ಬೆಂಗಳೂರು: ಟೈಪ್ 1 ಮಧುಮೇಹವನ್ನು 'ಬಾಲ್ಯದ ಮಧುಮೇಹ' ಎಂತಲೂ ಕರೆಯಲಾಗುತ್ತದೆ. ಇದು ಜಗತ್ತಿನಾದ್ಯಂತ ಮಕ್ಕಳಲ್ಲಿ ಎದುರಾಗುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆ. ಇದನ್ನು ಸರಿಯಾಗಿ ಆರೈಕೆ ಮಾಡದೇ ಹೋದಲ್ಲಿ ಅತಿ ಹೆಚ್ಚಿನ ಅಥವಾ ಕಡಿಮೆ ಗಂಭೀರ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಅಲ್ಲದೆ, ಸಾಮಾನ್ಯ ಆರೋಗ್ಯ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನಟ-ಹಾಡುಗಾರ ನಿಕ್ ಜೋನಸ್, ಲೇಖಕ ಅನ್ ರೈಸ್, ಖ್ಯಾತ ಭಾರತೀಯ ಸಿನಿಮಾ ನಟ ಕಮಲ್ ಹಾಸನ್ ಮತ್ತು ನಟಿ ಸೋನಂ ಕಪೂರ್, ಪಾಕಿಸ್ತಾನ ಕ್ರಿಕೆಟರ್ ವಾಸಿಂ ಅಕ್ರಂ ಮತ್ತು ನಟ ಫಹದ್ ಖಾನ್ ಸೇರಿದಂತೆ ಜಗತ್ತಿನ ವಿವಿಧ ಭಾಗದ ಬಹುತೇಕ ಮಂದಿ ಟೈಪ್ 1 ಸಮಸ್ಯೆಯಿಂದ ಬಳಲುತ್ತಿದ್ದಾರೆ. ಟೈಪ್ 1 ಮಧುಮೇಹ ಎಂಬುದು ಸಾಮಾನ್ಯ ತೊಂದರೆಯಲ್ಲ. ಇದಕ್ಕೆ ಸರಿಯಾದ ಚಿಕಿತ್ಸೆ ಲಭ್ಯವಾಗದೇ ಹೋದರೆ ಜೀವಕ್ಕೆ ಕುತ್ತು ತರುತ್ತದೆ. ವ್ಯಕ್ತಿಗೆ 18 ವರ್ಷ ಆಗುವವರೆಗೆ ಯಾವುದೇ ಸಂದರ್ಭದಲ್ಲಿ ಈ ಆಟೋಇಮ್ಯೂನ್ ರೋಗ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಏನಿದು ಬಾಲ್ಯದ ಮಧುಮೇಹ?:ಇಂದೋರ್ನ ಕೊಕೀಲಾಬೆನ್ ಆಸ್ಪತ್ರೆಯ ವೈದ್ಯ ಡಾ.ಸಂಜಯ್ ಜೈನ್ ಹೇಳುವಂತೆ, ಟೈಪ್ 1 ಮಧುಮೇಹವನ್ನು ನಿರ್ವಹಣೆ ಮಾಡಬಹುದು. ಸರಿಯಾದ ಚಿಕಿತ್ಸೆ ನಿರ್ವಹಣೆಯಿಂದ ಈ ಸಮಸ್ಯೆ ಹೊಂದಿರುವವರು ಸಾಮಾನ್ಯ ಜೀವನ ನಡೆಸಬಹುದು. ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದು ವ್ಯತ್ಯಾಸದಿಂದ ಕೂಡಿರುತ್ತದೆ. ಟೈಪ್ 2 ಮಧುಮೇಹಕ್ಕೆ ಕಾರಣ ಕಳಪೆ ಜೀವನಶೈಲಿ, ನಿರ್ದಿಷ್ಟ ಅನಾರೋಗ್ಯ ಅಥವಾ ಔಷಧಿಗಳ ಪರಿಣಾಮ ಕಾರಣ. ಇದೇ ವೇಳೆ ಟೈಪ್ 1 ಮಧುಮೇಹ ಪೋಷಕರಿಂದ ಬರುವ ಆನುವಂಶಿಕ ಕಾಯಿಲೆಯೂ ಹೌದು.
ಟೈಪ್ 1 ಮಧುಮೇಹದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳನ್ನು ಗುರಿಯಾಗಿಟ್ಟುಕೊಂಡು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆ ಮಾಡಬಹುದು/ ನಿಲ್ಲಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಗೆ ಕಾರಣವಾಗುತ್ತದೆ.