ಜಗತ್ತಿನಾದ್ಯಂತ ಶೇ.2 ರಿಂದ ಶೇ.10 ಗರ್ಭಿಣಿಯರ ಮೇಲೆ ಅಧಿಕ ರಕ್ತದೊತ್ತಡ ಪರಿಣಾಮ ಬೀರುತ್ತದೆ. ಗರ್ಭಾವಸ್ಥೆಯಲ್ಲಿ ಇದು ವಿವಿಧ ಕಾರಣಗಳಿಂದ ಉಂಟಾಗಬಹುದು ಮತ್ತು ಮಗುವಿನ ಮೇಲೆ ಪರಿಣಾಮ ಬೀರದಂತೆ ತಾಯಿಯನ್ನು ಸುರಕ್ಷಿತವಾಗಿಡಲು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ. ಪ್ರಸೂತಿ, ಸ್ತ್ರೀರೋಗ ಮತ್ತು ಬಂಜೆತನ ತಜ್ಞ ಡಾ. ಪೂರ್ವ ಈ ವಿಷಯದ ಬಗ್ಗೆ ಕೆಲ ಸಲಹೆ ನೀಡಿದ್ದಾರೆ.
ಗರ್ಭಾವಸ್ಥೆಯಲ್ಲಿ ನಾಲ್ಕು ಮಾದರಿಗಳಲ್ಲಿ ಅಧಿಕ ರಕ್ತದೊತ್ತಡ :ಮಹಿಳೆ ಗರ್ಭಧಾರಣೆಯ ಮೊದಲು ಅಥವಾ ಗರ್ಭಧಾರಣೆಯ 20 ವಾರಗಳ (5 ತಿಂಗಳು) ಮೊದಲು ರಕ್ತದೊತ್ತಡಕ್ಕೆ ಒಳಗಾಗುತ್ತಾರೆ. ಅದರಲ್ಲಿ ಗರ್ಭಧಾರಣೆಯ 5 ತಿಂಗಳ ಮೊದಲು ಮೂತ್ರ ಪರೀಕ್ಷೆ ಮಾಡಲಾಗುತ್ತದೆ. ಈ ವೇಳೆ ಗರ್ಭಿಣಿಗೆ ಕಡಿಮೆ ರಕ್ತದೊತ್ತಡವಿದ್ದಲ್ಲಿ ಪ್ರೋಟಿನ್ ಅಂಶವನ್ನು ಕಂಡು ಹಿಡಿಯಬಹುದು. ಆದರೆ, ಅಧಿಕ ರಕ್ತದೊತ್ತಡವಿದ್ದರೆ ಕಷ್ಟಸಾಧ್ಯ.
ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವನ್ನು ಸಾಮಾನ್ಯವಾಗಿ ಗರ್ಭಧಾರಣೆಯ ತಪಾಸಣೆಯ ಸಮಯದಲ್ಲಿ ಕಂಡು ಹಿಡಿಯಲಾಗುತ್ತದೆ. ದಾಖಲಾದ ರಕ್ತದೊತ್ತಡವು ಕನಿಷ್ಟ ಎರಡು ಸಂದರ್ಭಗಳಲ್ಲಿ 6 ಗಂಟೆಗಳ ಅಂತರದಲ್ಲಿ 140/90 ಎಂಎಂ ಹೆಚ್‌ಜಿಗಿಂತ ಹೆಚ್ಚಾಗುತ್ತದೆ. ಮೂತ್ರದಲ್ಲಿ ಪ್ರೋಟೀನ್ ಇರುವಿಕೆ (ಮೂತ್ರ ಪರೀಕ್ಷೆಯಲ್ಲಿ) ಅಧಿಕ ರಕ್ತದೊತ್ತಡದ ಪ್ರಕಾರವನ್ನು ತಿಳಿಯಲು ಸಹಾಯ ಮಾಡುತ್ತದೆ.
ಯಾರು ಹೆಚ್ಚಿನ ಅಪಾಯದಲ್ಲಿದ್ದಾರೆ?
1. ಮೊದಲ ಗರ್ಭಧಾರಣೆಯ ಮಹಿಳೆಯರು
2. ಮಹಿಳೆ 40 ವರ್ಷ ಮತ್ತು ಮೇಲ್ಪಟ್ಟವರಾಗಿದ್ದರೆ
3. ಮೊದಲು ಗರ್ಭಧಾರಣೆಯಲ್ಲಿ (ಅಂದರೆ) ಮಹಿಳೆಯು ಅಧಿಕ ರಕ್ತದೊತ್ತಡ ಹೊಂದಿದ್ದರೆ
4. ಮಧುಮೇಹ, ಬೊಜ್ಜು ಹೊಂದಿರುವ ಮಹಿಳೆಯರು ಗರ್ಭಧಾರಣೆಯ ಮೊದಲು ಅಧಿಕ ರಕ್ತದೊತ್ತಡ ಹೊಂದಿದ್ದರೆ,
5. ಸ್ವಯಂ ನಿರೋಧಕ ಅಸ್ವಸ್ಥತೆಗಳು, ಧೂಮಪಾನ ಇಂತಹ ಅಭ್ಯಾಸ ಹೊಂದಿದವರು
6. ಬಹುಗರ್ಭಧಾರಣೆ (ಅವಳಿ ಮಕ್ಕಳ ಜನನ)
ಕಾಲುಗಳ ಸೆಳೆತ, ಕೈ ಮತ್ತು ಮುಖ ಊದಿಕೊಳ್ಳುವುದು, ತಲೆನೋವು, ಮುಜುಗರ, ದೃಷ್ಟಿ ಮಸುಕಾಗುವುದು, ಹೊಟ್ಟೆ ನೋವು, ಹಠಾತ್ ವಾಕರಿಕೆ ಮತ್ತು ವಾಂತಿ ಇತ್ಯಾದಿ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಕಾಡುವ ಸಮಸ್ಯೆಗಳು. ಅಧಿಕ ರಕ್ತದೊತ್ತಡವು ತಾಯಿಯ ಮೇಲೆ ಮತ್ತು ಭ್ರೂಣದ ಮೇಲೆ ಪರಿಣಾಮ ಬೀರುತ್ತದೆ.
ತಾಯಿಗೆ ಉಂಟಾಗುವ ತೊಡಕುಗಳಿಂದ ತುರ್ತು ಹೆರಿಗೆ, ಹೆಪ್ಪುಗಟ್ಟುವಿಕೆಯ ಕಾರ್ಯವಿಧಾನಗಳು, ಮೆದುಳಿನ ರಕ್ತಸ್ರಾವ ಮತ್ತು ಪಾರ್ಶ್ವವಾಯುಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡ ಹೊಂದಿರುವ ಮಹಿಳೆಯ ಭ್ರೂಣ (ಗರ್ಭದಲ್ಲಿರುವ ಮಗು)ದ ಬೆಳವಣಿಗೆಯ ಕುಂಠಿತ, ಅಕಾಲಿಕ ಹೆರಿಗೆ, ಅವಧಿ ಪೂರ್ವ ತೊಂದರೆಗಳು, ಕಡಿಮೆ ಜನನ ತೂಕ ಮತ್ತು ಭ್ರೂಣದ ಸಾವನ್ನು ಸಹ ಉಂಟುಮಾಡಬಹುದು.
ಅಗತ್ಯ ಆರೈಕೆಯ ಮಟ್ಟ:ಮಹಿಳೆಯರು ತನ್ನ ಪ್ರಸೂತಿ ತಜ್ಞರನ್ನು ಆಗಾಗ್ಗೆ ಭೇಟಿ ಮಾಡಬೇಕು. ರಕ್ತ ಪರೀಕ್ಷೆ ಮತ್ತು ವಿಶೇಷ ಅಲ್ಟ್ರಾಸೌಂಡ್ ಪರೀಕ್ಷೆಗಳಿಗೊಳಗಾಗಬೇಕಾಗಬಹುದು. ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಚಾರ್ಟ್ ನಿರ್ವಹಿಸುವುದು ಉತ್ತಮ ಮೇಲ್ವಿಚಾರಣೆಗೆ ಕಾರಣ. ಸಾಕಷ್ಟು ನಿದ್ರೆ, ವಿಶ್ರಾಂತಿ, ಲಘು ನಡಿಗೆ, ಧ್ಯಾನ ಇತ್ಯಾದಿಗಳನ್ನು ಮಾಡಬೇಕು. ರಕ್ತದೊತ್ತಡದ ಸರಿಯಾದ ನಿಯಂತ್ರಣ ಖಚಿತಪಡಿಸಿಕೊಳ್ಳಲು ಕೆಲ ಮಹಿಳೆಯರು ಔಷಧಿಯ ಮೊರೆ ಹೋಗುತ್ತಾರೆ.
ಸಾಮಾನ್ಯ ಹೆರಿಗೆ ಅಥವಾ ಸಿಸೇರಿಯನ್ :ಮುಟ್ಟಿನ ದಿನ ಸ್ಥಗಿತಗೊಂಡ ದಿನವನ್ನುಪ್ರಸ್ತುತಪಡಿಸುವ ವೇಳೆ ಅವಲಂಬಿಸಿ ವೈದ್ಯರು ನಿರ್ಧರಿಸುತ್ತಾರೆ. ನಿರ್ದಿಷ್ಟ ಸೂಚನೆ ಅಥವಾ ತೊಡಕುಗಳನ್ನು ಹೊಂದಿರುವ ಪ್ರಕರಣಗಳನ್ನು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗುತ್ತದೆ.
ಹೆರಿಗೆ ಬಳಿಕ ಬಿಪಿ ಇರುವಿಕೆ: ಕೆಲವರು ಹೆರಿಗೆಯ ನಂತರವೂ ತಮ್ಮ ಔಷಧಿಗಳನ್ನು ಮುಂದುವರಿಸಬೇಕಾಗಬಹುದು. ಇದನ್ನು ಕೇಸ್ ಟು ಕೇಸ್ ಆಧಾರದ ಮೇಲೆ ತಿಳಿಸಬೇಕಾಗಿದೆ. ಕೆಲವರಿಗೆ ಬಿಪಿ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ, ನಿಯಂತ್ರಣ ಮಾಡಲು ಉತ್ತಮ ತೂಕ ಮತ್ತು ಉತ್ತಮ ಆರೋಗ್ಯಕರ ಆಹಾರ ಹೊಂದುವ ಅವಶ್ಯಕತೆ ಇದೆ.
ನಿಯಮಿತ ತಪಾಸಣೆಯೊಂದಿಗೆ, ಉತ್ತಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು. ಕುಟುಂಬದಿಂದ ಬೆಂಬಲ, ಪ್ರೀತಿಯ ಆರೈಕೆಯ ಮೂಲಕ ಗರ್ಭಾವಸ್ಥೆಯಲ್ಲಿ ಹೆಚ್ಚಿನ ಬಿಪಿ ಹೊಂದಿರುವ ಮಹಿಳೆಯರು ಖಂಡಿತವಾಗಿಯೂ ಸುರಕ್ಷಿತ ಗರ್ಭಧಾರಣೆ ಮತ್ತು ಹೆರಿಗೆಯಾಗಬಹುದು.
(ಹೆಚ್ಚಿನ ಮಾಹಿತಿಗಾಗಿ drpurva1410@gmail.com ಅನ್ನು ಸಂಪರ್ಕಿಸಿ)