ಟೋಕಿಯೊ(ಜಪಾನ್): ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೇ ಗರ್ಭ ನಿರೋಧಕ ಮಾತ್ರೆಗಳನ್ನು ನೀಡುವ ಸಂಬಂಧ ಈಗಾಗಲೇ ಅನೇಕ ದೇಶಗಳು ದಿಟ್ಟ ಹೆಜ್ಜೆ ಮುಂದಿಟ್ಟಿದೆ. ಯುವತಿಯರ ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಮತ್ತು ಜಾಗತಿಕ ಆರ್ಥಿಕತೆ ಜೊತೆಗೆ ಜನಸಂಖ್ಯೆಯ ಕಾರಣದಿಂದಲೂ ಇದು ಮಹತ್ವ ಪಡೆದಿದೆ. ಇದೀಗ ಈ ದೇಶಗಳ ಸಾಲಿನಲ್ಲಿ ಜಪಾನ್ ಕೂಡ ಜೊತೆಯಾಗಿದೆ.
ಜಪಾನ್ನ ಆರೋಗ್ಯ ಸಚಿವಾಲಯ ಸೋಮವಾರ ಈ ಸಂಬಂಧ ಘೋಷಣೆ ಹೊರಡಿಸಿದೆ. ಈ ಬೇಸಿಗೆಯಿಂದ ದೇಶದಲ್ಲಿ ಯಾವು ಪ್ರಿಸ್ಕ್ರಿಪ್ಷನ್ ಇಲ್ಲದೇ, ತುರ್ತು ಗರ್ಭ ನಿರೋಧಕ ಮಾತ್ರೆಗಳ ಪ್ರಯೋಗಿಕ ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಕ್ಯೊಡೊ ನ್ಯೂಸ್ ವರದಿ ಮಾಡಿದೆ.
ಫಾರ್ಮಸಿಗಳು, ಖಾಸಗಿ ರೂಮ್ಗಳು ಮತ್ತು ವೀಕೆಂಡ್ಗಳನ್ನು ರಾತ್ರಿ ಮತ್ತು ರಜೆ ಸಮಯದಲ್ಲಿ ಈ ಮಾತ್ರೆಗಳು ಲಭ್ಯವಾಗುವಂತೆ ನೋಡಿಕೊಳ್ಳುವ ಸಂಬಂಧ ಸಚಿವಾಲಯದ ಸಮಿತಿ ಕೂಡ ನಡೆದ ಸಭೆಯಲ್ಲಿ ಅನುಮತಿ ಸೂಚಿಸಿದೆ. ಇದರ ಜೊತೆಗೆ ಅವರು ಸ್ತ್ರಿರೋಗ ಕ್ಲಿನಿಕ್ ಪ್ರದೇಶಗಳಲ್ಲಿ ಅವರು ಸಮನ್ವಯಗೊಳಿಸಲು ಸಹ ಶಕ್ತರಾಗಿರಬೇಕು ಎಂದು ತಿಳಿಸಿದೆ.
ಪ್ರಸ್ತುತ ನಿಯಮ ಅನುಸಾರ, ಮಹಿಳೆ, ಲೈಂಗಿಕ ದೌರ್ಜನ್ಯದ ಸಂತ್ರಸ್ತರು ತುರ್ತು ಗರ್ಭ ನಿರೋಧಕ ಮಾತ್ರೆಗಳ ಪ್ರಿಸ್ಕ್ರಿಪ್ಷನ್ ಅನ್ನು ಪಡೆಯಲು ಕ್ಲಿನಿಕ್ ಅಥವಾ ಆಸ್ಪತ್ರೆಗಳಿಗೆ ಪ್ರಯಾಣಿಸಬೇಕಾಗುತ್ತದೆ. ಅಸುರಕ್ಷಿತ ಲೈಂಗಿಕತೆಗೆ ಒಳಗಾದ 72 ಗಂಟೆ ಒಳಗೆಯೇ ಇದು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಹಿನ್ನೆಲೆಯಲ್ಲಿ ತತ್ಕ್ಷಣಕ್ಕೆ ಇದನ್ನು ಪಡೆಯಬೇಕಿದೆ. ಈ ಹಿನ್ನೆಲೆ ಇದನ್ನು ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೇ ಪಡೆಯಲು ಅನುಮತಿ ನೀಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
2017ರಿಂದಲೂ ಸಚಿವಾಲಯದ ಸಮಿತಿ, ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೇ, ಮಾತ್ರೆಗಳ ಮಾರಾಟ ಮಾಡುವ ಸಂಬಂದ ಚರ್ಚೆ ನಡೆಸುತ್ತಿದೆ. ಇದೀಗ ಅದಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಈ ಸಂಬಂಧ ಟೀಕೆಗಳು ಕೂಡ ಕೇಳಿ ಬಂದಿದೆ. ಈ ಮಾತ್ರೆಗಳು ಲಭ್ಯವಾಗುವುದರಿಂದ ಅಸುರಕ್ಷಿತ ಲೈಂಗಿಕ ಕ್ರಿಯೆಯ ಬೇಜವಾಬ್ದಾರಿತನಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂಬ ವಾದ ಕೂಡ ಕೇಳಿ ಬಂದಿದೆ.
ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆ ಅನುಸಾರ, 90 ದೇಶಗಳಲ್ಲಿ ಯಾವುದೇ ಪ್ರಿಸ್ಕ್ರಿಪ್ಷನ್ ಇಲ್ಲದೇ ತುರ್ತು ಗರ್ಭ ನಿರೋಧಕಗಳ ಮಾರಾಟ ಮಾಡಲಾಗುತ್ತಿದೆ. ದೇಶ ಮತ್ತು ವಿದೇಶದಲ್ಲಿ ಕ್ಲಿನಿಕಲ್ ಸಂಶೋಧನೆಗಳು ಕೂಡ ಈ ತುರ್ತು ಗರ್ಭನಿರೋಧಕ ಮಾತ್ರೆಗಳ ಪರಿಣಾಮ ದರವನ್ನು ಶೇ 80ರಷ್ಟು ತೋರಿಸಿದೆ. ವೈದ್ಯಕೀಯ ವೃತ್ತಿಪರರು ಜಪಾನ್ನಲ್ಲಿ ಇದರ ಲಭ್ಯತೆಯ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ. ಇದರಿಂದಾಗಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರು ಗರ್ಭಪಾತಕ್ಕೆ ಒಳಗಾಗುವುದನ್ನು ತಡೆಯಬಹುದು ಎಂಬುದಾಗಿ ಅವರು ವಾದಿಸಿದ್ದಾರೆ.
2020ರ ಕೊನೆಯಲ್ಲಿ ವಿವಿಧ ಲಿಂಗ ಸಮಾನತೆಯ ನೀತಿಗಳಿಗೆ ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ, ತುರ್ತು ಗರ್ಭನಿರೋಧಕ ಮಾತ್ರೆಗಳ ಪ್ರತ್ಯಕ್ಷವಾದ ವಿತರಣೆಗೆ ಸಂಬಂಧಿಸಿದ ಚರ್ಚೆಗಳು ಪುನರಾರಂಭಗೊಂಡಿವೆ. ಕಳೆದ ಡಿಸೆಂಬರ್ ಅಂತ್ಯದಿಂದ ಆರಂಭವಾಗಿ ಜನವರಿವರೆಗೆ ಆರೋಗ್ಯ ಸಚಿವಾಲಯ 46, 312 ಸಾರ್ವಜನಿಕ ಹೇಳಿಕೆಗಳನ್ನು ಪಡೆದಿದೆ. ಇದರಲ್ಲಿ ಬಹುತೇಕ ಮಾರಾಟಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: 'ಮಗುವಿಗೆ ಜನ್ಮ ನೀಡಬೇಕೇ, ಬೇಡವೇ ಎಂಬುದು ಮಹಿಳೆಯ ನಿರ್ಧಾರ': 8 ತಿಂಗಳ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ