ಬರ್ಮಿಂಗ್ಹ್ಯಾಮ್:ಸಿಗರೇಟ್ ಸೇದುವವರ ಶ್ವಾಸಕೋಶದೊಂದಿಗೆ ಇ-ಸಿಗರೇಟ್ ಸೇದುವವರ ಜೊತೆ ಹೋಲಿಸಿ ಒಂದು ಅಧ್ಯಯನ ನಡೆಸಲಾಗಿದ್ದು, ತಂಬಾಕು ಇರುವ ಸಿಗರೇಟ್ ಸೇದುವವರಿಗಿಂತ ಇ-ಸಿಗರೇಟ್ ಸೇದುವವರಿಗೆ ಶ್ವಾಸಕೋಶದ ಉರಿಯೂತ ಹೆಚ್ಚು ಕಂಡು ಬಂದಿದೆ. ದ ಜರ್ನಲ್ ಆಫ್ ನ್ಯೂಕ್ಲಿಯರ್ ಮೆಡಿಸಿನ್‌ನಲ್ಲಿ ಪ್ರಕಟವಾದ ಪೈಲಟ್ ಅಧ್ಯಯನದಿಂದ ಈ ಮಾಹಿತಿ ತಿಳಿದು ಬಂದಿದೆ.
2022ರಲ್ಲಿ 24.6 ಶತಕೋಟಿ ಡಾಲರ್:ಇ-ಸಿಗರೇಟ್‌ಗಳು ಈಗ ಹೊಸ ಧೂಮಪಾನದ ಸಾಧನಗಳಾಗಿವೆ. ಅವುಗಳಿಂದ ದೊಡ್ಡ ವ್ಯಾಪಾರವೇ ನಡೆಯುತ್ತಿದೆ. ಜಾಗತಿಕ ಇ-ಸಿಗರೇಟ್ ಅಥವಾ ವೇಪ್ ಮಾರುಕಟ್ಟೆ ಮೌಲ್ಯವು 2013ರಲ್ಲಿ 1.7 ಶತಕೋಟಿ ಡಾಲರ್ (ಜಿಬಿಪಿ 1.4 ಶತಕೋಟಿ)ನಿಂದ 2022ರಲ್ಲಿ 24.6 ಶತಕೋಟಿ ಡಾಲರ್ (ಜಿಬಿಪಿ 20.8 ಶತಕೋಟಿ) ಅಂದಾಜು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಮಾರಾಟದಲ್ಲಿನ ಈ ಬೃಹತ್ ಹೆಚ್ಚಳವು ಧೂಮಪಾನಿಗಳ ಮಾರುಕಟ್ಟೆಯನ್ನು ಮೀರಿದ ಬಳಕೆಯ ಏರಿಕೆಯನ್ನು ಪ್ರತಿಬಿಂಬಿಸುತ್ತದೆ. ಯುವಕರ ಸಂಖ್ಯೆ ಕೂಡಾ ಸಾರ್ವಕಾಲಿಕ ಏರಿಕೆ ಕಂಡಿದೆ. ಪ್ರಸ್ತುತ ಅಂಕಿ- ಅಂಶಗಳು ಅಮೆರಿಕದಲ್ಲಿ ಪ್ರತಿಯೊಂದು ಪ್ರೌಢಶಾಲೆಯ ಹತ್ತು ವಿದ್ಯಾರ್ಥಿಗಳಲ್ಲಿ ಕನಿಷ್ಠ ಒಬ್ಬ ವಿದ್ಯಾರ್ಥಿ ಇ-ಸಿಗರೆಟ್ ಅನ್ನು ಬಳಸುತ್ತಾರೆ ಎಂದು ಅಧ್ಯಯನವು ತಿಳಿಸಿದೆ.
ಇ-ಸಿಗರೆಟ್‌ನಿಂದ ಶ್ವಾಸಕೋಶದ ಮೇಲೆ ಪರಿಣಾಮ:ಇ- ಸಿಗರೆಟ್‌ಗಳು ಶ್ವಾಸಕೋಶದ ಮೇಲೆ ಬೀರುವ ಪರಿಣಾಮಗಳನ್ನು ವೈದ್ಯರು ಅರ್ಥಮಾಡಿಕೊಂಡಿದ್ದಾರೆ. ತಂಬಾಕು ಸಿಗರೇಟುಗಳನ್ನು ಮೂಲತಃ ಆರೋಗ್ಯಕರ ಜೀವನಶೈಲಿಗೆ ಸಹಾಯವೆಂದು ಪರಿಗಣಿಸಲಾಗಿದೆ. ಧೂಮಪಾನದ ನಿಜವಾದ ವಿನಾಶಕಾರಿ ಪರಿಣಾಮಗಳು ದಶಕಗಳ ಬಳಿಕ ಗೊತ್ತಾಗುವ ಮುನ್ನ ದೊಡ್ಡ ತಂಬಾಕು ಕಂಪನಿಗಳು ಈ ಬಗ್ಗೆ ತಿಳಿದುಕೊಳ್ಳಬೇಕಿದೆ. ಕಂಪನಿಗಳು ಆರ್ಥಿಕ ಲಾಭಕ್ಕಾಗಿ ಜನರ ಆರೋಗ್ಯವನ್ನು ಹಾಳು ಮಾಡಬಾರದು. ಧೂಮಪಾನದ ಪರಿಣಾಮವನ್ನು ಖಚಿತಪಡಿಸಿಕೊಳ್ಳಲು ವಿಜ್ಞಾನಿಗಳು ಕೂಡಾ ಎಲ್ಲಾ ಪುರಾವೆಗಳನ್ನು ಪರಿಶೀಲಿಸುವುದು ಅಗತ್ಯವಿದೆ.