ಇತ್ತೀಚಿನ ದಿನಗಳಲ್ಲಿ ತೂಕ ನಿರ್ವಹಣೆ ಬಗ್ಗೆ ಯುವತಿಯರಿಗೆ ಎಲ್ಲಿಲ್ಲದ ಕಾಳಜಿ ಹೆಚ್ಚಿದೆ. ಇದಕ್ಕಾಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಇದೇ ಕಾರಣಕ್ಕೆ ಕೆಲವು ಯುವತಿಯರು ಅನೇಕ ವಿಧದ ಡಯಟ್ ಮೊರೆ ಹೋಗುತ್ತಾರೆ. ಈ ಮೂಲಕ ತಮ್ಮಿಷ್ಟದ ಆಹಾರ ಮಾತ್ರವಲ್ಲದೇ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನಿರಾಕರಿಸುತ್ತಾರೆ. ಎಣ್ಣೆ, ಸಿಹಿ ತಿನಿಸು ದೂರ ಇಟ್ಟು ಕಟ್ಟು ನಿಟ್ಟಿನ ಆಹಾರ ಪದ್ಧತಿ ಪಾಲನೆ ಕೂಡ ಮಾಡುತ್ತಾರೆ. ಆದರೆ, ಇದರಿಂದಾಗಿ ದೇಶಕ್ಕೆ ಬೇಕಾದ ಅಗತ್ಯ ಶಕ್ತಿ ಕೊರತೆಯಿಂದ ಬಳಲುವಂತೆ ಆಗುತ್ತದೆ. ಕಡೆಗೆ ಅನಿವಾರ್ಯವಾಗಿ ಈ ಡಯಟ್ಗೆ ಗುಡ್ಬೈ ಹೇಳುತ್ತಾರೆ. ಬಾಯಿ ಕಟ್ಟಿ ತೂಕ ಇಳಿಸುವ ಬದಲಾಗಿ ಆರಾಮದಾಯಕವಾಗಿ ನೀವಿಷ್ಟ ಪಡುವಂತೆ ತೂಕ ಇಳಿಸುವುದರಿಂದ ಸಾಕಷ್ಟು ಪ್ರಯೋಜನ ಇದೆ. ಇದರಿಂದ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶ ಮತ್ತು ಪ್ರೋಟಿನ್ಗಳು ಲಭ್ಯವಾಗುತ್ತದೆ. ಅಂತಹ ಆಹಾರ ಪದ್ಧತಿ ಕುರಿತು ತಜ್ಞರು ನೀಡಿದ ಸಲಹೆಗಳು ಇಲ್ಲಿವೆ.
ಕ್ಯಾಲೋರಿಯೂ ಬೇಕು: ತೂಕ ಇಳಿಕೆಗೆ ಕ್ಯಾಲೋರಿಗಳ ಏಣಿಕೆ ಕೂಡ ಅತಿ ಮುಖ್ಯವಾಗುತ್ತದೆ ಎಂದು ಅನೇಕ ಯುವತಿಯರ ನಂಬಿಕೆ. ಇದೇ ಕಾರಣಕ್ಕೆ ಅವರು ಎಣ್ಣೆಯುಕ್ತ ಪದಾರ್ಥಗಳನ್ನು ಹೊರಗೆ ಇಡುತ್ತದೆ. ನೀವು ಕೆಲಸ ಮಾಡಲು ನಿಮ್ಮ ದೇಹಕ್ಕೆ ಶಕ್ತಿ ಅವಶ್ಯಕತೆ ಹೆಚ್ಚಿದೆ. ಈ ಹಿನ್ನೆಲೆ ದೇಹಕ್ಕೆ ಅಗತ್ಯವಾದ ಕ್ಯಾಲೋರಿ ಮತ್ತು ಅವಶ್ಯ ಪೋಷಕಾಂಶಗಳು ಬೇಕಾಗುತ್ತದೆ ಎಂಬುದನ್ನು ಮರೆಯಬಾರದು.
ನೀರಿನಾಂಶ ಮರೆಯದಿರಿ: ದೇಹದ ತೂಕ ಕಡಿಮೆಯಾಗುವುದು ಕೇವಲ ಬೆವರು ಸುರಿದಾಗ ಮಾತ್ರ ಎಂಬುದನ್ನು ತಿಳಿಯಬೇಡಿ. ದೇಹಕ್ಕೆ ಅಗತ್ಯ ಪ್ರಮಾಣದ ನೀರು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಕ್ಯಾಲೋರಿಯ ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್ ಮತ್ತು ರವೆ ಗಂಜಿಯಂತಹ ಪದಾರ್ಥಗಳನ್ನು ಸೇವಿಸಿ. ಇದು ದೇಹಕ್ಕೆ ತಕ್ಷಣವಾದ ಶಕ್ತಿ ನೀಡುತ್ತದೆ. ಇದನ್ನು ಆಗಾಗ್ಗೆ ತೆಗೆದುಕೊಳ್ಳಬೇಕು ಎಂಬುದನ್ನು ಮರೆಯಬೇಡಿ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ, ಶಕ್ತಿಯೂ ಕುಸಿಯುತ್ತದೆ.