ನವದೆಹಲಿ: ಗಂಡಂದಿರ ಯೋಗಕ್ಷೇಮ ಬಯಸುವ ಈ ಹಬ್ಬವು ತನ್ನದೇ ಆದ ಹಿನ್ನೆಲೆ ಹೊಂದಿದೆ. ಯುದ್ಧಕ್ಕೆಂದು ಹೋದ ಗಂಡ ಸುರಕ್ಷಿತವಾಗಿ ಮರಳಿ ಮನೆಗೆ ಬಂದಾಗ, ಯುದ್ಧದ ನೋವುಗಳನ್ನು ಮರೆಯಲೆಂಬ ಉದ್ದೇಶದಿಂದ ಹೆಂಡತಿಯು ಉತ್ತಮ ಭಕ್ಷ್ಯಭೋಜನ ತಯಾರಿಸಿ, ರಾಣಿಯಂತೆ ಅಲಂಕೃತಗೊಂಡು ಬೇರೆ ಹೆಂಗಳೆಯರ ಜೊತೆ ಸೇರಿಕೊಂಡು ಆಚರಣೆ ಮಾಡುವ ಹಬ್ಬ ಇದಾಗಿದೆ ಎನ್ನಲಾಗ್ತಿದೆ.
ಈ ಹಬ್ಬದ ಇಡೀ ದಿನ ಮಹಿಳೆಯರು ಉಪವಾಸ ಇರುತ್ತಾರೆ. ನಂತರ, ಕರ್ವಾ ಚೌತ್ ಉಪವಾಸವನ್ನು ಕೆಲವು ಟೇಸ್ಟಿ ಮತ್ತು ರುಚಿಕರವಾದ ಭಕ್ಷ್ಯಗಳೊಂದಿಗೆ ಕೊನೆಗೊಳಿಸುತ್ತಾರೆ. ಅಂತಹವರಿಗಾಗಿ ಇಲ್ಲಿವೆ ಕೆಲವು ಸುಲಭಕರವಾಗಿ ತಯಾರಿಸಬಹುದಾದ ಭಕ್ಷ್ಯಗಳು.
ಸೇವಿಯಾನ್: ಇದನ್ನು ತಯಾರಿಸಲು ಬೇಕಾಗುವ ಪದಾರ್ಥಗಳೆಂದರೇ, ವರ್ಮಿಸೆಲ್ಲಿ, ಕ್ರೀಮ್ ಮಿಲ್ಕ್, ಪಿಸ್ತಾ, ಬಾದಾಮಿ, ದೇಸಿ ತುಪ್ಪ, ಖೋಯಾ, ಹಸಿರು ಏಲಕ್ಕಿ ಪುಡಿ.
ಇದನ್ನು ಮಾಡುವ ವಿಧಾನ: ಒಂದು ಪಾತ್ರೆಗೆ ಮೊದಲು ತುಪ್ಪ ಹಾಕಿ ಬಿಸಿ ಮಾಡಿ. ನಂತರ ಶ್ಯಾವಿಗೆ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೆ ಹುರಿಯಿರಿ. ನಂತರ ಇದನ್ನು ತೆಗೆದು ಬೇರೆ ಪಾತ್ರೆಗೆ ಹಾಕಿಕೊಳ್ಳಿ. ಬಾಣಲೆಯಲ್ಲಿ ಹಾಲು ಕುದಿಸಿ, ನಂತರ ಕತ್ತರಿಸಿದ ಬಾದಾಮಿ, ಪಿಸ್ತಾ ಸೇರಿಸಿ. 2-3 ನಿಮಿಷ ಬೇಯಿಸಿ, ಬಳಿಕ ಸಕ್ಕರೆ ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣವಾಗುವವರೆಗೆ ಕುದಿಸಿ. ಖೋಯಾ ತುರಿದು ಹಾಲಿಗೆ ಸೇರಿಸಿ. ಮಿಶ್ರಣವು ದಪ್ಪವಾಗುವವರೆಗೆ ಬೇಯಿಸಿ. ಶ್ಯಾವಿಗೆ ಸೇರಿಸಿದ ನಂತರ 5 ನಿಮಿಷ ಬೇಯಿಸಿ. ಪುಡಿಮಾಡಿದ ಏಲಕ್ಕಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ನಟ್ಸ್ಗಳಿಂದ ಅಲಂಕರಿಸಿ, ಸಣ್ಣಗೆ ಮಾಡಿಕೊಂಡು ಅಥವಾ ಬಿಸಿಯಾಗಿ ಇದನ್ನು ನೀವು ಸವಿಯಬಹುದಾಗಿದೆ.
ಬಾದಾಮಿ ರೋಸ್ ರಾಬ್ಡಿ: ಇದನ್ನು ಮಾಡಲು ಬೇಕಾಗುವ ಪದಾರ್ಥಗಳೆಂದರೇ, ಬಾದಾಮಿ (ಸಿಪ್ಪೆ ತೆಗೆದಿರುವುದು), ಹಾಲು, ಸಕ್ಕರೆ, ಪಿಸ್ತಾ, ಏಲಕ್ಕಿ ಪುಡಿ.