆ. ಇದು ಕುಡಿಯದವರು ಮತ್ತು ಮಿತಿಯಲ್ಲಿ ಕುಡಿಯುವವರಿಗೆ ಹೋಲಿಸಿದಾಗ ಹೆಚ್ಚಿದೆ ಎಂದು ಹೇಳಿದೆ.
ಈ ಅಧ್ಯಯನಕ್ಕಾಗಿ ಯುಕೆ ಬಯೋಬ್ಯಾಂಕ್ನ ದತ್ತಾಂಶಗಳನ್ನು ಬಳಕೆ ಮಾಡಲಾಗಿದೆ. ಬ್ರಿಟನ್ ಅರ್ಧ ಮಿಲಿಯನ್ಗಿಂತಲೂ ಹೆಚ್ಚಿನ ಜನರ ಆರೋಗ್ಯ ಮಾಹಿತಿ ಮತ್ತು ಜೀವನಶೈಲಿಯ ದೊಡ್ಡ ಮಟ್ಟದ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. 37ರಿಂದ 73ವರ್ಷದ ವಯೋಮಾನದ 2ಲಕ್ಷ ಜನರ ದತ್ತಾಂಶವನ್ನು ಸೇರಿಸಲಾಗಿದೆ. ಅವರ ಸರಾಸರಿ ಮದ್ಯ ಸೇವನೆ ಮತ್ತು ಸ್ನಾಯುವಿನ ದ್ರವ್ಯರಾಶಿ ಗಮನಿಸಿಲಾಗಿದೆ. ವ್ಯಕ್ತಿಯ ದೈಹಿಕ ಚಟುವಟಿಕೆ ಮಟ್ಟ, ಅವರು ಎಷ್ಟು ಪ್ರಮಾಣದ ಪ್ರೋಟಿನ್ ಸೇವನೆ ಮಾಡುತ್ತಾರೆ. ಅವರು ಧೂಮಪಾನಿಗಳಾ ಎಂಬುದನ್ನು ಅಧ್ಯಯನದಲ್ಲಿ ತಿಳಿಯಲಾಗಿದೆ.
ವಿಭಿನ್ನ ಅಧ್ಯಯನ: ಅಧ್ಯಯನದಲ್ಲಿ ಪುರುಷರು ಮತ್ತು ಮಹಿಳೆಯ ಲಿಂಗ ಮತ್ತು ದೇಹ ರಚನೆ ವಿಭಿನ್ನತೆ ಹಿನ್ನಲೆ ವಿಶ್ಲೇಷಣೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಕೇವಲ ಬಿಳಿಯರ ದತ್ತಾಂಶವನ್ನು ಮಾತ್ರ ಪಡೆಯಲಾಗಿದೆ. ಅಂಕಿ - ಅಂಶಗಳ ಮಾದರಿಯಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಮದ್ಯ ಸೇವನೆ ಮಾಡುವ ಜನರಲ್ಲಿ ಯಾಕೆ ಸ್ನಾಯುವಿನ ದ್ರವ್ಯರಾಶಿ ವಿಭಿನ್ನವಾಗಿದೆ ಎಂದು ಗಮನಿಸಲಾಗಿದೆ. ಕಾರಣ ದೊಡ್ಡ ಜನರು ಹೆಚ್ಚು ಸ್ನಾಯುಗಳನ್ನು ಹೊಂದಿರುವುದರಿಂದ, ನಾವು ದೇಹದ ಗಾತ್ರಕ್ಕಾಗಿ ಸ್ನಾಯುಗಳನ್ನು ಅಳೆಯುತ್ತೇವೆ.
ಒಟ್ಟಾರೆ, ಹೆಚ್ಚು ಕುಡಿಯುವ ಜನರಲ್ಲಿ ಸ್ನಾಯುಗಳ ಕಡಿಮೆ ಇರುತ್ತದೆ. ಈ ಪರಿಣಾಮದಿಂದ ಪ್ರತಿನಿತ್ಯ ಒಂದು ಯೂನಿಟ್ ಆಲ್ಕೋಹಾಲ್ ಸೇವನೆ ಮಾಡುವುದರ ಮೇಲೆ ಈ ಸ್ನಾಯು ಸವೆತ ನಿರ್ಧರಿತವಾಗಿದೆ. ಅತಿ ಹೆಚ್ಚು ಕುಡಿಯುವವರು ಎಂದರೆ ದಿನಕ್ಕೆ 20 ಯೂನಿಟ್ ಮದ್ಯ ಸೇವನೆ ಮಾಡುವುದಾಗಿದೆ. ಇದು ಎರಡು ಬಾಟೆಲ್ ವೈನ್ ಅಥವಾ 10 ಪಿಂಟ್ ಬಿಯರ್ಗೆ ಸಮಯವಾಗಿದೆ. ಇವರಲ್ಲಿ ಕುಡಿಯದವರಿಗಿಂತ 4 ರಿಂದ 5ರಷ್ಟು ಕಡಿಮೆ ಮಾಂಸಖಂಡ ಇರುವುದು ಕಂಡು ಬಂದಿದೆ