ನವದೆಹಲಿ: ರಕ್ತದೊತ್ತಡದ ಇತಿಹಾಸವನ್ನು ಹೊಂದಿಲ್ಲದಿದ್ದರೂ, ಗರ್ಭಾವಸ್ಥೆಯಲ್ಲಿ ಕಾಡುವ ಅಧಿಕ ರಕ್ತದೊತ್ತಡವೂ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಜೊತೆಗೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ. ಈ ಹಿನ್ನೆಲೆ ಗರ್ಭಿಣಿಯರು ರಕ್ತದೊತ್ತಡವನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.
ಗರ್ಭಾವಸ್ಥೆಯಲ್ಲಿ ಅಧಿಕರ ರಕ್ತದೊತ್ತಡ ತಾಯಿ ಮತ್ತು ಮಗುವಿಗೆ ಅಪಾಯಕಾರಿಯಾಗಿದ್ದು, ಈ ವೇಳೆ ಕಾಡುವ ಅಧಿಕ ರಕ್ತದೊತ್ತಡವನ್ನು ಮೂರು ವಿಧವಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ, ಪ್ರಿ-ಎಕ್ಲಾಂಪ್ಸಿಯಾ ಮತ್ತು ಎಕ್ಲಾಂಪ್ಸಿಯಾ.
ಸ್ತ್ರಿ ರೋಗ ಮತ್ತು ಪ್ರಸುತಿ ತಜ್ಞೆಯಾಗಿರುವ ಡಾ. ಅನಿತಾ ರಾವ್ ಮಾತಾಡಿ, ಗರ್ಭಾವಸ್ಥೆಯ ರಕ್ತದೊತ್ತಡದ ಪರಿಸ್ಥಿತಿಗಳು 20 ವಾರಗಳ ಬಳಿಕ ಕಾಣುತ್ತದೆ. ಈ ಹಿಂದೆ ಅವರಲ್ಲಿ ಯಾವುದೇ ಸಾಮಾನ್ಯ ರಕ್ತದೊತ್ತಡ ಲಕ್ಷಣ ಇಲ್ಲದಿದ್ದರೂ ಇದು ಕಾಣಬಹುದು.
ಆರೋಗ್ಯಯುತ ಗರ್ಭಾವಸ್ಥೆಗಾಗಿ ಗರ್ಭಣಿಯರು ನಿಯಮಿತವಾಗಿ ರಕ್ತದೊತ್ತಡದ ನಿರ್ವಹಣೆಗೆ ಒಳಗಾಗುವುದರ ಜೊತೆಗೆ ಸರಿಯಾದ ಆರೋಗ್ಯ ಚಿಕಿತ್ಸೆಯನ್ನು ಪಡೆಯಬೇಕು. ಇದರಿಂದಾಗಿ ಈ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದರ ಜೊತೆಗೆ ಅದರೊಂದಿಗೆ ಇರುವ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ.
ಸೈನ್ಸ್ ಡೈರೆಕ್ಟರ್ನಲ್ಲಿ ಪ್ರಕಟವಾದ ಭಾರತೀಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಈ ರೀತಿ ಗರ್ಭಾವಸ್ಥೆ ಅಧಿಕ ರಕ್ತದೊತ್ತಡ ಪ್ರಕರಣಗಳಲ್ಲಿ ಏರಿಕೆ ಕಂಡಿದೆ. ಇದು ತಾಯಂದಿರ ಮತ್ತು ಶಿಶು ಮರಣದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಅಧ್ಯಯನವೂವನ್ನು ಕೇರಳದ ಪುಷ್ಪಗಿರಿ ಇನ್ಸುಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಈ ಹಿನ್ನೆಲೆ ಇದನ್ನು ಮುಂಚೆಯೇ ಪತ್ತೆ ಮಾಡಿ ಅದಕ್ಕೆ ಸಂಬಂಧಿಸಿದ ಚಿಕಿತ್ಸೆ ನೀಡುವುದರಿಂದ ಇದರ ಸಂಬಂಧಿ ಅಪಾಯವನ್ನು ಕಡಿಮೆ ಮಾಡಬಹುದು.