ಕರ್ನಾಟಕ

karnataka

ಆಲ್ಝೈಮರ್ ಕಾಯಿಲೆ: ಪತ್ತೆಗೆ ಹೊಸ ವಿಧಾನ ಕಂಡುಕೊಂಡ ಜೋಧಪುರ ಐಐಟಿ ವಿಜ್ಞಾನಿಗಳು

By

Published : Sep 21, 2022, 5:55 PM IST

ಆಲ್ಝೈಮರ್ ಪತ್ತೆಗೆ ಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಮಾಲಿಕ್ಯುಲರ್ ಪ್ರೋಬ್, ಬ್ರೈನ್ ಮ್ಯಾಪಿಂಗ್ ಮಾಡಲು ಸಹಾಯ ಮಾಡುತ್ತದೆ. ಇದನ್ನು ಮೆದುಳಿಗೆ ಕಳುಹಿಸಿದಾಗ, ಇದು ರೋಗದ ಬಗ್ಗೆ ಮಾಹಿತಿ ನೀಡಿ, ಕೆಂಪು ಬೆಳಕನ್ನು ರವಾನಿಸುತ್ತದೆ.

ಆಲ್ಝೈಮರ್​
ಆಲ್ಝೈಮರ್​

ಜೋಧ್‌ಪುರ: ಜೋಧ್‌ಪುರದ ಐಐಟಿಯ ಸಂಶೋಧಕರು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಮೆದುಳಿನಲ್ಲಿರುವ ಅಲ್ಝೈಮರ್ ಕಾಯಿಲೆಯನ್ನು ಪತ್ತೆಹಚ್ಚಲು ಸಹಾಯ ಮಾಡುವ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದಾರೆ. ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾದ ಮಾಲಿಕ್ಯುಲರ್ ಪ್ರೋಬ್, ರೋಗವನ್ನು ಪತ್ತೆಹಚ್ಚಲು, ಬ್ರೈನ್ ಮ್ಯಾಪಿಂಗ್ ಮಾಡಲು ಸಹಾಯ ಮಾಡುತ್ತದೆ. ಮಾಲಿಕ್ಯುಲರ್ ಪ್ರೋಬ್​ನನ್ನು ಮೆದುಳಿಗೆ ಕಳುಹಿಸಿದಾಗ, ಇದು ರೋಗದ ಬಗ್ಗೆ ಸುಳಿವು ನೀಡುತ್ತದೆ.

ಐಐಟಿ ಜೋಧ್‌ಪುರದ ಬಯೋಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಾ. ಸುರ್ಜಿತ್ ಘೋಷ್ ಮಾತನಾಡಿ, ಈ ಹೊಸ ತಂತ್ರಜ್ಞಾನದ ಮೂಲಕ ಅಲ್ಝೈಮರ್ ಕಾಯಿಲೆಗೆ ಕಾರಣವಾಗುವ ಮೆದುಳಿನಲ್ಲಿರುವ ಅಮಿಲಾಯ್ಡ್ ಬೀಟಾವನ್ನು ಕಂಡು ಹಿಡಿಯಬಹುದಾಗಿದೆ. ಅಮಿಲಾಯ್ಡ್ ಬೀಟಾ ಮೆದುಳಿನಲ್ಲಿ ಸಂಗ್ರಹಗೊಂಡು ನರಕೋಶಗಳಿಗೆ ಹಾನಿಯುಂಟು ಮಾಡುತ್ತದೆ. ಇದು ಕ್ರಮೇಣ ನೆನಪಿನ ಶಕ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಅಲ್ಝೈಮರ್​ ಮೆದುಳಿನ ರೋಗ ಅಲ್ಲ: ಇದು ಬುದ್ಧಿಮಾಂದ್ಯತೆಯ ಸಾಮಾನ್ಯ ರೂಪ

ಮೆದುಳಿನಲ್ಲಿ ಅಮಿಲಾಯ್ಡ್ ಬೀಟಾ ಇರುವುದನ್ನು ಮಾಲಿಕ್ಯುಲರ್ ಪ್ರೋಬ್ ಮೂಲಕ ಕಂಡು ಹಿಡಿಯಲಾಗುತ್ತದೆ. ಮೆದುಳಿನಲ್ಲಿ ಅಮಿಲಾಯ್ಡ್ ಬೀಟಾ ಇರುವ ಬಗ್ಗೆ ಪತ್ತೆ ಹಚ್ಚಿದ ನಂತರ ಮಾಲಿಕ್ಯೂಲರ್​​ ಪ್ರೋಬ್ ಕೆಂಪು ಬೆಳಕನ್ನು ಹೊರ ಸೂಸುತ್ತದೆ. ಸಂಶೋಧನಾ ಕಾರ್ಯವನ್ನು SCS ಕೆಮಿಕಲ್ ನ್ಯೂರೋಸೈನ್ಸ್ ಜರ್ನಲ್‌ನಲ್ಲಿ ಸಹ ಪ್ರಕಟಿಸಲಾಗಿದೆ.

ಐಐಟಿ ಜೋಧಪುರದ ಜೈವಿಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಸುರ್ಜಿತ್ ಘೋಷ್ ಅವರ ಸಹ ಸಂಶೋಧಕರಾದ ರತ್ನಂ ಮಲೈಸ್, ಜೂಹಿ ಖಾನ್ ಮತ್ತು ರಾಜಶೇಖರ್ ರಾಯ್ ಅವರೊಂದಿಗೆ ಸಂಶೋಧನಾ ಕಾರ್ಯವನ್ನು ನಡೆಸಿದ್ದಾರೆ.


ABOUT THE AUTHOR

...view details