ಆರೋಗ್ಯಕರ ಜೀವನ ಎಂದರೆ ಸಪ್ಪೆ ಊಟದ ಸೇವನೆಯ ಜೊತೆಗೆ ಹೆಚ್ಚು ತಿನ್ನದೇ ಹಸಿವಿನಿಂದ ಇರುವುದು ಎಂದು ತಿಳಿದಿದ್ದರೆ ಅದು ತಪ್ಪು ತಿಳುವಳಿಕೆ. ಕಡಿಮೆ ಕ್ಯಾಲೋರಿ ಹೊಂದಿರುವ ರುಚಿಕರ, ಪೌಷಕಾಂಶಯುಕ್ತ ಆಹಾರ ಸೇವನೆ ಡಯಟ್ನ ಪ್ರಮುಖ ಅಂಶವಾಗಿದೆ. ನೀವು ಆರೋಗ್ಯಕರ ಡಯಟ್ ಪಾಲಿಸಬೇಕು ಎಂದಿದ್ದರೆ, ನೀವು ಸೇವಿಸುವ ಕ್ಯಾಲೋರಿ ಬಗ್ಗೆ ಗಮನವಿರಲಿ.
ಪೌಷಕಾಂಶಯುಕ್ತ ಸ್ನಾಕ್ ಮತ್ತು ಊಟದ ಸೇವನೆ ನಿಮ್ಮನ್ನು ಹಸಿವೆಯಿಂದ ದೂರವಿಡುತ್ತದೆ. ಈ ನಿಟ್ಟಿನಲ್ಲಿ ನೀವು ಆಹಾರವನ್ನು ಬುದ್ದಿವಂತಿಕೆಯಿಂದ ಆಯ್ದುಕೊಳ್ಳಬೇಕು. ನೀವು ಮುಂದಿನ ಬಾರಿ ಶಾಪಿಂಗ್ಗೆ ಹೋದಾಗ ಕಡಿಮೆ ಕ್ಯಾಲೋರಿ ಹೊಂದಿರುವ ಈ ಆಹಾರಗಳನ್ನು ನಿಮ್ಮ ಡಯಟ್ ಲಿಸ್ಟ್ನಲ್ಲಿ ಸೇರಿಸಿ, ಖರೀದಿಸಬಹುದು.
ಬೆರ್ರಿ ಹಣ್ಣು:ಸಣ್ಣ, ಮೃದುವಾಗಿರುವ ಈ ಹಣ್ಣು ಕೆಂಪು, ನೀಲಿ ಮತ್ತು ನೇರಳೆ ಬಣ್ಣದಲ್ಲಿರುತ್ತದೆ. ಸಿಹಿ ಮತ್ತು ಹುಳಿ ಮಿಶ್ರಣ ಹೊಂದಿದೆ. ಜಾಮ್ ಮತ್ತು ಡೆಸಾರ್ಟ್ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಪಾಲಿಪೆನೊಸ್ ಪೋಷಕಾಂಶ ಗುಣವಿದೆ. ಇದನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದರಿಂದ ಅನೇಕ ದೀರ್ಘಕಾಲದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಬ್ರೊಕೊಲಿ: ಹೂಕೋಸಿನ ಮಾದರಿಯ ಈ ತರಕಾರಿಯಲ್ಲಿ ಹಲವು ಆರೋಗ್ಯಕರ ಗುಣಗಳಿವೆ. ಇದರಲ್ಲಿ ಅತಿ ಹೆಚ್ಚು ವಿಟಮಿನ್, ಮಿನರಲ್ ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ. ಇದರಲ್ಲಿನ ಕ್ಯಾಲ್ಸಿಯಂ ಮತ್ತು ಕೊಲೆಜೆನ್ ಮೂಳೆಗಳನ್ನು ಬಲವಾಗಿಡುತ್ತದೆ. ಇದರಲ್ಲಿನ ವಿಟಮಿನ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕ್ಯಾನ್ಸರ್ ಅಪಾಯವನ್ನು ಇದು ಕಡಿಮೆ ಮಾಡುತ್ತದೆ. ಜೊತೆಗೆ, ಅನಿಮಿಯಾದಂತಹ ಸಮಸ್ಯೆಗೆ ಇದು ಪರಿಣಾಮಕಾರಿ.