ವಾಷಿಂಗ್ಟನ್: ಇಂದು ಹದಿ ಹರೆಯದ ಮಕ್ಕಳ ಅತಿ ಹೆಚ್ಚು ಕಾಲವನ್ನು ಸ್ಮಾರ್ಟ್ಫೋನ್ನೊಂದಿಗೆ ಕಳೆಯುತ್ತಿದ್ದಾರೆ. ಈ ವೇಳೆ ಅವರು ಕೂರುವ ಭಂಗಿಯಿಂದ ಬೆನ್ನು ನೋವು ಮತ್ತಿತರ ಸಮಸ್ಯೆಗೆ ಗುರಿಯಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಎಫ್ಎಪಿಇಎಸ್ಪಿ ಧನ ಸಹಾಯದಿಂದ ಈ ಅಧ್ಯಯನ ನಡೆಸಲಾಗಿದೆ. ಈ ಕುರಿತು ಸೈಂಟಿಫಿಕ್ ಜರ್ನಲ್ ಹೆಲ್ತ್ಕೇರ್ನಲ್ಲಿ ಪ್ರಕಟವಾಗಿದೆ. ಮೊಬೈಲ್ ವೀಕ್ಷಣೆಯ ಭಂಗಿ ಬೆನ್ನು ಮೂಳೆ ಅಪಾಯಕ್ಕೆ ಗುರಿ ಮಾಡುತ್ತದೆ. ಉದಾಹರಣೆಗೆ ದಿನಕ್ಕೆ ಮೂರು ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್ ವೀಕ್ಷಣೆ ಮಾಡುವುದರಿಂದ ಕಣ್ಣುಗಳು ಮತ್ತು ಮಲಗುವ ಭಂಗಿ ಮೇಲೆ ಪರಿಣಾಮ ಬೀರುತ್ತದೆ.
ಎದೆಗೂಡಿನ ಬೆನ್ನು ಹುರಿ ನೋವಿನ (ಟಿಎಸ್ಸಿ) ಮೇಲೆ ಈ ಅಧ್ಯಯನ ಗುರಿಯಾಗಿಸಲಾಗಿದೆ. ಈ ಎದೆಗೂಡಿನ ಬೆನ್ನು ಹುರಿ ಎದೆಯ ಹಿಂದೆ ಇರುತ್ತದೆ. ಇದು ಭಜದ ಮೂಳೆ ಮತ್ತು ಕತ್ತಿನ ಕೆಳಗಿನಿಂದ ಸೊಂಟದ ಬೆನ್ನುಮೂಳೆಯ ಆರಂಭದವರೆಗೆ ವಿಸ್ತರಿಸುತ್ತದೆ. ಈ ಅಧ್ಯಯನಕ್ಕಾಗಿ ಸಾವೊ ಪಾಲೊ ರಾಜ್ಯದ ಮಧ್ಯ ವಯಸ್ಸಿನ ಮಕ್ಕಳ ಮೇಲೆ ಅಂದರೆ 14 ರಿಂದ 18 ವರ್ಷದವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಸುಮಾರು 1,628 ಮಕ್ಕಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, 2018ರಲ್ಲಿ 1,393 ಮಂದಿ ಪ್ರಶ್ನಾವಳಿಗಳನ್ನು ಪೂರ್ಣ ಮಾಡಿದ್ದಾರೆ. ವಿಶ್ಲೇಷಣೆಯಲ್ಲಿ ಒಂದು ವರ್ಷ ಶೇ 38.4ರಷ್ಟು ಹರಡುವಿಕೆ ಮತ್ತು ಒಂದು ವರ್ಷ 10.1ರಷ್ಟು ಘಟನೆಗಳಲ್ಲಿ ಭಾರ ಗಣನೆಗೆ ಬಂದಿದೆ. ಅದರಲ್ಲೂ ಹುಡುಗರಿಗಿಂತ ಹುಡುಗಿಯರು ಹೆಚ್ಚು ಪರಿಣಾಮಕ್ಕೆ ಗುರಿಯಾಗಿದ್ದಾರೆ.
ಅಪಾಯದ ಅಂಶ: ಜಗತ್ತಿನಾದ್ಯಂತ ಟಿಎಸ್ಬಿ ಎಂಬುದು ವಿಭಿನ್ನ ವಯೋಮಾನದ ಗುಂಪಿನವರಿಗೆ ಸಾಮಾನ್ಯವಾಗಿದೆ. ಇದು ವಯಸ್ಕರಲ್ಲಿ ಶೇ 15ರಿಂದ 35 ರಷ್ಟು ಹರಡಿದರೆ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಶೇ 13ರಿಂದ 35ರಷ್ಟು ಹರಡುತ್ತದೆ. ಕೋವಿಡ್ ಸಮಯದಲ್ಲಿ ಹೆಚ್ಚಿನ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಈ ಸಮಸ್ಯೆಯನ್ನು ಹೆಚ್ಚಿಸಿದೆ. ಟಿಎಸ್ಪಿ ದೈಹಿಕ, ಶಾರೀರಿಕ, ಮಾನಸಿಕ ಮತ್ತು ನಡವಳಿಕೆ ಅಪಾಯ ಹೊಂದಿದೆ. ಬೆನ್ನುಮೂಳೆಯ ಆರೋಗ್ಯದ ಮೇಲೆ ದೈಹಿಕ ಚಟುವಟಿಕೆ, ಕುಳಿತುಕೊಳ್ಳುವ ಅಭ್ಯಾಸಗಳು ಮತ್ತು ಮಾನಸಿಕ ಅಸ್ವಸ್ಥತೆಗಳ ಪರಿಣಾಮ ಹೊಂದಿದೆ.