ಮಾನವನ ಜೀವಿತಾವಧಿ ವೃದ್ಧಿಗೆ ಏನೆಲ್ಲಾ ಮಾಡಬೇಕು? ಇದಕ್ಕೆ ಸಹಜವಾಗಿ ವೈದ್ಯರಲ್ಲದೇ, ಯಾರನ್ನಾದರೂ ತಿಳಿದವರನ್ನು ಕೇಳಿದರೆ, ದಿನಂಪ್ರತಿ ವ್ಯಾಯಾಮ, ಕಡಿಮೆ ಕೊಬ್ಬಿನ ಅಂಶವುಳ್ಳ, ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವನೆ, ಕಣ್ತುಂಬಾ ಸುಖನಿದ್ರೆ, ಮದ್ಯಪಾನ, ಧೂಮಪಾನದಿಂದ ದೂರವಿರಬೇಕು ಎಂಬ ಸಲಹೆ ಕೊಡ್ತಾರೆ. ಇದಲ್ಲದೇ, 'ಲೈಂಗಿಕ ಸಂಭೋಗ'ವೂ ಕೂಡ ಮನುಷ್ಯನ ಆಯಸ್ಸನ್ನು ವೃದ್ಧಿಸುತ್ತದೆಯೇ ಎಂಬ ಪ್ರಶ್ನೆಗೆ 'ಹೌದು' ಅಂತಿವೆ ಸಂಶೋಧನೆಗಳು.
ನಿಯಮಿತವಾದ ಲೈಂಗಿಕ ಕ್ರಿಯೆಯು ಮನುಷ್ಯನ ಮನಸ್ಸು ಮತ್ತು ದೇಹ ಸಮತೋಲಿತವಾಗಿರಲು ನೆರವಾಗುತ್ತದೆ. ಅಲ್ಲದೇ, ಪ್ರಣಯವು ಜೀವಿತಾವಧಿಯನ್ನು 20 ವರ್ಷಗಳವರೆಗೆ ಹೆಚ್ಚಿಸುತ್ತದೆ ಎನ್ನುತ್ತಾರೆ ಸಂಶೋಧಕರು. ಲೈಂಗಿಕ ಕ್ರಿಯೆಯು ಸಾವಿನ ಅಪಾಯವನ್ನು ಅರ್ಧದಷ್ಟು ಕಡಿಮೆ ಮಾಡಬಹುದು ಎಂದು ಕೂಡ ಹೇಳಲಾಗುತ್ತಿದೆ. ಇದಕ್ಕೆ ಸಕಾರಣ ಇಲ್ಲವಾದರೂ, ಸಾಧ್ಯತೆಗಳು ಹೆಚ್ಚಿವೆಯಂತೆ.
ಲೈಂಗಿಕತೆಯು ಪಾಲುದಾರರ ಜತೆಗಿನ ನಿಕಟ ಸಂಬಂಧದ ಸಂಕೇತವಾಗಿದೆ. ಮಾನವ ಶಕ್ತಿಯನ್ನೂ ಹೆಚ್ಚಿಸುವ ಜೊತೆಗೆ ಮಾನಸಿಕ ಖಿನ್ನತೆ, ಚಿಂತೆಯನ್ನೂ ದೂರ ಮಾಡುವ ಶಕ್ತಿ ಇದಕ್ಕಿದೆ ಎಂಬುದು ಸಂಶೋಧಕರ ಮಾತು.
ಪ್ರಣಯವು ವ್ಯಾಯಾಮದಂತೆಯೂ ಕೆಲಸ ಮಾಡುತ್ತದೆ. ನಿಯಮಿತವಾಗಿ ವ್ಯಾಯಾಮ(ಪ್ರಣಯ) ಮಾಡುವುದರಿಂದ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಸಾಮಾನ್ಯವಾಗಿ ಲೈಂಗಿಕತೆಯು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ವಾರಕ್ಕೆ ಒಮ್ಮೆ ಲೈಂಗಿಕ ಕ್ರಿಯೆ ಮಾಡುವವರಿಗಿಂತ ವಾರದಲ್ಲಿ 2 ಬಾರಿ ಸೆಕ್ಸ್ ಮಾಡುವ ಜನರಲ್ಲಿ ಹಿಮೋಗ್ಲೋಬಿನ್ ಅಂಶದ ಪ್ರಮಾಣ ಹೆಚ್ಚಾಗಿ ಹೊಂದಿರುತ್ತಾರೆ ಎಂದು ವಿಕ್ಸ್ ವಿಶ್ವವಿದ್ಯಾಲಯವು ತನ್ನ ಅಧ್ಯಯನದಲ್ಲಿ ಕಂಡುಕೊಂಡಿದೆ. ರೋಗ ನಿರೋಧಕ ಶಕ್ತಿಯ ಕಾರ್ಯನಿರ್ವಹಣೆಯಲ್ಲಿ ಹಿಮೋಗ್ಲೋಬಿನ್ ಹೆಚ್ಚಿನ ಪಾತ್ರ ವಹಿಸುತ್ತದೆ ಎಂಬುದು ಅಧ್ಯಯನದ ಸಾರಾಂಶವಾಗಿದೆ.
ಲೈಂಗಿಕ ಜೀವನವನ್ನು ಹೆಚ್ಚು ನೈಸರ್ಗಿಕ ಮತ್ತು ಆಸಕ್ತಿದಾಯಕವಾಗಿರಿಸಲು ಏನು ಮಾಡಬಹುದು. ವ್ಯಾಯಾಮದ ಜೊತೆಗೆ ನಿಮ್ಮ ಆಹಾರ ಕ್ರಮದ ಬಗ್ಗೆಯೂ ಹೆಚ್ಚು ಗಮನ ಹರಿಸಬೇಕು.