ಲಂಡನ್: ವಾಕಿಂಗ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂಬ ಮಾಹಿತಿ ಅನೇಕರಿಗೆ ತಿಳಿದಿರುವ ಸಂಗತಿ. ದಿನದಲ್ಲಿ ಯಾವ ಹೊತ್ತಿನಲ್ಲಾದರೂ ಕನಿಷ್ಟ ದೂರು ನಡೆಯುವ ಮೂಲಕ ಅನೇಕ ಸಮಸ್ಯೆಗಳನ್ನು ಪರಿಹಾರ ಕಾಣಬಹುದು ಎಂದು ವೈದ್ಯರು ಕೂಡ ತಿಳಿಸುತ್ತಾರೆ. ಇದೀಗ ಹೊಸ ಸಂಶೋಧನೆಯೊಂದು ದಿನದಲ್ಲಿ ಕನಿಷ್ಟ 11 ನಿಮಿಷವಾದರೂ ವಾಕ್ ಮಾಡಿ. ಇದರಿಂದ ಅವಧಿ ಪೂರ್ವ ಸಾವು ಅಂದರೆ, ಅನಿರೀಕ್ಷಿತ ಸಾವು ಕಡಿಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ವಾರದಲ್ಲಿ 75 ನಿಮಿಷಗಳ ಬಿರುಸಿನ ನಡಿಗೆ, ಡ್ಯಾನ್ಸಿಂಗ್, ಬೈಕ್ ರೈಡಿಂಗ್, ಟೆನ್ನಿಸ್ ಆಟ ಅಥವಾ ಹೈಕಿಂಗ್ ಮಾಡುವುದರಿಂದ ಹೃದಯ ಸಂಬಂಧಿ ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದ ಉಂಟಾಗುವ ಅವಧಿ ಪೂರ್ವ ಸಾವು ತಡೆಯಬಹುದು ಎಂದು ಅಧ್ಯಯನ ತೊಳಿಸಿದೆ.
ಈ ಅಧ್ಯಯನ ವಾರದಲ್ಲಿ ಕನಿಷ್ಟ 150 ನಿಮಿಷಗಳು ದೈಹಿಕ ಚಟುವಟಿಕೆಗಳನ್ನು ಮಾಡುವಂತೆ ಕೂಡ ಶಿಫಾರಸ್ಸು ಮಾಡಿದೆ. ಇದು ಮಧ್ಯಮ- ತೀವ್ರತೆ ದೈಹಿಕ ಚಟುವಟಿಕೆ ಆಗಿರಬೇಕು. ವಾರದಲ್ಲಿ 75 ನಿಮಿಷ ಅಥವಾ ತಿಂಗಳಲ್ಲಿ 11 ನಿಮಿಷ ರೂಢಿಸಿಕೊಳ್ಳುವುದರಿಂದ 10 ಅವಧಿಪೂರ್ವ ಸಾವುಗಳಲ್ಲಿ ಒಂದನ್ನು ತಡೆಬಹುದಾಗಿದೆ ಎಂದು ಬ್ರಿಟನ್ನ ಕೆಂಬ್ರಿಡ್ಜ್ ಯುನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ.
ವಾರದಲ್ಲಿ 150 ನಿಮಿಷಗಳ ಮಧ್ಯಮ- ತೀವ್ರತೆಯ ದೈಹಿಕ ಚಟುವಟಿಕೆಗಳಿಂದಾಗಿ ಉತ್ತಮ ಫಲಿತಾಂಶಗಳನ್ನು ಕಾಣಬಹುದಾಗಿದೆ. ಕೆಲವು ದೈಹಿಕ ಚಟುವಟಿಕೆಯಲ್ಲಿ ರೂಢಿಸಿಕೊಳ್ಳಿವುದು ಉತ್ತಮ. ವಾರದಲ್ಲಿ 75 ನಿಮಿಷದ ನಡಿಗೆಯು ಕ್ರಮೇಣವಾಗಿ ಹೆಚ್ಚಿನ ಹಂತಕ್ಕೆ ಸಾಗುತ್ತದೆ ಎಂದು ದೊರೆನ್ ಬರ್ಗ್ ತಿಳಿಸಿದ್ದಾರೆ.