ಕರ್ನಾಟಕ

karnataka

ETV Bharat / sukhibhava

ಪ್ರಯೋಗಾಲಯದಲ್ಲಿ ಬೆಳೆದ ಮಾಂಸ ಪರಿಸರಕ್ಕೆ ಪೂರಕವೇ? - ಲ್ಯಾಬ್​ನಲ್ಲಿ ಬೆಳೆದ ಮಾಂಸಗಳನ್ನು

ಸುಸ್ಥಿರ ಪರಿಸರದ ಗುರಿಯನ್ನು ಸಾಧಿಸುವ ಉದ್ದೇಶದಿಂದ ಈ ಪ್ರಯೋಗಾಲಯದ ಮಾಂಸ ಉತ್ಪಾದನೆ ನಡೆಸಲಾಗುತ್ತಿದೆ.

Is lab-grown meat better for the environment?
Is lab-grown meat better for the environment?

By

Published : Aug 3, 2023, 2:53 PM IST

ಮೆಲ್ಬೋರ್ನ್​: ಪ್ರಯೋಗಾಲಯದಲ್ಲಿ ಬೆಳೆದ ಮಾಂಸಗಳು ಸುಸ್ಥಿರ ಪರಿಸರ ಮೌಲ್ಯಮಾಪನಗಳು ಗುರಿಗಳ ಮಿಶ್ರಣವಾಗಿದೆ. ಲ್ಯಾಬ್​ನಲ್ಲಿ ಬೆಳೆದ ಮಾಂಸಗಳನ್ನು ಕೋಶ ಆಧಾರಿತ ಅಥವಾ ಸಂಸ್ಕರಿತ ಮಾಂಸ ಎಂದು ಕರೆಯಲಾಗುವುದು. ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಮಾಂಸ ಉತ್ಪಾದನೆ ತ್ಯಾಜ್ಯ ನಿರ್ವಹಣೆ ಮತ್ತು ಪ್ರಾಣಿಗಳ ಕಾಳಜಿಯಿಂದಾಗಿ ಈ ರೀತಿಯ ಕೋಶ ಕೃಷಿ ಮಾಂಶ ಉತ್ಪಾದನೆಗೆ ಒತ್ತು ನೀಡಲಾಗಿದೆ.

ಆದರೆ, ಈ ಲ್ಯಾಬ್​ನಲ್ಲಿ ಬೆಳೆದ ಮಾಂಸಗಳು ಪರಿಸರಕ್ಕೆ ಉತ್ತಮವೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಸಾಮಾನ್ಯ ಮಾದರಿಯಲ್ಲಿ ಉತ್ಪನ್ನಗಳು ಪರಿಸರದ ಮೇಲಿನ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲಾಗುವುದು. ಆದಾಗ್ಯೂ ಇಂತಹ ಉತ್ಪನ್ನದ ಪರಿಸರ ಪರಿಣಾಮಗಳನ್ನು ಕಚ್ಚಾ ವಸ್ತುವಿನಿಂದ ವಿಲೇವಾರಿ ಮಾಡುವವರೆಗೆ ಯಾವುದೇ ಹಂತದಲ್ಲಿ ಅಳೆಯಬಹುದು.

ಪರಿಸರ ಸಮರ್ಥನಿಯ, ಜೀವನ ಚಕ್ರ ಮೌಲ್ಯಗಳ ಆಧಾರಗಳನ್ನು ಈ ಲ್ಯಾಬ್​ನಲ್ಲಿ ಬೆಳೆದ ಮಾಂಸಗಳ ಉತ್ಪಾದನೆ ಮೇಲೆ ಅಳೆಯಲಾಗಿದೆ. ಇತ್ತೀಚಿನ ಅಧ್ಯಯನದಲ್ಲಿ ಈ ತತ್ವಗಳನ್ನು ಅಳವಡಿಸಲಾಗಿದೆ. ಲ್ಯಾಬ್​ನಲ್ಲಿ ಬೆಳೆ ಮಾಂಸವನ್ನು ಕ್ಯಾಲಿಫೋರ್ನಿಯಾ ಯುನಿವರ್ಸಿಟಿ ಉತ್ಪಾದನೆ ನಡೆಸುತ್ತಿದ್ದು, ಈ ಕುರಿತು 2023ರಲ್ಲಿ ಪ್ರಿ ಪ್ರಿಂಟ್​ ಪ್ರಕಟಿಸಿತು. ಈ ಅಧ್ಯಯನದ ವರದಿಯಲ್ಲಿ ಸಾಂಪ್ರದಾಯಿಕ ಮಾಂಸ ತಯಾರಿಕೆಗಿಂತ ಲ್ಯಾಬ್​ನಲ್ಲಿ ತಯಾರಿಸಿದ ಮಾಂಸದಲ್ಲಿ ಶೇ 25ರಷ್ಟು ಹೆಚ್ಚಿನ ಮಟ್ಟದ ಹಸಿರು ಮನೆ ಪರಿಣಾಮದ ಹೊಗೆ ಸಂಬಂಧವನ್ನು ಹೊಂದಿದೆ ಎಂದು ತೋರಿಸಿದೆ.

ಇದರ ಹೊರತಾಗಿ ಮತ್ತೊಂದು ಜೀವನ ಚಕ್ರ ವಿಶ್ಲೇಷಣೆ ಅಧ್ಯಯನ ನಡೆಸಿರುವ ಡಚ್​ ಸಂಶೋಧಕರು ಮತ್ತು ಸಮಾಲೋಚನೆ ಕಂಪನಿ ಸಿಇ ಡೆಲ್ಫ್ಟ್ ಹೇಳುವಂತೆ, ಈ ಪ್ರಯೋಗಾಲದಯಲ್ಲಿ ಬೆಳೆ ಮಾಂಸಗಳು ಸಾಂಪ್ರದಾಯಿಕ ಮಾಂಸಕ್ಕಿಂತ ಹೆಚ್ಚಿನ ಪರಿಸರ ಸ್ನೇಹಿಯಾಗಿದೆ. ಈ ಅಧ್ಯಯನವು, ಕೋಳಿ ಮತ್ತು ಸಾಮರ್ಥ್ಯದಾಯಕ ಪ್ರಾಣಿಗಳ ಅಭಿವೃದ್ಧಿಗಿಂತ ಇದು ಮೂರು ಪಟ್ಟು ಹೆಚ್ಚು ಸಮರ್ಥನೀಯವಾಗಿದೆ ಎಂದಿದ್ದಾರೆ. ​​

ಇನ್ನು ಸಂಶೋಧಕರು ತಿಳಿಸಿರುವ ಈ ವಿಭಿನ್ನ ಅಭಿಪ್ರಾಯಗಳನ್ನು ಬದಿಗೆ ಒತ್ತಿದರೆ, ಯಾವುದೇ ಕಂಪನಿಗಳು ಕೂಡ ಪ್ರಯೋಗಾಲಯದ ಅಭಿವೃದ್ಧಿ ಪಡಿಸುವ ಮಾಂಸವನ್ನು ಪ್ರಮುಖ ಎಂದು ಪರಿಗಣಿಸಿಲ್ಲ. ಹೀಗಾಗಿ ಈ ಉತ್ಪಾದನೆಯನ್ನು ಸಣ್ಣ ಗಾತ್ರದ ಉತ್ಪಾದನೆ ಹೊರತಾಗಿ ಹೆಚ್ಚಿಸಲು ಸಾಧ್ಯವಾಗಿಲ್ಲ.

ಏಕ ಕೋಶದ ಮಾದರಿಯ ಉತ್ಪಾದನೆ ಉದಾಹರಣೆಗೆ ಪ್ರಯೋಗಾಲಯದಲ್ಲಿ ಸ್ನಾಯುಗಳ ಕೋಶದದಿಂದ ಮಾಂಸ ಬೆಳೆಯುವುದು ನೈಜ ಮಾಂಸದಂತೆ ಹಲವು ಪೋಷಕಾಂಶವನ್ನು ಹೊಂದಿರುವುದಿಲ್ಲ. ಇದರಲ್ಲಿ ಕೊಬ್ಬಿನ ವಿಟಮಿನ್​ಗಳದಂತಹ ವಿಟಮಿನ್​ ಎ ಅಥವಾ ವಿಟಮಿನ್​ ಬಿ 12 ಇರಲು ಸಾಧ್ಯವಿಲ್ಲ ಇದು ಪ್ರಾಣಿಗಳ ಕರುಳಿನ ಬ್ಯಾಕ್ಟೀರಿಯಾದಿಂದ ತಯಾರಿಸಲಾಗುತ್ತದೆ. ಈ ಹಿನ್ನಲೆ ಈ ಪೋಷಕಾಂಶಗಳು ಪ್ರಯೋಗಾಲಯದ ಮಾಂಸದಲ್ಲಿ ಕೆಲವು ಕಚ್ಚಾ ಪದಾರ್ಥಗಳನ್ನು ಸೇರಿಸಬೇಕಿದೆ ಸಸ್ಯಾಧಾರಿತ ಪರ್ಯಾಯಗಳಾದಂತಹ ಹೈಬ್ರೀಡ್​ ಉತ್ಪಾದನೆಗಳು ಇದೇ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ.

ಆದರೂ ಇದರಲ್ಲಿ ಜೀರ್ಣಕ್ರಿಯೆ ಮತ್ತು ಜೈವಿಕ ಲಭ್ಯತೆಯಲ್ಲಿ ವ್ಯತ್ಯಾಸ ಕಾಣಬಹುದು. ಜೀವನ ಚಕ್ರ ಮೌಲ್ಯಮಾಪನ ಅಧ್ಯಯನಗಳು ಪ್ರಯೋಗಾಲಯಗಳಲ್ಲಿ ಮಾಂಸವನ್ನು ಬೆಳೆಯುವುದು ಶಕ್ತಿ-ತೀವ್ರ ಪ್ರಕ್ರಿಯೆಯಾಗಿದೆ ಮತ್ತು ಅದರ ಪರಿಸರದ ಹೆಜ್ಜೆಗುರುತು ಅಧ್ಯಯನಗಳನ್ನು ನಡೆಸಲು ಬಳಸುವ ಶಕ್ತಿ ಮಿಶ್ರಣಗಳಿಗೆ ಹೆಚ್ಚು ಸಂವೇದನಾಶೀಲವಾಗಿರುತ್ತದೆ.

ಇದನ್ನೂ ಓದಿ: ಇನ್ಮೇಲೆ ಚಿಕನ್​ ಅನ್ನು ಪೌಲ್ಟ್ರಿಯಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಬೆಳೆಯಬಹುದು; ಇದು ಕೋಶ ಕೃಷಿ ಕೋಳಿ ಉತ್ಪಾದನೆ!

ABOUT THE AUTHOR

...view details