ನವದೆಹಲಿ: ಮದುವೆಗೆ ಮುಂಚೆ ನಡೆಸುವ ಜೋಡಿಗಳ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಇದೀಗ ಸಾಮಾನ್ಯವಾಗಿದ್ದು, ಕಡ್ಡಾಯ ಎಂಬಂತೆ ಆಗಿದೆ. ಮದುವೆಯ ದಿನ ಜೋಡಿಗಳು ಅಂದುಕೊಂಡ ರೀತಿಯಲ್ಲಿ ಫೋಟೋಗಳು ಬರುವುದಿಲ್ಲ. ಜೊತೆಗೆ ಜೋಡಿಗಳು ವಿಶೇಷ ಪರಿಕಲ್ಪನೆಯೊಂದಿಗೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಮದುವೆ ದಿನ ಈಡೇರುವುದಿಲ್ಲ. ಇದೇ ಕಾರಣಕ್ಕೆ ಮದುವೆಗೆ ಮುಂಚೆ ಅಂದುಕೊಂಡ ರೀತಿಯಲ್ಲಿ ಪರಿಕಲ್ಪನೆಯಲ್ಲಿ ಫೋಟೋಶೂಟ್ಗಳು ಮಾಡಿಸುವ ಟ್ರೆಂಡ್ ಇದೀಗ ಬಂದಿದೆ. ಇದೇ ಕಾರಣಕ್ಕೆ ವಿಭಿನ್ನವಾದ ಥೀಮ್, ಸ್ಥಳ ಅನ್ವೇಷಣೆ ಕೂಡ ನಡೆಯುತ್ತದೆ.
ಪ್ರೀ ವೆಡ್ಡಿಂಗ್ನಲ್ಲಿ ಪ್ರಮುಖವಾಗುವ ವಿಷಯಗಳಲ್ಲಿ ಮೊದಲನೆಯದು ಸ್ಥಳಗಳು. ಈ ಸ್ಥಳಗಳಿಗೆ ಹಲವು ಕಾಲ ಹುಡುಕಾಟ ನಡೆಯುತ್ತದೆ. ಮನೋಹರ ಸ್ಥಳಗಳ ಎದುರು ತೆಗೆದ ಫೋಟೋಗಳು ಅದ್ಭುತವಾಗಿ ಬರುತ್ತದೆ. ಇದೇ ಕಾರಣಕ್ಕೆ ಇಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಹೊರತಾಗಿ ನವ ಜೋಡಿ, ಫೋಟೋಗ್ರಾಫರ್ ಸಿಬ್ಬಂದಿಗಳನ್ನು ಕಾಣಬಹುದಾಗಿದೆ. ಸಾಮಾನ್ಯ ಫೋಟೋಗಳಿಗಿಂತ ಅದ್ಭುತವಾಗಿ ಫೋಟೋ ಶೂಟ್ ನಡೆಸಬೇಕು ಎಂದರೆ ಭಾರತದಲ್ಲಿ ಅದ್ಭುತ ಸ್ಥಳಗಳಿವೆ. ಅದರ ಮುಂದೆ ಪ್ರಣಯ ಹಕ್ಕಿಗಳಂತೆ ಫೋಟೋ ನೀಡುವುದು ಅನೇಕರ ಇಚ್ಛೆ. ಅದರಂತೆ ಫ್ರಿ ವೆಡ್ಡಿಂಗ್ಗೆ ಖ್ಯಾತಿಗೊಂಡಿರುವ ಸ್ಥಳಗಳು ಇವಾಗಿವೆ.
ಜೈಪುರದ ಪನ್ನಾ ಮೀನಾ ಕಾ ಕುಂಡ್: ಜೈಪುರದ ಐತಿಹಾಸಿಕ ಅರಮನೆಗಳು ಫೋಟೋಶೂಟ್ಗೆ ಅತ್ಯುತ್ತಮ ಸ್ಥಳಗಳಾಗಿವೆ. ಇಲ್ಲಿನ ಐತಿಹಾಸಿಕ ಮೆಟ್ಟಿಲ ಬಾವಿ ಈ ಪನ್ನಾ ಮೀನಾ ಕಾ ಕುಂಡ್ ಆಗಿದೆ. ಫೋಟೋ ಹಿಂಬಂದಿಯ ಬ್ಯಾಗ್ಗ್ರೌಂಡ್ಗೆ ಬೇಕಾಗುವ ಬಣ್ಣಗಳನ್ನು ಈ ಸ್ಥಳಗಳಲ್ಲಿ ಪಡೆಯಬಹುದಾಗಿದೆ.
ತಾಜ್ ಮಹಲ್, ಆಗ್ರಾ: ಪ್ರೀತಿಯ ಸಂಕೇತವಾಗಿರುವ ತಾಜ್ ಮಹಲ್ ಮುಂದೆ ಫೋಟೋಗೆ ಫೋಸ್ ನೀಡಬೇಕು ಎಂಬುದು ಬಹುತೇಕ ಜೋಡಿಗಳ ಕನಸಾಗಿರುತ್ತದೆ. ಜಗತ್ತಿನ ಏಳು ಅದ್ಬುತಗಳಲ್ಲಿ ಒಂದಾಗಿರುವ ಈ ಪ್ರೀತಿಯ ತಾಣ ಸಾಂಪ್ರದಾಯಿಕ ಜೊತೆಗೆ ರೋಮ್ಯಾಂಟಿಕ್ ಅನುಭವ ನೀಡುತ್ತದೆ.