ಕರ್ನಾಟಕ

karnataka

ETV Bharat / sukhibhava

ದೀರ್ಘಕಾಲದ ಕೋವಿಡ್​ನಿಂದ ವಾಸನೆ ಗ್ರಹಿಕೆಯೇ ಮಾಯ; ಅಧ್ಯಯನದಲ್ಲಿ ಬಯಲಾಯ್ತು ಭಯಾನಕ ಮಾಹಿತಿ - ಈಟಿವಿ ಭಾರತ್​ ಕನ್ನಡ

ವಾಸನೆ ಕಳೆದುಕೊಳ್ಳುವುದು ಸೇರಿದಂತೆ ಕಿವಿ, ಮೂಗು ಮತ್ತು ಗಂಟು ಸಂಬಂಧಿಸಿದ ಕೋವಿಡ್​ ಲಕ್ಷಣಗಳ ಮೇಲೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಈ ಸಂಬಂಧ ಯುಕೆ ಕೊರೋನಾ ವೈರಸ್​ ಸೋಂಕು ಸಮೀಕ್ಷೆ ಮತ್ತು 3,60,000 ಜನರ ಮಾಹಿತಿ ಅನುಸಾರ ವಿಶ್ಲೇಷಣೆ ನಡೆಸಲಾಗಿದೆ.

ದೀರ್ಘಕಾಲ ಕೋವಿಡ್​ನಲ್ಲಿ ವಾಸನೆ ಕಳೆದುಕೊಳ್ಳುವುದು ಸಾಮಾನ್ಯ; ಅಧ್ಯಯನದಲ್ಲಿ ಬಯಲು
loss-of-smell-is-common-in-chronic-covid-open-in-study

By

Published : Dec 21, 2022, 5:14 PM IST

ಲಂಡನ್​: ದೀರ್ಘಕಾಲದ ಕೋವಿಡ್​ನಲ್ಲಿ ವಾಸನೆ ಕಳೆದುಕೊಳ್ಳುವುದು ಅತ್ಯಂತ ಸಾಮಾನ್ಯ. ಹೊಸ ಅಧ್ಯಯನ ಅನುಸಾರ, ಮೂರನೇ ದೀರ್ಘಾವಧಿ ಕೋವಿಡ್​ನಲ್ಲಿ ನಿರಂತರ ವಾಸನೆ ಗ್ರಹಿಕೆ ಶಕ್ತಿ ಕಳೆದುಕೊಳ್ಳಲಿದ್ದಾರೆ. ಐದನೇ ಅನುಭವದಲ್ಲಿ ರುಚಿಯನ್ನು ಕಳೆದುಕೊಳ್ಳಲಿದ್ದಾರೆ. ಈಸ್ಟ್​ ಏಜಲಿಯಾ (ಯುಇಎ) ಬ್ರಿಟನ್​ ಜಂಟಿ ಅಧ್ಯಯನದಲ್ಲಿ ಕಿವಿ, ಮೂಗು ಮತ್ತು ಗಂಟಲು ಸಂಬಂಧಿಸಿದ ಲಕ್ಷಣವನ್ನು ದೀರ್ಘಾವಧಿ ಕೋವಿಡ್​ನಲ್ಲಿ ಕಾಡಲಿದೆ ಎಂದಿದೆ.

ದೀರ್ಘ ಕೋವಿಡ್​​ ಕ್ಲಿಷ್ಟಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಿದೆ. 12 ವಾರಗಳ ಕಾಲ ಲಕ್ಷಣಗಳು ಇರಲಿದೆ ಎಂದು ಸಂಶೋದಕರಿ ಕರ್ಲ್​ ಪಿಲ್ಪೊಟ್​ ತಿಳಿಸಿದ್ದಾರೆ. ತಲೆನೋವು, ರುಚಿ, ವಾಸನೆ ಕಳೆದುಕೊಳ್ಳುವುದು ಮೈಯಾಲ್ಜಿಯಾ, ಆಯಾಸದಂತಹ ಲಕ್ಷಣಗಳು ಕಾಡಲಿದೆ. ಸೋಂಕಿನ ನಂತರದಲ್ಲಿ ತಿಂಗಳವರೆಗೆ ಪರೊಸ್ಮಿಯ, ಬ್ರೈನ್​ ಫಾಗ್​​, ಸ್ಮರಣಾಶಕ್ತಿ ಕಳೆದುಕೊಳ್ಳುವುದು ಕಾಡಲಿದೆ.

ವಾಸನೆ ಕಳೆದುಕೊಳ್ಳುವುದು ಸೇರಿದಂತೆ ಕಿವಿ, ಮೂಗು ಮತ್ತು ಗಂಟಲಿಗೆ ಸಂಬಂಧಿಸಿದ ಕೋವಿಡ್​ ಲಕ್ಷಣಗಳ ಮೇಲೆ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಈ ಸಂಬಂಧ ಯುಕೆ ಕೊರೋನಾ ವೈರಸ್​ ಸೋಂಕು ಸಮೀಕ್ಷೆ ಮತ್ತು 3,60,000 ಜನರ ಮಾಹಿತಿ ಅನುಸಾರ ವಿಶ್ಲೇಷಣೆ ನಡೆಸಲಾಗಿದೆ.

ದೀರ್ಘಕಾಲದ ಕೋವಿಡ್​ನಿಂದ ಬಳಲಿದ ಒಟ್ಟು 10,431ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಪ್ರತಿನಿತ್ಯದ ಜೀವನದಲ್ಲಿ 23 ವೈಯಕ್ತಿಕ ರೋಗಲಕ್ಷಣದ ಪ್ರಭಾವದ ಕುರಿತು ಪ್ರಶ್ನಿಸಲಾಯಿತು. ಈ ವೇಳೆ ಕೋವಿಡ್​ ಸೋಂಕಿನ ನಂತರ ನಾಲ್ಕು ವಾರಗಳ ಕಾಲ ಈ ಲಕ್ಷಣಗಳು ಕಾಡಲಿವೆ.

ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಶೇ 3ರಷ್ಟು ಜನರು ದೀರ್ಘಕಾಲ ಕೋವಿಡ್​ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಯುಕೆ ಜನಸಂಖ್ಯೆಯನ್ನು ಅಳತೆ ಮಾಡಿದಾಗ ಇದು ಸುಮಾರು 1.8 ಮಿಲಿಯನ್​ ಜನರಿಗೆ ಸಮವಾಗಿದೆ ಎಂದು ತಿಳಿದು ಬಂದಿದೆ. ಇದರಲ್ಲಿ ಆಯಾಸ ಸಾಮಾನ್ಯ ಲಕ್ಷಣವಾಗಿದ್ದು, ಇಎನ್​ಟಿ ಸಮಸ್ಯೆಗಳಾದ ವಾಸನೆ ಗ್ರಹಿಕೆ ಕಳೆದುಕೊಳ್ಳುವುದು, ತಲೆ ಸುತ್ತು, ಉಸಿರಾಟದ ಸಮಸ್ಯೆ ಮತ್ತು ಗಂಟಲು ನೋವು ಸೇರಿದೆ.

ಇದು ಜೀವನದ ಪ್ರತಿಯೊಂದರ ಮೇಲೆ ಕೂಡ ಪರಿಣಾಮ ಹೊಂದಿದೆ. ದೈನಂದಿನ ಕಾಳಜಿಯಾದ ವೈಯಕ್ತಿಕ ಶುಚಿತ್ವದಿಂದ ಲೈಂಗಿಕ ನಿರಾಸಕ್ತಿ, ಸಂಬಂಧಗಳ ಹಾಳಾಗುವಿಕೆ ಕೂಡ ಇದರಲ್ಲಿದೆ. ಕ್ರಿಸ್ಮಸ್​ ಸಮಯ ವಿಶೇಷವಾಗಿ ಸಂಕಷ್ಟದ ಸಮಯವಾಗಿದೆ. ನಮ್ಮ ಬಹುತೇಕ ಸಂಭ್ರಮಗಳು ವಾಸನೆ ಮತ್ತು ರುಚಿ ಮೇಲೆ ಆಧಾರಿತವಾಗಿವೆ. ಯುಕೆಯಲ್ಲಿ ದೀರ್ಘಕಾಲದ ಕೋವಿಡ್​ ಬೆಳವಣಿಗೆ ಸಮಸ್ಯೆಯಾಗಿದ್ದು, ವಾಸನೆ-ರುಚಿ ಕಳೆದುಕೊಳ್ಳುತ್ತಿರುವರತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ಫಿಲ್ಪೊಟ್​​.

ಇದನ್ನೂ ಓದಿ: ಜಗತ್ತಿನಲ್ಲಿ ವೈರಸ್​ ಉಲ್ಬಣ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ABOUT THE AUTHOR

...view details