ಲಂಡನ್: ಸಾರ್ಸ್ ಕೋವ್ 2 ಗಂಭೀರ ಕೋವಿಡ್ ಸಮಸ್ಯೆ ಆಗೇನು ಉಳಿದಿಲ್ಲ. ಅದು ಜ್ವರದ ಜೊತೆಗೆ ಉಸಿರಾಟದ ಸಮಸ್ಯೆಯಾಗಿದ್ದು, ಆರ್ಎಸ್ವಿ, ರಹಿನೊವೈರಸ್ ಮತ್ತು ಅಡೆನೊವೈರಸ್ ರೀತಿ ಚಳಿಗಾಲದ ವೈರಸ್ ಆಗಿದೆ ಎಂದು ಯುನೈಟೆಡ್ ಕಿಂಗ್ಡಮ್ನ ತಜ್ಞರು ತಿಳಿಸಿದ್ದಾರೆ.
ಇಂಗ್ಲೆಂಡ್ನಲ್ಲಿ ಹೊಸ ಕೋವಿಡ್ 19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದ್ದು, ದಿನವೊಂದಕ್ಕೆ 2,257 ಪ್ರಕರಣಗಳು ವರದಿಯಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಕಳೆದ ಐದು ತಿಂಗಳಲ್ಲೆ ಹೆಚ್ಚಾಗಿದ್ದು, 3,366 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬ್ರಿಟನ್ನ ಆರೋಗ್ಯ ಭದ್ರತಾ ಏಜೆನ್ಸಿ ವರದಿ ಮಾಡಿದೆ.
ಸಾಂಕ್ರಾಮಿಕತೆಗೆ ಹೋಲಿಕೆ ಮಾಡಿದಾಗ ಇದರ ಮಟ್ಟ ಕಡಿಮೆ ಆಗಿದ್ದು ಕೋವಿಡ್ ಋತುಮಾನದ ಜ್ವರವಾಗಿ ಮಾರ್ಪಾಡಾಗುತ್ತಿದೆ ಎಂದು ಸೋಂಕಿನ ತಜ್ಞ ಪ್ರೋ ಪೌಲ್ ಹಂಟರ್ ಬಿಬಿಸಿಗೆ ತಿಳಿಸಿದ್ದಾರೆ. ಕೋವಿಡ್ ನಿಧಾನವಾಗಿ ಸಾಮಾನ್ಯ ಶೀತದಂತೆ ಗೋಚರಿಸುತ್ತಿದೆ. ಇದೀಗ ಸಾವಿನ ಮನೆಯಂತಾಗಿ ಏನೂ ಮಾರ್ಪಾಡಾಗಿಲ್ಲ.
2022ರಲ್ಲಿ ಚಳಿಗಾಲದ ಸಮಯದಲ್ಲಿ ಕೋವಿಡ್ಗಿಂತಲೂ ಜ್ವರದಿಂದ ಸಾವನ್ನಪ್ಪಿದವರ ಸಂಖ್ಯೆ ಹೆಚ್ಚಾಗಿ ಕಂಡು ಬಂದಿತ್ತು. ಕೋವಿಡ್ನಿಂದ 10 ಸಾವಿರ ಜನರು ಸಾವನ್ನಪ್ಪಿದರೆ, ಜ್ವರದಿಂದ ಸರಿ ಸುಮಾರು 14 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.