ಹೈದರಾಬಾದ್: ಹೊರಗೆ ಚಳಿ ನಡುವೆ ಮಳೆ ಬಂದರೆ, ವಾತಾವರಣ ಇನ್ನಷ್ಟು ಶೀತದಿಂದ ಕೊರೆಯುವಂತೆ ಆಗುವುದು ಸುಳ್ಳಲ್ಲ. ಇಂತಹ ಚಳಿಗೆ ಬೆಚ್ಚಗಿನ ಪಾನೀಯಗಳನ್ನು ಕುಡಿಯಲು ಮನಸ್ಸು ಕೇಳುತ್ತದೆ. ಈ ಋತುಮಾನದಲ್ಲಿ ಬಿಸಿ ಬಿಸಿ ಪಾನೀಯ ಹೀರುತ್ತಾ ಇಷ್ಟವಾದ ಪುಸ್ತಕದ ಓದುತ್ತ ಪುಟಗಳನ್ನು ತಿರುಗಿಸುವ ಮಜಾವೇ ಬೇರೆ. ಆದರೆ, ನೀವು ಕುಡಿಯುವ ಬಿಸಿ ಪಾನೀಯಗಳು ಮಾತ್ರವಲ್ಲದೇ ಕೆಲವು ಅಭ್ಯಾಸಗಳು ನಿಮಗೆ ಆರಾಮದಾಯದ ಜೊತೆ ಆರೋಗ್ಯಕ್ಕೂ ಉತ್ತಮವಾಗಿರಬೇಕು. ಚಳಿಗಾಲದ ಋತುಮಾನದ ವಿರುದ್ಧ ನಿಮ್ಮನ್ನು ಕಾಪಾಡುವಂತೆ ಇರಬೇಕು ಎಂಬುದು ಪ್ರಮುಖವಾದ ವಿಷಯ ಆಹಾರಗಳು ಪ್ರಮುಖವಾಗುತ್ತದೆ. ಕೆಮ್ಮು ಮತ್ತು ನೆಗಡಿಯಂತಹ ಸಮಸ್ಯೆಗಳಿಂದ ದೂರವಿರಲು ಚಳಿಗಾಲದ ಸಮಯದಲ್ಲಿ ಆರೋಗ್ಯಕರವಾಗಿರುವುದು ಅವಶ್ಯ. ಅದಕ್ಕಾಗಿ ಈ ಸಿಂಪಲ್ ಟಿಪ್ಸ್ ಅನುಸರಿಸಿ ಸಾಕು.
ಶುಂಠಿ ಚಹಾ: ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಟೀಗಳ ಶುಂಠಿ ಪ್ರಮುಖವಾದದ್ದು. ಅನೇಕ ಔಷಧಗಳ ಗುಣ ಹೊಂದಿರುವ ಶುಂಠಿ ಚಹಾ ದೇಹವನ್ನು ಬೆಚ್ಚಗಿರಿಸುವಲ್ಲಿ ಪ್ರಮುಖವಾಗಿತ್ತದೆ. ಶೀತ ಸಮಯದಲ್ಲಿ ಈ ಚಹಾ ಸೇವಿಸುತ್ತೀರಾ ಎಂದರೆ, ಇದರ ಜೊತೆಗೆ ಏಲಕ್ಕಿಯನ್ನು ಸೇರಿಸುವುದನ್ನು ಮರೆಯಬೇಡಿ. ಚಳಿಗಾಲದ ಸಮಯದಲ್ಲಿ ಬಿಸಿ ಕಾಫಿ ಅಥವಾ ಇನ್ನಿತರ ಬಿಸಿ ಪಾನೀಯವನ್ನು ಆಯ್ಕೆ ಮಾಡಬಹುದು. ಆದರೆ, ಶುಂಠಿ ಚಹಾದ ವಾಸನೆ ನಿಮ್ಮ ಮೂಡ್ ಅನ್ನು ಉಲ್ಲಾಸಗೊಳಿಸುವ ಜೊತೆಗೆ ಅನೇಕ ಆರೋಗ್ಯಕರ ಲಾಭವನ್ನು ತಂದುಕೊಡುತ್ತದೆ.
ಬಿಸಿ ಸೂಪ್: ಅನೇಕರಿಗೆ ಚಳಿ, ಶೀತ ಸಮಯದಲ್ಲಿ ಸೂಪು ಕುಡಿಯುವುದರಿಂದ ಹಿತ ಅನುಭವ ಆಗತ್ತದೆ. ಆದರೆ, ಕೆಲವು ಮಂದಿ ಇದನ್ನು ಇಷ್ಟ ಪಡುವುದಿಲ್ಲ. ಆದರೆ, ಈ ಋತುಮಾನದಲ್ಲಿ ಸೂಪ್ ಅನ್ನು ನಿರ್ಲಕ್ಷ್ಯ ಮಾಡುವುದು ಒಳ್ಳೆಯದಲ್ಲ. ಟೊಮೇಟೊ, ಚಿಕನ್ ಅಥವಾ ಇನ್ನಿತರ ಸೂಪ್ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಇದು ಶೀತದ ಸಮಯದಲ್ಲಿ ಉಂಟಾಗುವ ಗಂಟಲಿನ ಕಿರಿಕಿರಿಗೆ ಆರಾಮ ಉಂಟು ಮಾಡುತ್ತದೆ.