ಹೈದರಾಬಾದ್: ಇತ್ತೀಚಿನ ಅಧ್ಯಯನ ಪ್ರಕಾರ, ಜಪಾನಿನ ಆಹಾರ ಪದ್ದತಿಯೂ ಜನರಲ್ಲಿ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆ (ಎನ್ಎಎಫ್ಎಲ್ಡಿ) ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಈ ಸಂಬಂಧ ಎಂಡಿಪಿಐನಲ್ಲಿ ಪ್ರಕಟಿಸಲಾಗಿದೆ. ಈ ಆಹಾರ ಪದ್ಧತಿಯಲ್ಲಿ ಜಪಾನಿನ ಆಹಾರಗಳಾದ ಸೋಯಾ, ಸಮುದ್ರಾಹಾರ ಮತ್ತು ಸಮುದ್ರ ಉತ್ಪನ್ನಗಳು ಇರುತ್ತದೆ. ಇದು ಯಕೃತ್ ಫೈಬ್ರೊಸಿಸ್ ಸಮಸ್ಯೆಯನ್ನು ಹಂತ ಹಂತವಾಗಿ ನಿವಾರಣೆ ಮಾಡುತ್ತದೆ. ಈ ಸಂಬಂಧ ಜಪಾನಿನ ಒಸ್ಕಾ ಮೆಟ್ರೊಪಾಲಿಟನ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಎನ್ಎಎಫ್ಎಲ್ಡಿ ಹೊಂದಿರುವ 136 ಮಂದಿ ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಅಧ್ಯಯನದ ಅನುಸಾರ, ಭಾಗಿದಾರರಿಗೆ 12 ಉತ್ಪನ್ನಗಳನ್ನು ಒಳಗೊಂಡ ಡಯಟ್ ಬಾಕ್ಸ್ ಅನ್ನು ನೀಡಲಾಗಿದೆ. ಜಪಾನಿನ ಡಯಟ್ನಲ್ಲಿನ ಈ 12 ರೀತಿಯ ಆಹಾರಗಳಲ್ಲಿ ಅನ್ನ, ಮಿಸೊ ಸೂಪ್, ಉಪ್ಪಿನಕಾಯಿ, ಸೋಯಾ ಉತ್ಪನ್ನ, ಹಸಿರು ಮತ್ತು ಹಳದಿ ತರಕಾರಿ, ಹಣ್ಣು, ಸಮುದ್ರಾಹಾರ, ಮಶ್ರೂಮ್, ಸಮುದ್ರಹಾರ, ಗ್ರೀನ್ ಟೀ, ಕಾಫಿ, ಬೀಫ್ ಮತ್ತು ಫೋರ್ಕ್ ಸೇರಿಸಲಾಗಿದೆ. ಸೋಯಾ, ಸಮುದ್ರಾಹಾರ ಮತ್ತು ಕಡಲ ಆಹಾರಗಳ ಸೇವನೆಯಿಂದ ಆಲ್ಕೊಹಾಲ್ ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯೊಂದಿಗೆ ಯಕೃತ್ತಿನ ಫೈಬ್ರೋಸಿಸ್ನ ನಿಧಾನಗತಿಯ ಪ್ರಗತಿಯನ್ನು ಹೊಂದಿದೆ ಎಂದು ಫಲಿತಾಂಶದಲ್ಲಿ ತೋರಿಸಿದೆ.
ಇದರ ಹೊರತಾಗಿ, ಜಪಾನಿನ ಆಹಾರ ಪದ್ದತಿ ಆರೋಗ್ಯ ಪ್ರಯೋಜನಗಳನ್ನು ಅನೇಕ ಇತರ ಸಂಶೋಧನೆಗಳಲ್ಲಿ ದೃಢಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಜಪಾನಿನ ಡಯಟ್ ಜಾಗತಿಕವಾಗಿ ಎಲ್ಲೆಡೆ ಟ್ರೆಂಡ್ ಆಗಿದೆ. ಸುಶಿ, ಮಿಸೊ ಸೂಪ್, ತರಕಾರಿ ಉಪ್ಪಿನಕಾಯಿ, ಟೊಫುನಿಂದ ಮಾಡಿದ ಆಹಾರ, ಜಪಾನಿನ ಶೈಲಿಯ ಮೀನು ಮತ್ತು ಇತರ ಜಪಾನಿ ಆಹಾರಗಳು ಜಗತ್ತಿನಾದ್ಯಂತ ಹೆಚ್ಚು ಇಷ್ಟಪಡುತ್ತಾರೆ. ಇದರಿಂದಾಗಿ ಜಪಾನ್ ಡಯಟ್ ಆರೋಗ್ಯದ ಹೊರತಾಗಿ ರುಚಿಯಿಂದಲೂ ಸೆಳೆದಿದೆ.
ಜಪಾನೀಯರ ಜೀವನಶೈಲಿ ಮತ್ತು ಡಯಟ್ ಹಾಗೂ ಡಯಟರಿ ಉತ್ಪನ್ನಗಳು ಜಪಾನಿ ಜನರು ದೀರ್ಘ ಜೀವತಾವಧಿಗೆ ಕೊಡುಗೆ ಹೊಂದಿದೆ. 2019ರ ಅನುಸಾರ ಜಾಗತಿಕವಾಗಿ ಜಪಾನಿಯ ಜೀವಿತಾವಧಿ ಅತಿ ಹೆಚ್ಚಿದೆ. ಅಂಕಿ - ಅಂಶಗಳ ಅನುಸಾರ ಜಪಾನ್ನಲ್ಲಿ 90 ವರ್ಷಕ್ಕೆ ಮೀರಿದ ಜನಸಂಖ್ಯೆ 23 ಲಕ್ಷ ಇದ್ದರೆ, 100 ವರ್ಷಕ್ಕೆ ಮೇಲ್ಪಟ್ಟು 71 ಸಾವಿರ ಜನರು ಇದ್ದಾರೆ.
ಈ ಕುರಿತು ವಿವರಣೆ ನೀಡಿರುವ ನವದೆಹಲಿಯ ಡಯಟೀಷಿಯನ್ ಡಾ ದಿವ್ಯಾ ಶರ್ಮಾ ಮತ್ತು ಮುಂಬೈನ ಜಪಾನಿ ಶೈಲಿ ಆಹಾರ ಶೆಫ್ ಮನವ್ ಬಿಜಲ್ನಿ, ಜಪಾನಿ ಆಹಾರಗಳು ಆರೋಗ್ಯಯುತ ಪ್ರಯೋಜನ ಹೊಂದಿದೆ. ಜಪಾನಿನ ಆಹಾರ ಅದರಲ್ಲೂ ವಿಶೇಷವಾಗಿ ದೈನಂದಿನ ಸೇವನೆ ಆಹಾರಗಳು ಸರಳ, ತಾಜಾ ಮತ್ತು ರುಚಿ ತಕ್ಕ ಸಮತೋಲನ ಹೊಂದಿದೆ. ಅವರ ಡಯಟ್ನಲ್ಲಿ ವಿವಿಧ ರೀತಿಯಲ್ಲಿ ತರಕಾರಿಗಳನ್ನು ಸೇರಿಸುವುದರ ಜೊತೆಗೆ ಬೇಯಿಸುವ ವಿಧಾನದಲ್ಲಿ ವಿಶೇಷ ಕಾಳಜಿ ವಹಿಸುತ್ತಾರೆ.
ಸಸ್ಯಾಹಾರಿ ಇರಲಿ ಅಥವಾ ಮಾಂಸಹಾರಿ ಆಹಾರ ಇರಲಿ, ತಾಜಾ ಉತ್ಪನ್ನಗಳ ಬಳಕೆ ಮಾಡುತ್ತಾರೆ. ಜೊತೆಗೆ ಹಬೆ, ಬೇಯಿಸುವುದು ಅಥವಾ ರೋಸ್ಟ್ ಮೂಲಕ ಅವುಗಳ ಸೇವನೆ ಮಾಡಲಾಗುವುದು. ಇದರಿಂದ ಅವುಗಳನ್ನು ಪೋಷಕಾಂಶಗಳು ಮತ್ತೆ ಸೇರುತ್ತದೆ. ಅವರ ಡಯಟ್ನಲ್ಲಿ ಮಾಂಸ, ಸಕ್ಕರೆ, ಆಲೂಗಡ್ಡೆ ಮತ್ತು ಡೈರಿ ಉತ್ಪನ್ನಗಳನ್ನು ಕಡಿಮೆ ಬಳಕೆ ಮಾಡುತ್ತಾರೆ.