ದೇಹದಲ್ಲಿನ ಕಡಿಮೆ ಮಟ್ಟದ ವಿಟಮಿನ್ ಡಿ ದೀರ್ಘ ಕೋವಿಡ್ ಅಪಾಯ ಹೆಚ್ಚಿಸುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ. ಕೋವಿಡ್ ಸೋಂಕಿನ ಬಳಿಕ ವ್ಯಕ್ತಿಯ ವಿಟಮಿನ್ ಡಿ ಮಟ್ಟ ಪರಿಶೀಲನೆ ನಡೆಸಿದ ಬಳಿಕ ಫಲಿತಾಂಶದ ಸಲಹೆ ನೀಡಲಾಗಿದೆ. ಕೋವಿಡ್ ರೋಗಿಗಳಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇದ್ದರೆ ಅವರಲ್ಲಿ ದೀರ್ಘಾವಧಿ ಕೋವಿಡ್ ಅಪಾಯ ಅಭಿವೃದ್ಧಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ವಿಟಮಿನ್ ಡಿ ಪೂರಕಗಳು ರೋಗ ಲಕ್ಷಣಗಳನ್ನು ಸುಧಾರಿಸಬಹುದೇ/ ಈ ಅಪಾಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ ಎಂಬುದಿನ್ನೂ ತಿಳಿದಿಲ್ಲ ಎಂದು ಅಧ್ಯಯನದ ತನಿಖಾಧಿಕಾರಿ ಪ್ರೊಫೆಸರ್ ಆಂಡ್ರಿಯಾ ಗಿಯುಸ್ಟಿನಾ ತಿಳಿಸಿದ್ದಾರೆ.
100 ರೋಗಿಗಳ ಅಧ್ಯಯನ: ಕೋವಿಡ್ ಸೋಂಕಿಗೆ ತುತ್ತಾದ ಬಳಿಕ ಚೇತರಿಕೆ ಕಾಣದೇ 12 ವಾರಗಳ ಕಾಲ ಉಳಿಯುವ ಸೋಂಕನ್ನು ದೀರ್ಘಾವಧಿಯ ಸೋಂಕು ಎಂದು ಗುರುತಿಸಲಾಗುವುದು. ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶೇ 50-70ರಷ್ಟು ಮಂದಿಯಲ್ಲಿ ಇದು ಕಂಡುಬಂದಿದ್ದು, ಪರಿಸ್ಥಿತಿ ಸ್ಪಷ್ಟವಾಗಿ ತಿಳಿದಿಲ್ಲ ಎಂದಿದ್ದಾರೆ. ಅಧ್ಯಯನವನ್ನು ದಿ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರಿನೊಲಾಜಿ ಮತ್ತು ಮೆಟಾಬೊಲಿಸಂನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನಕ್ಕಾಗಿ 51-70 ವರ್ಷದ ವಯಸ್ಸಿನ ದೀರ್ಘ ಕೋವಿಡ್ 100 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಇದನ್ನು ಓದಿ:ಬೆನ್ನು, ಭುಜ ನೋವಿಗೆ ಕಾರಣ ಕೆಟ್ಟ ಭಂಗಿ
ಆಸ್ಪತ್ರೆಗೆ ದಾಖಲಾದಾಗ ಮತ್ತು ಡಿಸ್ಚಾರ್ಜ್ ಆಗಿ ಆರು ತಿಂಗಳ ಬಳಿಕ ವಿಟಮಿನ್ ಡಿ ಮಟ್ಟವನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಇತರರಿಗಿಂತ ದೀರ್ಘ ಕೋವಿಡ್ ಹೊಂದಿರುವವರಲ್ಲಿ ವಿಟಮಿನ್ ಡಿ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ. ಈ ಫಲಿತಾಂಶ ಆರು ತಿಂಗಳ ಫಾಲೋ - ಅಪ್‌ನಲ್ಲಿ ಗೊಂದಲ, ಮರೆವು ಮತ್ತು ಕಳಪೆ ಏಕಾಗ್ರತೆಯಂತಹ ಬ್ರೈನ್ ಫಾಗ್ನಂತ ರೋಗಲಕ್ಷಣ ಹೊಂದಿರುವವರಲ್ಲಿ ಕಂಡುಬಂದಿದೆ.
ವಿಟಮಿನ್ ಡಿ ಪರಿಣಾಮ: ಅಧ್ಯಯನಕ್ಕೆ ಯಾವುದೇ ಮೂಳೆ ಸಮಸ್ಯೆ ಹೊಂದಿರದ ಕೇವಲ ಕೋವಿಡ್ ಸೋಂಕಿತರನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಕೋವಿಡ್ ಹೆಚ್ಚು ನಿಯಂತ್ರಿತ ಸ್ವಭಾವವು ದೀರ್ಘ ಕೋವಿಡ್‌ನಲ್ಲಿ ವಿಟಮಿನ್ ಡಿ ಕೊರತೆ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಡಿ ಕೊರತೆ ಮತ್ತು ದೀರ್ಘ ಕೋವಿಡ್ ನಡುವೆ ಸಂಪರ್ಕವಿದೆ ಎಂದು ಗಿಯುಸ್ಟಿನಾ ತಿಳಿಸಿದ್ದಾರೆ.
ವಿಟಮಿನ್ ಡಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದು ಸೇರಿದಂತೆ ದೇಹದ ಮೇಲೆ ಇನ್ನಿತರ ಪರಿಣಾಮವನ್ನು ಬೀರುತ್ತದೆ. ವಿಟಮಿನ್ ಡಿ ಇಮ್ಯೂನೊ ಚೆಕ್ಪಾಯ್ಡ್ ಇನ್ಹಬಿಟರ್ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲು ತಂಡವು ಸುಧಾರುತ ಮೆಲನೊಮ ಜೊತೆ 200 ರೋಗಿಗಳ ರಕ್ತಗಳ ಪರೀಕ್ಷೆಯನ್ನು 12 ವಾರಗಳ ಕಾಲ ಇಮ್ಯೂನೊಥೆರಪಿ ಚಿಕಿತ್ಸೆಗಿಂತ ಮುಂಚೆ ಮತ್ತು ನಂತರ ನಡೆಸಲಾಗಿತ್ತು
ಇದನ್ನೂ ಓದಿ: ಅಲ್ಝೈಮರ್ ಪ್ರೋಟಿನ್ ಮಟ್ಟ ಕುಗ್ಗಿಸುತ್ತದೆ ನಿದ್ರೆ ಮಾತ್ರೆ; ಅಧ್ಯಯನದಲ್ಲಿ ಪತ್ತೆ