ಕರ್ನಾಟಕ

karnataka

ETV Bharat / sukhibhava

ತಿನ್ನುವ ಪ್ರೋಟಿನ್​ ಬೆಸ್ಟೇ​ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?

ಪ್ರೋಟಿನ್​ ಪೂರಕಗಳು ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವುದಿಲ್ಲ. ಆದರೂ ಇದು ಕೆಲವು ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಆಹಾರವೊಂದೇ ಪ್ರೋಟಿನ್​​​ ನೀಡುವುದು ಸವಾಲಾದಾಗ ಇದನ್ನು ಬಳಕೆ ಮಾಡಬಹುದು.

Is eating protein best or drinking it; What do experts say?
Is eating protein best or drinking it; What do experts say?

By

Published : Jun 23, 2023, 11:40 AM IST

ನವದೆಹಲಿ: ವಿಶ್ವದಾದ್ಯಂತ ಫಿಟ್ನೆಸ್​​ ಉತ್ಸಾಹಿಗಳು ಮತ್ತು ಪೋಷಕಾಂಶ ತಜ್ಞರ ನಡುವೆ ನಡೆಯುವ ಒಂದು ವಾದ ವಿವಾದ ಎಂದರೆ ಅದು ದೈನಂದಿನ ಪ್ರೊಟೀನ್​ ಅಗತ್ಯತೆ. ಪ್ರೋಟಿನ್​ ಸಮೃದ್ಧ ಆಹಾರ ಮತ್ತು ಪ್ರೋಟಿನ್​ ಪೂರಕಗಳು ಪರಿಣಾಮಗಳ ಕುರಿತು ಚರ್ಚೆ ಸದಾ ಇರುತ್ತದೆ. ಆದಾಗ್ಯೂ ತಿನ್ನುವ ಪ್ರೋಟಿನ್​ ಅಥವಾ ಕುಡಿಯುವ ಪ್ರೋಟಿನ್​ ಆಯ್ಕೆ ಪ್ರತಿಯೊಬ್ಬರ ಇಚ್ಛೆ, ಆದ್ಯತೆ ಮತ್ತು ಆಹಾರ ಪದ್ಧತಿಯ ಕಟ್ಟುನಿಟ್ಟಿನ ಮೇಲೆ ಅವಲಂಬಿತವಾಗಿದೆ.

ಈ ಕುರಿತು ಮಾತನಾಡಿರುವ ಪೋಷಕಾಂಶತಜ್ಞೆ ಅರ್ಚಿ ಗಾರ್ಗ್​​, ಗಟ್ಟಿ ಮತ್ತು ದ್ರವ ಪ್ರೋಟಿನ್​ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ನಿಮಗೆ ಏನು ಅವಶ್ಯಕ ಎಂಬುದನ್ನು ನೀವೇ ಆಯ್ಕೆ ಮಾಡಬಹುದು ಎಂದಿದ್ದಾರೆ.

ದೈನಂದಿನ ಅಗತ್ಯತೆಯ ಸರಾಸರಿ: ಮೊದಲಿಗೆ ವೈಯಕ್ತಿಕವಾಗಿ ದೈನಂದಿನ ಪ್ರೋಟಿನ್​ ಅಗತ್ಯತೆ ಕುರಿತು ತಿಳಿಯುವುದು ಅಗತ್ಯವಾಗುತ್ತದೆ. ಪ್ರೋಟಿನ್​ಗಳು ನೈಸರ್ಗಿಕವಾಗಿ ಅಥವಾ ಕೃತಕವೂ ಆಗಿದ್ದು, ಇದು ನಮ್ಮ ದೇಹದ ಕಾರ್ಯಾಚರಣೆಗೆ ಸಹಾಯಕವಾಗಿದೆ. ದೈನಂದಿನ ಅಗತ್ಯತೆಯ ಪ್ರೋಟಿನ್​ಗಳು ವಯಸ್ಸು, ತೂಕ, ಲಿಂಗ ಮತ್ತು ದೈಹಿಕ ಚಟುವಟಿಕೆ ಮಟ್ಟಕ್ಕೆ ತಕ್ಕಂತೆ ಸೇವಿಸಬೇಕಿದೆ. ವಯಸ್ಕರಲ್ಲಿ 46ರಿಂದ 63 ಮತ್ತು ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಲ್ಲಿ 65 ಗ್ರಾಂ ಪ್ರೋಟಿನ್​ ಅವಶ್ಯಕತೆ ಇದೆ.

ಪೋಷಕಾಂಶದ ಅಂಶ: ನೈಸರ್ಗಿಕ ಪ್ರೋಟಿನ್​ ಮೂಲ ಮತ್ತು ಪ್ರೋಟಿನ್​ ಪೂರಕ (ಪೌಡರ್​, ಜ್ಯೂಸ್​ ಮತ್ತು ಶೇಕ್ಸ್​​) ಇವರೆಡೂ ಸಂಪೂರ್ಣವಾಗಿ ಪ್ರೋಟಿನ್​ ಭರಿತವಾಗಿದೆ. ಆದಾಗ್ಯೂ, ಉಳಿದ ನೈಸರ್ಗಿಕ ಅಂಶಗಳು ಸಂಪೂರ್ಣವಾಗಿ ವಿಭಿನ್ನವಾಗಿದೆ. ಪ್ರೋಟಿನ್​ ಪೂರಕಗಳು ಏಕ ಪ್ರತ್ಯೇಕವಾದ ಮ್ಯಾಕ್ರೋನ್ಯೂಟ್ರಿಯಂಟ್ಗಳಾಗಿವೆ. ಇವು 18-25 ಗ್ರಾಂ ಪ್ರೋಟಿನ್​, ಕೊಬ್ಬಿಲ್ಲದ, ಕಡಿಮೆ ಮಟ್ಟದ ಕಾರ್ಬೋ ಹೈಡ್ರೇಡ್​​ ಮತ್ತು ವಿಟಮಿನ್​ ಮತ್ತು ಮಿನರಲ್ಸ್​ ಇಲ್ಲದಾಗಿದ್ದು, ಇವೆಲ್ಲವನ್ನೂ ಸಂಸ್ಕರಿಸಲಾಗಿರುತ್ತದೆ. ಆದಾಗ್ಯೂ ನೈಸರ್ಗಿಕವಾಗಿ ಲಭ್ಯವಾಗುವ ಪ್ರೋಟಿನ್​ ಅಥವಾ ಯಾವುದೇ ಮ್ಯಾಕ್ರೋ ಅಥವಾ ಮೈಕ್ರೋನ್ಯೂಟ್ರಿಯೆಂಟ್ಸ್​ ಪ್ರತ್ಯೇಕವಾಗಿರುತ್ತದೆ. ಇದರಿಂದ ಇವು ಲಾಭಕರವಾಗಿವೆ.

ನೈಸರ್ಗಿಕ ಪ್ರೋಟಿನ್​: ನೈಸರ್ಗಿಕ ಪ್ರೋಟೀನ್‌ಗಳು ಸಂಸ್ಕರಿಸದಿದ್ದರೂ, ಮ್ಯಾಕ್ರೋ (ಪ್ರೋಟೀನ್‌ಗಳು ಮತ್ತು ಕೊಬ್ಬುಗಳು) ಮತ್ತು ಸೂಕ್ಷ್ಮ (ವಿಟಮಿನ್‌ಗಳು ಮತ್ತು ಖನಿಜಗಳು) ಪೋಷಕಾಂಶಗಳ ಸಮತೋಲಿತ ಮಿಶ್ರಣವನ್ನು ಹೊಂದಿರುತ್ತವೆ. ಈ ಪೋಷಕಾಂಶಗಳು ದೇಹವನ್ನು ಕ್ರಿಯಾತ್ಮಕವಾಗಿಡಲು ಒಟ್ಟಾಗಿ ಕೆಲಸ ಮಾಡುತ್ತವೆ. ಎಲ್ಲ ಆಹಾರದ ಅವಶ್ಯಕತೆಗಳನ್ನು ಏಕಕಾಲದಲ್ಲಿ ಎಲ್ಲ ಹಂತಗಳಲ್ಲಿ ಪೂರೈಸಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಇದು ಅಂಗಾಂಶ ರಿಪೇರಿ ಮಾಡುವ, ತೂಕವನ್ನು ಕಾಪಾಡಿಕೊಳ್ಳುವ ಮತ್ತು ದೇಹದ ಕೊಬ್ಬನ್ನು ಪರಿಶೀಲಿಸುವಾಗ ಸ್ನಾಯುಗಳನ್ನು ನಿರ್ಮಿಸಲು ಅಗತ್ಯವಿರುವ ಉತ್ತಮ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳೊಂದಿಗೆ ಪ್ರೋಟೀನ್ ಅನ್ನು ಪ್ಯಾಕ್ ಮಾಡುತ್ತದೆ. ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ಜೊತೆಗೆ ಎಲ್ಲ ಅಗತ್ಯ ಅಮೈನೋ ಆಮ್ಲಗಳನ್ನು ಒದಗಿಸುವುದಿಲ್ಲ. ಅಲ್ಲದೇ, ಕೆಲವು ನೈಸರ್ಗಿಕ ಪ್ರೋಟೀನ್ ಮೂಲಗಳು ಪ್ರಾಣಿ-ಆಧಾರಿತವಾಗಿವೆ. ಇವು ಸಸ್ಯಾಹಾರಿಗಳಿಗೆ ಸೂಕ್ತ ಆಯ್ಕೆಯಾಗಿರುವುದಿಲ್ಲ.

ಪ್ರೋಟಿನ್​ ಪೂರಕಗಳು: ಎಲ್ಲ ಪ್ರೋಟಿನ್​ ​ ಪೂರಕಗಳು ಕೃತಕ ಮೂಲಗಳಾಗಿವೆ. ಅವು ಅಗತ್ಯವಾದ ಅಮಿನೊ ಆಮ್ಲವನ್ನು ನಿಗದಿತ ಮಟ್ಟದಲ್ಲಿ ನೀಡುತ್ತದೆ. ಪ್ರೋಟಿನ್​ ಜ್ಯೂಸ್​ ರೀತಿಯಲ್ಲಿ ಇರುವ ಇವು ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ಇವು ಆರಾಮದಾಯಕವಾಗಿದ್ದು, ತಕ್ಷಣಕ್ಕೆ ಸೇವಿಸಬಹುದು. ಆದಾಗ್ಯೂ ಈ ಪ್ರೋಟಿನ್​ ಪೂರಕಗಳು ಕೃತಕ ಬಣ್ಣ ಮತ್ತು ಸಂರಕ್ಷಕಗಳನ್ನು ಹೊಂದಿರುತ್ತವೆ. ಇದು ದೇಹಕ್ಕೆ ಹಾನಿ ಮಾಡುತ್ತದೆ. ಪ್ರೋಟಿನ್​ ಪೂರಕಗಳ ದೀರ್ಘಾವಧಿ ಬಳಕೆಯು ಕೆಲವು ಆರೋಗ್ಯ ಸವಾಲುಗಳನ್ನು ಒಡ್ಡುತ್ತದೆ. ಈ ಹಿನ್ನೆಲೆಯಲ್ಲಿ ಮಾನ್ಯತೆ ಪಡೆದ ನಂಬಿಕಾರ್ಹ ಬ್ರಾಂಡ್​ಗಳಿಂದ ಪ್ರೋಟಿನ್​ ಪೂರಕಗಳನ್ನು ಆಯ್ದುಕೊಳ್ಳುವುದು ಅಗತ್ಯವಾಗಿದೆ.

ಯಾವುದು ಉತ್ತಮ?ಬಹುತೇಕ ಜನರು ಪ್ರೋಟಿನ್​ ಪೂರಕಗಳನ್ನು ಕೇಲವ ಸ್ನಾಯುಗಳ ಪಡೆಯಲು ಉಪಯುಕ್ತ ಎಂದು ನಂಬಿರುತ್ತಾರೆ. ಆದರೆ, ಇದು ದೈನಂದಿನ ಅಗತ್ಯತೆಯ ಪ್ರೋಟಿನ್​ನ್ನು ಸರಿತೂಗಿಸುತ್ತದೆ. ಪ್ರೋಟಿನ್​ ಪೂರಕಗಳು ಪ್ರತಿಯೊಬ್ಬರಿಗೂ ಅವಶ್ಯಕವಾಗಿರುವುದಿಲ್ಲ. ಆದರೂ ಇದು ಕೆಲವು ಸಂದರ್ಭದಲ್ಲಿ ಸಹಾಯ ಮಾಡುತ್ತದೆ. ಆಹಾರವೊಂದೇ ಪ್ರೋಟಿನ್​​​ ನೀಡುವುದು ಸವಾಲಾದಾಗ ಇದನ್ನು ಬಳಕೆ ಮಾಡಬಹುದು.

ಇದನ್ನೂ ಓದಿ: ಇನ್ಮೇಲೆ ಚಿಕನ್​ ಅನ್ನು ಪೌಲ್ಟ್ರಿಯಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಬೆಳೆಯಬಹುದು; ಇದು ಕೋಶ ಕೃಷಿ ಕೋಳಿ ಉತ್ಪಾದನೆ!

ABOUT THE AUTHOR

...view details