ಕರ್ನಾಟಕ

karnataka

ETV Bharat / sukhibhava

long & healthy life; ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಲ್ಲದು ಟೌರಿನ್: ಸಂಶೋಧನಾ ವರದಿ - ದೀರ್ಘ ಮತ್ತು ಆರೋಗ್ಯಕರ ಜೀವನ

ಮಾನವರಲ್ಲಿ ವಯಸ್ಸಾಗುವಿಕೆಯನ್ನು ನಿಧಾನಗೊಳಿಸಬಲ್ಲ ಪೌಷ್ಟಿಕಾಂಶವೊಂದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಟೌರಿನ್ ಹೆಸರಿನ ಪೌಷ್ಟಿಕಾಂಶದಿಂದ ವಯಸ್ಸಾಗುವಿಕೆಯನ್ನು ಮುಂದೂಡಬಹುದು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

Indian study finds nutrient key to delay ageing
Indian study finds nutrient key to delay ageing

By

Published : Jun 11, 2023, 7:29 PM IST

ನವದೆಹಲಿ : ದೇಹದಲ್ಲಿ ಉತ್ಪತ್ತಿಯಾಗುವ ಹಾಗೂ ಅನೇಕ ಆಹಾರ ಪದಾರ್ಥಗಳಲ್ಲಿರುವ ಟೌರಿನ್ ಹೆಸರಿನ ಪೌಷ್ಟಿಕಾಂಶದ ಕೊರತೆಯು ಸಸ್ತನಿಗಳಲ್ಲಿ ವಯಸ್ಸಾಗುವಿಕೆಯನ್ನು ಕ್ಷಿಪ್ರಗೊಳಿಸುತ್ತದೆ ಎಂದು ಭಾರತೀಯ ಸಂಶೋಧಕರ ನೇತೃತ್ವದ ಅಧ್ಯಯನದಲ್ಲಿ ಕಂಡು ಬಂದಿದೆ. ಅಂದರೆ ಟೌರಿನ್ ಪೌಷ್ಟಿಕಾಂಶವು ಜೀವನಕ್ಕೆ ಅಮೃತ ಸಮಾನವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. Science ಹೆಸರಿನ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಟೌರಿನ್ ಪೂರಕ ಪೌಷ್ಟಿಕಾಂಶಗಳು ಹುಳುಗಳು, ಇಲಿಗಳು ಮತ್ತು ಮಂಗಗಳಲ್ಲಿ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂದು ತಿಳಿಸಲಾಗಿದೆ.

ಟೌರಿನ್ ಹೆಣ್ಣು ಇಲಿಗಳ ಸರಾಸರಿ ಜೀವಿತಾವಧಿಯನ್ನು 12 ಪ್ರತಿಶತ ಮತ್ತು ಪುರುಷ ಇಲಿಗಳಲ್ಲಿ 10 ಪ್ರತಿಶತದಷ್ಟು ಹೆಚ್ಚಿಸಿದೆ ಎಂದು ಇಲಿಗಳ ಮೇಲೆ ಮಾಡಲಾದ ಪ್ರಯೋಗ ತೋರಿಸಿದೆ. ಟೌರಿನ್​​ನಿಂದ ಇಲಿಗಳ ಜೀವಿತಾವಧಿ ಮೂರರಿಂದ ನಾಲ್ಕು ತಿಂಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಇದನ್ನು ಮಾನವರಿಗೆ ಹೋಲಿಸಿದರೆ ಸುಮಾರು ಏಳು ಅಥವಾ ಎಂಟು ಮಾನವ ವರ್ಷಗಳಿಗೆ ಸಮನಾಗುತ್ತದೆ.

"ಕಳೆದ 25 ವರ್ಷಗಳಿಂದ ವಿಜ್ಞಾನಿಗಳು ನಮ್ಮನ್ನು ದೀರ್ಘಕಾಲ ಬದುಕಲು ಮಾತ್ರವಲ್ಲದೆ ಆರೋಗ್ಯವನ್ನು ಹೆಚ್ಚಿಸುವ ಅಂದರೆ ನಮ್ಮ ವೃದ್ಧಾಪ್ಯದಲ್ಲಿ ನಾವು ಆರೋಗ್ಯವಂತರಾಗಿ ಬದುಕಲು ಅಗತ್ಯವಾದ ಅಂಶಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ" ಎಂದು ನವದೆಹಲಿಯ ನ್ಯಾಷನಲ್ ಇನ್​​ಸ್ಟಿಟ್ಯೂಟ್ ಆಫ್ ಇಮ್ಯುನೊಲಾಜಿಯ ಮೆಟಾಬಾಲಿಕ್ ರಿಸರ್ಚ್ ಲ್ಯಾಬೋರೇಟರೀಸ್‌ನ ಪ್ರಮುಖ ಸಂಶೋಧಕ ವಿಜಯ್ ಯಾದವ್ ಹೇಳಿದ್ದಾರೆ.

"ಈ ಅಧ್ಯಯನವು ಟೌರಿನ್ ನಮ್ಮೊಳಗಿನ ಜೀವನದ ಅಮೃತವಾಗಿದೆ ಎಂದು ಸೂಚಿಸುತ್ತದೆ. ಅದು ನಮಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ" ಎಂದು ಕೊಲಂಬಿಯಾ ಯೂನಿವರ್ಸಿಟಿ ವಗೆಲೋಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್‌ನಲ್ಲಿ ಜೆನೆಟಿಕ್ಸ್ ಮತ್ತು ಡೆವಲಪ್‌ಮೆಂಟ್‌ನ ಸಹಾಯಕ ಪ್ರೊಫೆಸರ್ ಆಗಿರುವ ಯಾದವ್ ಹೇಳಿದರು.

ಮಾನವರಲ್ಲಿ ಟೌರಿನ್​ನ ಪ್ರಯೋಜನಗಳನ್ನು ದೃಢೀಕರಿಸಲು ಇನ್ನೂ ಹಲವಾರು ಕ್ಲಿನಿಕಲ್ ಪ್ರಯೋಗಗಳು ನಡೆಯಬೇಕಿವೆ. ಆದಾಗ್ಯೂ ಟೌರಿನ್ ಸಾಮರ್ಥ್ಯ ಹೊಂದಿದೆ ಎಂಬುದನ್ನು ಎರಡು ಪ್ರಯೋಗಗಳು ತೋರಿಸಿವೆ ಎಂದು ಸಂಶೋಧಕರು ಹೇಳಿದ್ದಾರೆ. ಮೊದಲನೆಯದರಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 12,000 ಯುರೋಪಿಯನ್ ವಯಸ್ಕರಲ್ಲಿ ಟೌರಿನ್ ಮಟ್ಟಗಳು ಮತ್ತು ಸರಿಸುಮಾರು 50 ಆರೋಗ್ಯ ನಿಯತಾಂಕಗಳ ನಡುವಿನ ಸಂಬಂಧವನ್ನು ಯಾದವ್ ಮತ್ತು ಅವರ ತಂಡವು ಅಧ್ಯಯನ ಮಾಡಿದೆ.

ಒಟ್ಟಾರೆಯಾಗಿ ಹೆಚ್ಚಿನ ಟೌರಿನ್ ಮಟ್ಟವನ್ನು ಹೊಂದಿರುವ ಜನರು ಆರೋಗ್ಯವಂತರಾಗಿದ್ದರು. ಇವರಲ್ಲಿ ಕಡಿಮೆ ಜನ ಟೈಪ್-2 ಮಧುಮೇಹ ಹೊಂದಿದ್ದರು. ಅಲ್ಲದೆ ಇವರಲ್ಲಿ ಬೊಜ್ಜು ಮಟ್ಟ, ಅಧಿಕ ರಕ್ತದೊತ್ತಡ ಮತ್ತು ಉರಿಯೂತ ಈ ಎಲ್ಲವೂ ಕಡಿಮೆಯಾಗಿದ್ದವು. "ಇವುಗಳು ಕಾರಣಗಳನ್ನು ಸ್ಥಾಪಿಸದ ಫಲಿತಾಂಶಗಳಾಗಿವೆ. ಆದರೆ ಫಲಿತಾಂಶಗಳು ಟೌರಿನ್ ಕೊರತೆಯು ಮಾನವರ ವಯಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳನ್ನು ಸ್ಥಿರವಾಗಿರಿಸಿವೆ" ಎಂದು ಯಾದವ್ ಹೇಳಿದರು.

ಎರಡನೇ ಅಧ್ಯಯನವು ಕ್ರೀಡಾಪಟುಗಳಲ್ಲಿ (ಸ್ಪ್ರಿಂಟರ್‌ಗಳು, ಓಟಗಾರರು ಮತ್ತು ನೈಸರ್ಗಿಕ ಬಾಡಿಬಿಲ್ಡರ್‌ಗಳು) ವ್ಯಾಯಾಮವು ಟೌರಿನ್ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ. "ಯಾವುದೇ ವ್ಯಕ್ತಿಯಿರಲಿ ವ್ಯಾಯಾಮದ ನಂತರ ಅವರೆಲ್ಲರಲ್ಲೂ ಟೌರಿನ್ ಮಟ್ಟಳ ಹೆಚ್ಚಾಗಿದೆ. ಅಂದರೆ ವ್ಯಾಯಾಮದಿಂದಾಗುವ ಆರೋಗ್ಯ ಪ್ರಯೋಜನಗಳಿಗೆ ಟೌರಿನ್ ಸಹ ಕಾರಣವಾಗಿರುವುದನ್ನು ಇದು ಸೂಚಿಸುತ್ತದೆ" ಎಂದು ಯಾದವ್ ಹೇಳಿದರು.

"ಟೌರಿನ್ ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ಉತ್ಪತ್ತಿಯಾಗುತ್ತದೆ. ಇದನ್ನು ಆಹಾರದ ಮೂಲಕ ನೈಸರ್ಗಿಕವಾಗಿ ಪಡೆಯಬಹುದು. ಇದು ಯಾವುದೇ ವಿಷಕಾರಿ ಪರಿಣಾಮಗಳನ್ನು ಹೊಂದಿಲ್ಲ. ವಯಸ್ಸಿನೊಂದಿಗೆ ಟೌರಿನ್ ಪ್ರಮಾಣ ಕಡಿಮೆಯಾಗುತ್ತದೆ, ಆದ್ದರಿಂದ ವೃದ್ಧಾಪ್ಯದಲ್ಲಿ ಟೌರಿನ್ ಅನ್ನು ತಾರುಣ್ಯದ ಮಟ್ಟಕ್ಕೆ ಮರುಸ್ಥಾಪಿಸುವುದು ಒಂದು ಭರವಸೆಯ ಕ್ರಮವಾಗಿದೆ" ಎಂದು ಯಾದವ್ ಹೇಳಿದರು.

ಇದನ್ನೂ ಓದಿ : Pakistan Political crisis ಸೇನೆಯ ಬೆಂಬಲ ಸಿಗದೆ ಇಮ್ರಾನ್​ ಖಾನ್​ಗೆ ಹತಾಶೆ: ಬಿಲಾವಲ್ ಭುಟ್ಟೊ ಆರೋಪ

ABOUT THE AUTHOR

...view details