ನವದೆಹಲಿ:ಲಿವರ್ ಸಿರೋಸಿಸ್ ಗಂಭೀರ ವೈದ್ಯಕೀಯ ಪರಿಸ್ಥಿತಿಯಾಗಿದ್ದು, ಜಾಗತಿಕವಾಗಿ ಪ್ರತಿ ವರ್ಷ ಶೇ 20ರಷ್ಟು ಮಂದಿ ಇದಕ್ಕೆ ತುತ್ತಾಗುತ್ತಿದ್ದಾರೆ. ಯಕೃತ್ ಸಮಸ್ಯೆಯ ಕಡೆಯ ಹಂತ ಈ ಸಿರೋಸಿಸ್ ಆಗಿದೆ. ಯಕೃತ್ಗೆ ಆದ ಅನೇಕ ಗಾಯಗಳಿಂದ ಇದು ಸಂಭವಿಸುತ್ತದೆ. ಕೆಲವು ಲಿವರ್ ಸಮಸ್ಯೆ ಮತ್ತು ಪರಿಸ್ಥಿತಿಗಳು ಆಲ್ಕೋಹಾಲ್ ಸೇವನೆ, ದೀರ್ಘಾವಧಿ ಹೆಪೆಟೈಟಿಸ್, ಫ್ಯಾಟಿ ಲಿವರ್ ಅಥವಾ ದೀರ್ಘಾವಧಿ ಹೆಪೊಟೊಕ್ಸಿಕ್ ಔಷಧದಿಂದ ಉಂಟಾಗುತ್ತದೆ. ನಾಲ್ಕರಲ್ಲಿ ಒಬ್ಬ ಭಾರತೀಯರಲ್ಲಿ ಬೊಜ್ಜು ಅಥವಾ ಸ್ಥೂಲಕಾಲದಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಇದರ ಹೊರತಾಗಿ ಆಲ್ಕೋಹಾಲ್ ಸೇವನೆ ಕೂಡ ಈ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಹೇಗೆ ಸಂಭವಿಸುತ್ತದೆ?: ಯಕೃತ್ ಏನಾದರೂ ಸಮಸ್ಯೆ ಆದರೆ, ಅದು ತನ್ನತಾನೇ ಸರಿ ಮಾಡಿಕೊಳ್ಳುತ್ತದೆ. ಆದರೆ ಸಿರೋಸಿಸ್ ಸಮಸ್ಯೆಗೆ ಅಧಿಕ ಆಲ್ಕೋಹಾಲ್ ಸೇವನೆ, ದೀರ್ಘಕಾಲದ ಹೆಪಟೈಟಿಸ್ ಮತ್ತಿತ್ತರ ಕಾರಣವಾಗುತ್ತದೆ. ಯಕೃತು ಸ್ವಂತ ಸರಿಪಡಿಸಿಕೊಳ್ಳುವ ಸಮಯದಲ್ಲಿ ಗಾಯಗಳಾಗುತ್ತದೆ. ಯಾವಾಗ ಹೆಚ್ಚು ಹೆಚ್ಚು ಗಾಯವಾಗುತ್ತದೆ ಆಗ ಸಿರೋಸಿಸ್ ಗಂಭೀರವಾಗುತ್ತದೆ.
ಇದರಿಂದ ಯಕೃತ್ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ. ಸುಧಾರಿತ ಲಿವರ್ ಸಿರೋಸಿಸ್ಗೆ ಹೆಚ್ಚಿನ ಚಿಕಿತ್ಸೆ ತಕ್ಷಣಕ್ಕೆ ಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಪ್ರಾಣಕ್ಕೆ ಅಪಾಯವಾಗುತ್ತದೆ. ಈ ಸಮಸ್ಯೆಗೆ ಅನೇಕ ಬಾರಿ ಲಿವರ್ ಟ್ರಾನ್ಪ್ಲಾನ್ ಪರಿಹಾರವಾಗುತ್ತದೆ. ಆರೋಗ್ಯಯುತ ಡೋನರ್ ಸಹಾಯದಿಂದ ಇದನ್ನು ಮಾಡಬಹುದು. ಲಿವರ್ ಟ್ರಾನ್ಪ್ಲಾಟ್ಗಳಿಗೆ ಪ್ರಮುಖ ಕಾರಣವೇ ಈ ಲಿವರ್ ಸಿರೋಸಿಸ್ ಆಗಿದೆ.
ಲಿವರ್ ಸಿರೋಸಿಸ್ನ ಅಪಾಯದ ಅಂಶ: ಅಧಿಕ ಮದ್ಯ ಸೇವನೆ ಹಾಗೂ ಸ್ಥೂಲಕಾಲ ಅಥವಾ ತೂಕ ಹೆಚ್ಚಳ ಕೂಡ ಸಿರೋಸಿಸ್ ಅಪಾಯಕ್ಕೆ ಕಾರಣವಾಗುತ್ತದೆ. ಜೊತೆಗೆ ಫ್ಯಾಟಿ ಲಿವರ್ ಡಿಸೀಸ್ ಮತ್ತು ಆಲ್ಕೋ ಹಾಲ್ ಹೊರತಾದ ಸ್ಟಿಟಿಹೆಪಟೈಟಿಸ್ ಕೂಡ ಪರಿಣಾಮ ಬೀರುತ್ತದೆ. ಸ್ಥೂಲಕಾಯದ ಜೊತೆಗೆ ದೀರ್ಘಾವಧಿಯ ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕು ಕೂಡ ಈ ಸಮಸ್ಯೆಗೆ ಕಾರಣವಾಗುತ್ತದೆ.