ಹೈದರಾಬಾದ್: ಹೈದರಾಬಾದ್ನ ಬಾಲಕ ತಮ್ಮ ಜೊತೆ ಓದುತ್ತಿದ್ದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಈ ಘಟನೆ ತನಿಖೆ ವೇಳೆ ಆತನ ಈ ಕೃತ್ಯಕ್ಕೆ ಕಾರಣ ತನ್ನ ತಂದೆ ಮೊಬೈಲ್ ಮೂಲಕ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡುತ್ತಿರುವುದರಿಂದ ಬಾಲಕ ಪ್ರೇರಿತನಾಗಿದ್ದ ಎಂಬ ಆಘಾತಕಾರಿ ವಿಚಾರ ತನಿಖೆ ವೇಳೆ ಬಹಿರಂಗವಾಗಿತ್ತು.
ನಿರ್ಮಾಲ್ ಜಿಲ್ಲೆಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಗಾಂಜಾ ಸೇವಿಸುತ್ತಿರುವುದನ್ನು ಶಿಕ್ಷಕರು ಪತ್ತೆ ಮಾಡಿದ್ದರು. ದಕ್ಷಿಣ ಪ್ರದೇಶದಲ್ಲಿ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಹುಕ್ಕಾ ಸೇವಿಸಿ ಸಿಕ್ಕಿಬಿದ್ದಿರುವ ಘಟನೆ ಮಕ್ಕಳಲ್ಲಿರುವ ವಿಪರೀತ ಪ್ರವೃತ್ತಿಗೆ ಸಾಕ್ಷಿಯಾಗಿದೆ. ಇತ್ತೀಚೆಗೆ ಎಲ್ಲ ವಿದ್ಯಾರ್ಥಿಗಳಿಗೆ ಗಾಂಧಿ ಚಿತ್ರ ತೋರಿಸಲಾಯಿತು. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಕೆಲವು ವಿದ್ಯಾರ್ಥಿಗಳು ಮೊಬೈಲ್ ಹಿಡಿದು ಥಿಯೇಟರ್ನಲ್ಲಿ ದೊಂಬಿ ಮಾಡಿ, ಶಿಕ್ಷಕರ ಮೇಲೆ ತಿರುಗಿ ಬೀಳುವಂಥ ದೌರ್ಜನ್ಯ ನಡೆಸಿದ್ದರು. ಇದು ಶಿಕ್ಷಕರು ಮತ್ತು ಹಿರಿಯರ ಬಗ್ಗೆ ಗೌರವ ಹೊಂದಿರದ ಮಕ್ಕಳ ಮನಸ್ಥಿತಿಯನ್ನು ಇದು ತೋರಿಸುತ್ತದೆ.
ಸೆಲ್ಫೋನ್ ಸುತ್ತವೇ ಈಗಿನ ಜೀವನ:ಚಿಕ್ಕವರಿರಲೀ ಅಥವಾ ದೊಡ್ಡವರು ಇರಲೀ ಪ್ರತಿಯೊಬ್ಬರ ಜೀವನವೂ ಸೆಲ್ ಫೋನ್ ಸುತ್ತ ಸುತ್ತುವರೆದಿದ್ದು, ಇದಕ್ಕೆ ಗಂಟೆಗಟ್ಟಲೇ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಮೊಬೈಲ್ಗೆ ವಿದ್ಯಾರ್ಥಿಗಳ ಆಪ್ತರೆ ದಿನ ಕಳೆದಂತೆ ಹೆಚ್ಚುತ್ತ ಹೋಗಿತ್ತದೆ. ಕಾಣದ ರೀತಿಯಲ್ಲಿ ಅನೇಕ ಅಪಾಯಗಳಿಗೆ ಅವರು ತುತ್ತಾಗುತ್ತಾರೆ.
ಕೋವಿಡ್ ಸಮಯದಲ್ಲಿ ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಕೈಗೆ ಮೊಬೈಲ್ಗಳು ಬಂದವು. ಅದು ಈಗ ಸಾಂಕ್ರಾಮಿಕ ರೋಗ ಎಂಬಂತೆ ಹಬ್ಬುತ್ತಲೇ ಸಾಗುತ್ತಿದೆ. ಉತ್ತಮ ಉದ್ದೇಶಕ್ಕಾಗಿ ನೀಡಿದ ಮೊಬೈಲ್ಗಳು ಈಗ ಮಕ್ಕಳು ಕೆಟ್ಟ ಅಭ್ಯಾಸಕ್ಕೆ ಬೀಳುವಂತೆ ಮಾಡಿದೆ. ಪೋಷಕರು ಅಥವಾ ಕುಟುಂಬ ಸದಸ್ಯರು ಆರಂಭದಲ್ಲೇ ಈ ಬಗ್ಗೆ ಗಮನ ಹರಿಸದಿದ್ದಲಿ, ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಮಕ್ಕಳ ಜೀವನ ಹಾಳು ಮಾಡುತ್ತಿದೆ ಯಾಂತ್ರಿಕ ಜಗತ್ತು:ಸಿನಿಮಾ ಮತ್ತು ಟಿವಿಗಳಲ್ಲಿ ಬರುವ ಕಾಲ್ಪನಿಕ ಹಿರೋಯಿಕ್ ಸೀನ್ಗಳು ಇದ್ದೇ ಇರುತ್ತವೆ. ಇವುಗಳ ಬಗ್ಗೆ ನೀವು ಆಕರ್ಷಿತರಾದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಆಘಾತ ಎದುರಿಸಬೇಕಾಗುತ್ತದೆ. ಇತ್ತೀಚೆನ ದಿನಗಳಲ್ಲಿ ಯುವ ಜನತೆ ತಮ್ಮ ನೆಚ್ಚಿನ ನಟ ಮತ್ತು ನಟಿಯರ ಪಾತ್ರಗಳ ಅನುಕರಣೆ ಮಾಡುತ್ತಾರೆ. ಜೊತೆಗೆ ಅದನ್ನು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕುತ್ತಾರೆ. ಕನಿಷ್ಠ ಎಂದರೂ ನಾಲ್ಕು ಮತ್ತು ಐದು ಗಂಟೆಗಳ ಕಾಲ ಫೋನ್ನಲ್ಲಿ ಕಾಲ ಕಳೆಯುತ್ತಾರೆ.
ಇದರಿಂದಾಗಿ ಅವರು ಪುಸ್ತಕ ಓದಲು ಯಾವುದೇ ಸಮಯ ನೀಡುವುದಿಲ್ಲ. ಅಲ್ಲದೇ, ಅವರು ತಮ್ಮ ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಕೂಡ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿಧಾನವಾಗಿ ಅವರು ಒತ್ತಡದಿಂದಾಗಿ ಯಾಂತ್ರಿಕ ಬದುಕು ಜೀವಿಸಲು ಆರಂಭಿಸುತ್ತಾರೆ.