ಮಕ್ಕಳು ಅನುಭವಿಸುವ ದೀರ್ಘಾವಧಿಯ ಕೋವಿಡ್ ಲಕ್ಷಣಗಳು ಕಾಲಾಂತರದಲ್ಲಿ ಬದಲಾಗುತ್ತವೆ. ಕೆಲವು ಮಕ್ಕಳಲ್ಲಿ ಮೂಲ ರೋಗ ಲಕ್ಷಣಗಳು ಕ್ಷೀಣಿಸಿದರೆ, ಅವರಲ್ಲಿ ಹೊಸ ಲಕ್ಷಣಗಳು ಕಂಡುಬಂದಿವೆ ಎಂದು ವಿಶ್ವದ ಅತಿದೊಡ್ಡ ಅಧ್ಯಯನ ವರದಿ ಬಹಿರಂಗಪಡಿಸಿದೆ. ಮಕ್ಕಳಲ್ಲಿ ಭಾವನೆಯನ್ನು ವ್ಯಕ್ತಪಡಿಸಲು ತೊಂದರೆ, ನಡವಳಿಕೆಯಲ್ಲಿ ವ್ಯತ್ಯಾಸ ಹಾಗು ಆಯಾಸ ಸೇರಿದಂತೆ ಜೀವನ ಶೈಲಿಯಲ್ಲಿನ ಬದಲಾವಣೆಯನ್ನು ಕಾಣಬಹುದಾಗಿದೆ.
6 ರಿಂದ 12 ತಿಂಗಳು ಅಂದರೆ ಸೆಪ್ಟಂಬರ್ 2020 ರಿಂದ ಮಾರ್ಚ್ 2021ರ ನಡುವೆ ಪಿಸಿಆರ್ ಪರೀಕ್ಷೆಗೆ ಒಳಪಟ್ಟ 11 ರಿಂದ 17 ವರ್ಷದ ಮಕ್ಕಳ ಆರೋಗ್ಯವನ್ನು ಸಂಶೋಧಕರು ವಿಚಾರಿಸಿದ್ದಾರೆ. ಅಲ್ಲದೇ ಈ ಸಮಯದಲ್ಲಿ ಯಾವುದೆಲ್ಲಾ ರೋಗಲಕ್ಷಣಗಳು ಕಂಡುಬಂದಿವೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಉಸಿರಾಟದ ತೊಂದರೆ, ದಣಿವು ಸೇರಿದಂತೆ 21 ರೋಗಲಕ್ಷಣಗಳು ಕಂಡುಬಂದಿವೆ.