ಚಯಪಚಯನ ಸಂಬಂಧ ಫ್ಯಾಟಿ ಲಿವರ್ನಂತಹ ಸಮಸ್ಯೆಯನ್ನು ಹೊಂದಿರುವ ರೋಗಿಗಳ ನಿಕಟ ಸಂಬಂಧಿಗಳು ಇಲ್ಲವೇ, ಕುಟುಂಬ ಸದಸ್ಯರು ಯಕೃತ್ ಕ್ಯಾನ್ಸರ್ ಮತ್ತು ಯಕೃತ್ ಸಂಬಂಧಿ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ರಾಷ್ಟ್ರೀಯ ಅಧ್ಯಯನವನ್ನು ದಿ ಜರ್ನಲ್ ಆಫ್ ಹೆಪಟೊಲೊಜಿಯಲ್ಲಿ ಪ್ರಕಟಿಸಲಾಗಿದೆ. ಸಂಶೋಧಕರ ಪ್ರಕಾರ, ಇಂತಹ ಕುಟುಂಬ ಸದಸ್ಯರು ಜೀವನ ಶೈಲಿಯ ಬದಲಾವಣೆಗೆ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ.
ಚಯಾಪಚಯನ ಸಂಬಂಧ ಫ್ಯಾಟಿ ಲಿವರ್ ರೋಗವೂ (ಎಂಎಎಸ್ಎಲ್ಡಿ) ಲಿವರ್ ಕ್ಯಾನ್ಸರ್ ಅಭಿವೃದ್ಧಿ ಹೊಂದುವ ಮತ್ತು ಸಾವನ್ನಪ್ಪುವ ಅಪಾಯವನ್ನು ಹೊಂದಿರುತ್ತಾರೆ. ಇತ್ತೀಚಿನ ದಿನದಲ್ಲಿ ಲಿವರ್ ಕ್ಯಾನ್ಸರ್ ಅಭಿವೃದ್ಧಿ ಹೊಂದುವ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿರುವ ಪ್ರಮುಖ ಕಾರಣದಲ್ಲಿ ಎಂಎಎಸ್ಎಲ್ಡಿ ಕೂಡ ಕಾರಣವಾಗಿದೆ. ಆದಾಗ್ಯೂ ಕರೊನಿಸ್ಕೊ ಸಂಸ್ಥೆಯ ಸಂಶೋಧಕರು ತೋರಿಸಿರುವಂತೆ ಫ್ಯಾಟಿ ಲಿವರ್ ಸಮಸ್ಯೆ ಹೊಂದಿರುವ ರೋಗಿಗಳ ನಿಕಟ ಸಂಬಂಧಿಗಳಲ್ಲಿ ಲಿವರ್ ಕ್ಯಾನ್ಸರ್ ಮತ್ತು ಸುಧಾರಿತ ಲಿವರ್ ಸಮಸ್ಯೆ ಹೆಚ್ಚಾಗುವ ಅಪಾಯ ಗುರುತಿಸಿದ್ದಾರೆ.
ಮುಂಚೆ ಪತ್ತೆಯಿಂದ ಆಗುವ ಪ್ರಯೋಜನ:ಎಂಎಎಸ್ಎಲ್ಡಿ ರೋಗಿಗಳನ್ನು ಪ್ರತ್ಯೇಕವಾಗಿ ಚಿಕಿತ್ಸೆ ನೀಡುವಂತಿಲ್ಲ ಎಂದು ಸಂಶೋಧನೆ ಸೂಚಿಸಿದೆ ಎಂದು ಅಧ್ಯಯನ ಮೊದಲ ಲೇಖಕ, ಕರೊಲಿನ್ಸಕಾ ಸಂಸ್ಥೆಯ ಫಹಿಮ್ ಎಬ್ರೊಹಿಮ್ ತಿಳಿಸಿದ್ದಾರೆ. ರೋಗಿಗಳ ಕುಟುಂಬ ಸದಸ್ಯರಿಗೂ ಜೀವನಶೈಲಿ ಬದಲಾವಣೆಯನ್ನು ಶಿಫಾರಸು ಮಾಡಿದೆ. ನಮ್ಮ ಅಧ್ಯಯನವೂ ಸಲಹೆ ನೀಡುವಂತೆ, ಎಂಎಎಸ್ಎಲ್ಡಿ ಪೂರ್ವ ಪತ್ತೆಯಿಂದ ಮೆಟಾಬೊಲಿಕ್ ಅಪಾಯ ಅಂಶಗಳು ಡಯಾಬಿಟಿಸ್ ಮೆಲ್ಲಿಟಸ್ ಅಪಾಯದ ಅಂಶವನ್ನು ಪತ್ತೆ ಮಾಡಲು ಸಹಾಯ ಮಾಡುತ್ತದೆ.