ಹೈದರಾಬಾದ್:ಫಲವತ್ತತೆ ಎಂಬ ಸಮಸ್ಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಕಾಡ ಬಹುದಾಗಿದೆ. ಇದಕ್ಕೆ ದೈಹಿಕ ಸಮಸ್ಯೆ ಮತ್ತು ಇತರ ಕಾರಣಗಳು ಇರಬಹುದು. 35 ವರ್ಷವಾದ ಬಳಿಕ ಮಹಿಳೆಯರ ಫಲವತ್ತತೆ ಕುಗ್ಗುವ ಹಿನ್ನೆಲೆಯಲ್ಲಿ ಆಕೆ ಸಲಭವಾಗಿ ಮಕ್ಕಳನ್ನು ಪಡೆಯುವುದು ಕಷ್ಟವಾಗಬಹುದು. ಪುರುಷರಲ್ಲೂ ಕೂಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಿ ಗರ್ಭಧಾರಣೆಗೆ ತೊಡಕಾಗಬಹುದು. ಇದು ಫಲವತ್ತತೆಗೆ ಪ್ರಮುಖ ಕಾರಣವಾಗುತ್ತದೆ.
ಈ ಫಲವತ್ತತೆ ಸಮಸ್ಯೆ ಅನೇಕ ಜೋಡಿಗಳಿಗೆ ಮಗುವನ್ನು ಹೊಂದಿರುವ ಕನಸಿಗೆ ತೊಡಕಾಗುವಂತೆ ಮಾಡುತ್ತದೆ. ಇಂತಹ ಸಮಸ್ಯೆಗೆ ವೈದ್ಯಕೀಯ ಲೋಕದಲ್ಲಿ ಹುಟ್ಟಿದ ಪರಿಹಾರವೇ ಐವಿಎಫ್. ಇನ್ವಿಟ್ರೋ ಫರ್ಟಿಲೈಸೆಷನ್. ಟೆಸ್ಟ್ ಟ್ಯೂಬ್ ಬೇಬಿ ಎಂದೂ ಕರೆಯಲ್ಪಡುವ ನೆರವಿನ ಸಂತಾನೋತ್ಪತ್ತಿ ತಂತ್ರ ಇದಾಗಿದೆ. ಈ ತಂತ್ರದ ಮೂಲಕ 1978ರಲ್ಲಿ ಮೊದಲ ಬಾರಿಗೆ ಜನಿಸಿದ ಮಗುವೇ ಲೂಯಿಸ್ ಬ್ರೌನ್. ಫಲವತ್ತತೆಯ ಚಿಕಿತ್ಸೆಯಲ್ಲಿ ಇದೊಂದು ದೊಡ್ಡ ಮೈಲಿಗಲ್ಲಾಗಿದ್ದು, ತಮ್ಮದೇ ಮಗುವನ್ನು ಹೊಂದಲು ಕಷ್ಟಪಡುತ್ತಿದ್ದ ಅನೇಕ ದಂಪತಿಗಳಿಗೆ ಇದು ಹೊಸ ಆಶಾಕಿರಣವಾಗಿತ್ತು. ಈ ಐವಿಎಫ್ ಚಿಕಿತ್ಸೆ ಮಹತ್ವವನ್ನು ಗಮನಿಸಿದ ಹಿನ್ನೆಲೆ ಜುಲೈ 25 ಅನ್ನು ವಿಶ್ವ ಐವಿಎಫ್ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಚಿಕಿತ್ಸೆ ಮತ್ತು ಈ ತಂತ್ರದ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು.
ಏನಿದು ಐವಿಎಫ್ ಚಿಕಿತ್ಸೆ:ಐವಿಎಫ್ ತಂತ್ರದ ಮೂಲಕ ಪಕ್ವವಾದ ಅಂಡಾಣುಗಳನ್ನು ಅಂಡಾಂಶಯದ ಮೂಲಕ ಮೊದಲು ಪಡೆಯಲಾಗುತ್ತದೆ. ಇದನ್ನೂ ವೀರ್ಯಾಣುಗಳ ಮೂಲಕ ಪ್ರಯೋಗಾಲಯದಲ್ಲಿ ಫಲವತ್ತತ್ತೆ ಮಾಡಲಾಗುತ್ತದೆ. ಈ ಫಳಿತಗೊಳಿಸಿದ ಅಂಡಾಣುಗಳು ಬಳಿಕ ಗರ್ಭಕೋಶದೊಳಗೆ ವರ್ಗಾಯಿಸಲಾಗುತ್ತದೆ. ಈ ಸಂಪೂರ್ಣ ಚಕ್ರಕ್ಕೆ ಮೂರು ವಾರಗಳ ಸಮಯ ಬೇಕಾಗುತ್ತದೆ.