ಪೆರುಗ್ವೆ: ಮಧುಮೇಹಿಗಳಲ್ಲಿ ಡಯಟ್, ವ್ಯಾಯಾಮ, ಧೂಮಪಾನ ಮತ್ತು ಖಿನ್ನತೆಗಿಂತ ಒಂಟಿತನ ಹೃದಯ ಸಮಸ್ಯೆಯ ಅಪಾಯವನ್ನು ಹೆಚ್ಚಿಸಲಿದೆ ಎಂದು ಸಂಶೋಧನೆ ತಿಳಿಸಿದೆ. ಯುರೋಪಿಯನ್ ಹಾರ್ಟ್ ಜರ್ನಲ್, ಎ ಜರ್ನಲ್ ಆಫ್ ದಿ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯೊಲಾಜಿಯಲ್ಲಿ ಈ ಕುರಿತು ಅಧ್ಯಯನ ಪ್ರಕಟಿಸಲಾಗಿದೆ. ಮಧುಮೇಹ ಹೊಂದಿರುವವರ ಹೃದಯದ ಆರೋಗ್ಯ ಕಾಪಾಡಲು ಗುಣಮಟ್ಟದ ಸಾಮಾಜಿಕ ಸಂಪರ್ಕ ಪ್ರಮುಖವಾಗುತ್ತದೆ ಎಂದು ಅಧ್ಯಯನಕಾರ ಪ್ರೊ ಲು ಕ್ವಿ ತಿಳಿಸಿದ್ದಾರೆ.
ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದಲ್ಲಿ ಒಂಟಿತನದ ವಿಚಾರವನ್ನು ಕಡೆಗಣಿಸಬಾರದು. ಮಧುಮೇಹದ ರೋಗಿಗಳು ಒಬ್ಬಂಟಿತನವನ್ನು ಭಾವಿಸುತ್ತಿದ್ದರೆ, ಅವರು ಯಾವುದಾದರೂ ಗ್ರೂಪ್, ಕ್ಲಾಸ್ ಅಥವಾ ತಮ್ಮಂತೆಯೇ ಆಸಕ್ತಿಹೊಂದಿರುವ ಜನರನ್ನು ಸ್ನೇಹಿರನ್ನಾಗಿ ಮಾಡಿಕೊಳ್ಳಬೇಕು ಎಂದು ನಾನು ಸಲಹೆ ನೀಡುತ್ತೇನೆ ಎಂದಿದ್ದಾರೆ ಲೇಖಕರು. ಏಂಕಾಗಿತನ ಮತ್ತು ಸಾಮಾಜಿಕ ಪ್ರತ್ಯೇಕೀಕರಣ ಇಂದಿನ ಸಮಾಜನದಲ್ಲಿ ಸಾಮಾನ್ಯವಾಗಿದೆ. ಕಳೆದ ವರ್ಷ ಹೆಚ್ಚಿನ ಸಂಶೋಧನೆ ಇದರ ಮೇಲೆ ಕೇಂದ್ರಿಕೃತವಾಗಿದೆ. ಅದರಲ್ಲೂ ಕೋವಿಡ್ 19 ಸಾಂಕ್ರಾಮಿಕತೆ ಮತ್ತು ಸಮಾಜ ಡಿಜಿಟಲೀಕರಣಕ್ಕೆ ಹೆಚ್ಚಾದ ಮೇಲೆ ಇದು ಹೆಚ್ಚಿದೆ ಎಂದಿದ್ದಾರೆ.
ಏಕಾಂಗಿತ ಎಂಬುದು ಸಾಮಾಜಿಕ ಸಂಪರ್ಕದ ಗುಣಮಟ್ಟ ತಿಳಿಸಿದರೆ, ಪ್ರತ್ಯೇಕೀಕರಣ ಪ್ರಮಾಣವನ್ನು ತಿಳಿಸುತ್ತದೆ. ಮಾನವ ಸಂಘ ಜೀವಿಯಾಗಿದ್ದು, ಕೇವಲ ಇರುವಿಕೆಯನ್ನು ಹೊಂದಿಲ್ಲ. ಬದಲಾಗಿ ಸಾಮಾಜಿಕ ಸಂಬಂಧವನ್ನು ಹೊಂದಿದ್ದಾನೆ. ಇದು ಆರೋಗ್ಯಕರ ವಯಸ್ಕತನದ ಅಭಿವೃದ್ಧಿಗೆ ಕೊಡುಗೆ ಹೊಂದಿದೆ. ವ್ಯಕ್ತಿಗಳಾಗಿ, ನಾವು ಕುಟುಂಬ, ಗುಂಪು, ಸಮುದಾಯಕ್ಕೆ ಸೇರಲು ಪ್ರಯತ್ನಿಸುತ್ತೇವೆ. ಕುಟುಂಬ, ಸ್ನೇಹಿತರು, ನೆರೆಹೊರೆಯವರು ಅಥವಾ ಸಹೋದ್ಯೋಗಿಗಳೊಂದಿಗೆ ಈ ಸಾಮಾಜಿಕ ಸಂವಹನಗಳು ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ.
ಮಧುಮೇಹಿ ರೋಗಿಗಳು ಹೆಚ್ಚಿನ ಹೃದ್ರೋಗ ಸಮಸ್ಯೆಯ ಅಪಾಯವನ್ನು ಹೊಂದಿರುತ್ತಾರೆ. ಏಕಾಂಗಿತನ ಇದನ್ನು ಹೆಚ್ಚಿಸುತ್ತದೆ. ಹಿಂದಿನ ಅಧ್ಯಯನದಲ್ಲೂ ಏಕಾಂಗಿತನ ಮತ್ತು ಸಾಮಾಜಿಕ ಪ್ರತ್ಯೇಕೀಕರಣಗಳು ಸಾಮಾನ್ಯ ಜನರಲ್ಲಿ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂಬುದನ್ನು ತೋರಿಸಲಾಗಿತ್ತು. ಈ ಅಧ್ಯಯನದಲ್ಲಿ ಮಧುಮೇಹ ಹೊಂದಿರುವ ರೋಗಿಗಳನ್ನು ಗಮನಿಸಲಾಗಿದ್ದು, ಏಕಾಂಗಿತ ಅಥವಾ ಸಾಮಾಜಿಕ ಪ್ರತ್ಯೇಕೀಕರಣ ಹೃದ್ರೋಗ ಅಭಿವೃದ್ಧಿಗೆ ಹೇಗೆ ಕಾರಣವಾಗಲಿದೆ ಎಂದು ಗಮನಿಸಲಾಗಿದೆ.