ಕರ್ನಾಟಕ

karnataka

ETV Bharat / sukhibhava

ವಾಸನೆ ಕಳೆದುಕೊಳ್ಳುವುದು ಈ ರೋಗದ ಸೂಚಕವೂ ಹೌದು! - ಅಲ್ಝೈಮರ್​ ಹೊಂದಿರುವ ರೋಗಿಗಳನ್ನು ಪತ್ತೆ

ಕೋವಿಡ್​ ಸೇರಿದಂತೆ ಅನೇಕ ಸೋಂಕಿನ ಸಂದರ್ಭದಲ್ಲಿ ವಾಸನೆ ನಷ್ಟ ಅನುಭಿಸುತ್ತೇವೆ. ಆದರೆ, ಅದಕ್ಕೆ ಮೀರಿದ ಮತ್ತೊಂದು ರೋಗದ ಚಿಹ್ನೆ ಕೂಡ ಇದಾಗಿದೆ.

Loss of smell is also an indicator of this disease
Loss of smell is also an indicator of this disease

By

Published : Jul 29, 2023, 1:44 PM IST

ನ್ಯೂಯಾರ್ಕ್​: ವಾಸನೆ ಕಳೆದುಕೊಳ್ಳುವ ಸಾಮರ್ಥ್ಯವನ್ನು ಅನೇಕ ಸೋಂಕುಗಳ ಹಿನ್ನೆಲೆ ಅಧ್ಯಯನ ನಡೆಸಲಾಗಿದೆ. ಆದರೆ, ಇದೇ ಮೊದಲ ಬಾರಿ ಅದನ್ನು ಅಲ್ಝೈಮರ್​ ಹೊಂದಿರುವ ರೋಗಿಗಳನ್ನು ಪತ್ತೆ ಮಾಡಲಾಗಿದೆ. ಅಲ್ಝೈಮರ್ಯ್​ ಕಾಯಿಲೆಗೆ ಸಂಬಂಧಿಸಿದ ಪ್ರಬಲ ಜೀನ್​ ಹೊಂದಿರುವ ವ್ಯಕ್ತಿಗಳು ಇತರರಿಗಿಂತ ಬೇಗ ವಾಸನೆ ಗ್ರಹಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ಇದು ಭವಿಷ್ಯದಲ್ಲಿ ಅರಿವಿನ ಕೊರತೆ ಉಂಟಾಗುವ ಆರಂಭಿಕ ಚಿಹ್ನೆಯಾಗಿರಬೇಹು ಎಂದು ಅಧ್ಯಯನ ತಿಳಿಸಿದೆ.

ಈ ಕುರಿತು ನ್ಯೂರಾಲಜಿಯ ಆನ್​ಲೈನ್​ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಆಲ್ಝಮೈರ್​​ ಹೊಂದಿರುವವರಲ್ಲಿ ಜೀನ್​ ರೂಪಾಂತರವನ್ನು APOE e4 ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ ಅರಿವಿನ ಕ್ಷೀಣತೆ, ನೆನಪಿನ ಸಾಮರ್ಥ್ಯದ ಕೊರತೆ ಅನುಭವಿಸುವ ಜನರ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚಲು ವಾಸನೆ ಪರಿಹಾರ ಉಪಯುಕ್ತವಾಗಿದೆ ಎಂದು ಚಿಕಾಗೋ ವಿಶ್ವವಿದ್ಯಾಲಯದ ಮ್ಯಾಥ್ಯೂ ಎಸ್​ ಗುಡ್​ಸ್ಮಿತ್​ ತಿಳಿಸಿದರು.

ಈ ಅಧ್ಯಯನವೂ ಭವಿಷ್ಯದಲ್ಲಿ ಆಲ್ಝಮೈರ್​​ ಸಮಸ್ಯೆ ಹೊಂದಿರುವವರ ಅಪಾಯವನ್ನು ನಿರ್ಧರಿಸಲು ಸಹಾಯ ಮಾಡಿದರೂ ಸಹ, ಈ ಸಂಬಂಧ ಹೆಚ್ಚಿನ ಅಧ್ಯಯನದ ಅಗತ್ಯ ಇದೆ. ಇದು ಸಮಸ್ಯೆ ಆರಂಭವನ್ನು ಪತ್ತೆ ಹಚ್ಚಲು ಸಹಾಯವಕಾಗುವ ಗುರಿ ಹೊಂದಲಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಈ ಕುರಿತು ಐದು ವರ್ಷಗಳ ಕಾಲ ಮಧ್ಯಂತರ ಪರೀಕ್ಷೆ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ 865 ಮಂದಿ ಭಾಗಿಯಾಗಿದ್ದರು. ಭಾಗಿದಾರರ ವಾಸನೆ ಪ್ರಜ್ಞೆಯನ್ನು ಸಮೀಕ್ಷೆ ಮೂಲಕ ಪತ್ತೆ ಮಾಡಲಾಗಿದ್ದು, ಇದು ಅವರ ವಾಸನೆ ಗ್ರಹಿಕೆ ಸಾಮರ್ಥ್ಯ ಮತ್ತು ಯಾವ ವಾಸನೆ ಗ್ರಹಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ ಎಂದು ಪತ್ತೆ ಮಾಡಲಾಗಿದೆ.

ಇದೇ ವೇಳೆ ಐದು ವರ್ಷದ ಈ ಪರೀಕ್ಷೆ ಅವಧಿಯಲ್ಲಿ ಜನರ ಆಲೋಚನೆ ಮತ್ತು ಸ್ಮರಣೆ ಕೌಶಲ್ಯವನ್ನು ಎರಡು ಬಾರಿ ಪರೀಕ್ಷೆ ನಡೆಸಲಾಗಿದೆ. ಡಿಎನ್​ಎ ಮಾದರಿಯಲ್ಲಿ ಯಾವ ಜೀನ್​ ಕಾರಣದಿಂದ ಜನರಲ್ಲಿ ಆಲ್ಝಮೈರ್​ ಕಾರಣವಾಗುತ್ತಿದೆ ಎಂಬುದನ್ನು ಪತ್ತೆ ಮಾಡಲು ಮಾಹಿತಿ ನೀಡಲಾಗಿದೆ.

ಆಲ್ಝಮೈರ್​ ಜೀನ್​ ಹೊಂದಿರುವವರಲ್ಲಿ ಇತರೆ ಸಾಮಾನ್ಯ ಜೀನ್​ ಜನರಿಗಿಂತ ವಾಸನೆ ಪತ್ತೆ ಮಾಡುವ ಸಾಮರ್ಥ್ಯ ಶೇ 37ರಷ್ಟು ಕಡಿಮೆ ಇದೆ ಎಂದು ತೋರಿಸಿದೆ. ಈ ಜೀನ್​ ವಾಹಕಗಳು 65ರಿಂದ 69ನೇ ವಯಸ್ಸಿನಲ್ಲಿ ವಾಸನೆ ಸಾಮರ್ಥ್ಯವನ್ನು ಕಡಿಮೆ ಮಟ್ಟದಲ್ಲಿ ಪತ್ತೆ ಹಚ್ಚಿದೆ.

ಅಧ್ಯಯನದ ಆರಂಭದಲ್ಲಿ ಎರಡು ಗುಂಪಿನಲ್ಲಿ ವ್ಯಕ್ತಿಗಳ ಆಲೋಚನೆ ಮತ್ತು ನೆನಪಿನ ಸಾಮರ್ಥ್ಯ ಒಂದೇ ಆಗಿತ್ತು. ಆಲ್ಜಮೈರ್​ ಜೀನ್​ ಭಿನ್ನತೆ ಹೊಂದಿರುವವರು ಇತರೆ ಜನರಿಂತ ವೇಗವಾಗಿ ಸ್ಮರಣೆಯ ಕ್ಷೀಣತೆ ಅನುಭವಿಸಿದರು. ಈ ಅಧ್ಯಯನವು ನ್ಯೋರೋ ಡಿಜೆನರೇಶನ್​ ಮೂಲಕ ವಾಸನೆ ಪಾತ್ರವನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನ ಕಾರ ಗುಡ್​ಸ್ಮಿತ್​ ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ ತೀವ್ರ ಬುದ್ಧಿ ಮಾಂದ್ಯತೆ ಹೊಂದಿರುವ ಜನರನ್ನು ಭಾಗವಾಗಿಸಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ನೋವು ಕಡಿಮೆ ಮಾಡಲು ಈ ಮುನ್ನೆಚ್ಚರಿಕೆ ವಹಿಸಿ..

ABOUT THE AUTHOR

...view details