ಟೆಡ್ಡಿ ಬೇರ್ ಅಂದ್ರೆ ಎಲ್ಲರಿಗೂ ಇಷ್ಟ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಇವು ತುಂಬಾ ಇಷ್ಟ. ಟೆಡ್ಡಿ ಬೇರ್ ಜೊತೆಗಿಲ್ಲದೆ ಕೆಲವರಿಗೆ ಒಂದು ದಿನವೂ ಇರಕ್ಕಾಗಲ್ಲ ಗೊತ್ತಾ..! ಬಹುತೇಕ ನಮ್ಮ ಬಳಿ ಇರುವ ಟೆಡ್ಡಿ ಬೇರ್ಗಳು ಅಂಗೈ ಅಗಲದಿಂದ ಹಿಡಿದು ಆರಡಿ ಅಥವಾ ಅದಕ್ಕೂ ದೊಡ್ಡದಾಗಿರಬಹುದು. ಆದ್ರೆ ಹೆಬ್ಬೆರಳ ಉಗುರಿಗಿಂತಲೂ ಚಿಕ್ಕ ಟೆಡ್ಡಿ ಬೇರ್ ಬಗ್ಗೆ ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ ಇಲ್ಲಿದೆ ನೋಡಿ ಮಾಹಿತಿ.
ವಿಶ್ವದ ಅತ್ಯಂತ ಚಿಕ್ಕ ಟೆಡ್ಡಿ ಬೇರ್:ವಿಶ್ವದ ಅತ್ಯಂತ ಚಿಕ್ಕ ಟೆಡ್ಡಿ ಬೇರ್ ಬೊಂಬೆಗೆ ಟೈನಿಟೆಡ್ ಎಂದು ಹೆಸರಿಸಲಾಗಿದೆ. ಇದರ ಎತ್ತರ ಕೇವಲ 4.5 ಮಿಮೀ. ಇದನ್ನು 2006 ರಲ್ಲಿ ದಕ್ಷಿಣ ಆಫ್ರಿಕಾದ ಚೆರಿಯಲ್ ಮಾಸ್ ತಯಾರಿಸಿದರು. ಇದು ಪ್ರಸ್ತುತ ದಕ್ಷಿಣ ಕೊರಿಯಾದ ಜೆಜು ದ್ವೀಪದಲ್ಲಿರುವ ಟೆಡ್ಡಿ ಬೇರ್ ಮ್ಯೂಸಿಯಂನಲ್ಲಿದೆ.
ಎರಡನೆಯ ಅತಿ ಚಿಕ್ಕ ಟೆಡ್ಡಿ ಬೇರ್:ಎರಡನೇ ಚಿಕ್ಕ ಟೆಡ್ಡಿ ಬೇರ್ ಹೆಸರು ಮಿನಿ ದಿ ಪೂ. ಇದರ ಎತ್ತರ 5 ಮಿಮೀ. ಇದನ್ನು 2001 ರಲ್ಲಿ ಜರ್ಮನಿಯ ಬೆಟ್ಟಿಯಾ ಕಮಿನ್ಸ್ಕಿ ತಯಾರಿಸಿದರು. ಇದು ಥಂಬ್‌ನೇಲ್‌ಗಿಂತಲೂ ಚಿಕ್ಕದಾಗಿದೆ. ಇದನ್ನು ಪ್ರಸ್ತುತ ಬ್ರಿಟನ್‌ನ 'ಎ ವರ್ಲ್ಡ್ ಇನ್ ಮಿನಿಯೇಚರ್' ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.