ಮೆಲ್ಬೋರ್ನ್: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳಲ್ಲಿ ಹೃದಯ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ವಿಶ್ವದ ಮೊದಲ ಅಂತಾರಾಷ್ಟ್ರೀಯ ಕ್ಲಿನಿಕಲ್ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೃದಯ ರಕ್ತನಾಳದ ಕಾಯಿಲೆಯ ಮೌಲ್ಯಮಾಪನ, ಸ್ಕ್ರೀನಿಂಗ್ ಮತ್ತು ನವೀನ ಆಣ್ವಿಕ ಚಿಕಿತ್ಸೆಗಳು, ಇಮ್ಯುನೊಥೆರಪಿ, ಕಿಮೊಥೆರಪಿ ಮತ್ತು ರೇಡಿಯೊಥೆರಪಿಯನ್ನು ಪಡೆಯುವ ಮಕ್ಕಳಿಗಾಗಿ ಈ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಇದನ್ನು ಜೆಎಸಿಸಿ ಪ್ರಕಟಿಸಿದೆ.
ದಿ ಮುರ್ಡೊಕ್ ಚಿಲ್ಡ್ರನ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ತಜ್ಞರ ತಂಡ ಈ ಅಧ್ಯಯನ ನಡೆಸಿದೆ, ಕ್ಯಾನ್ಸರ್ ಅಪಾಯ ಹೊಂದಿರುವ ರೋಗಿಗಳು ಚಿಕಿತ್ಸೆ ವೇಳೆ ಹೃದಯ ತಪಾಸಣೆಗೆ ಒಳಗಾಗುವುದು ಅಗತ್ಯವಾಗಿದೆ. ಈ ತಪಾಸಣೆ ವೇಳೆ ದುರ್ಬಲ ಮಕ್ಕಳ ಹೃದಯಗಳನ್ನು ರಕ್ಷಿಸುವ ಕುರಿತು ಒತ್ತಿ ಹೇಳಲಾಗಿದೆ. ಮುರ್ಡೋಕ್ ಚಿಲ್ಡ್ರನ್ಸ್ ಅಸೋಸಿಯೇಟ್ ಪ್ರೊಫೆಸರ್ ರಾಚೆಲ್ ಕಾನ್ಯರ್ಸ್ ಮಾತನಾಡಿ, ಚಿಕಿತ್ಸೆಯ ಸಮಯದಲ್ಲಿ ಕಳಪೆ ಹೃದಯದ ಅಡ್ಡಪರಿಣಾಮಗಳನ್ನು ಮೇಲ್ವಿಚಾರಣೆ ಮಾಡಲು ಅಂತಾರಾಷ್ಟ್ರೀಯ ಮಾರ್ಗಸೂಚಿಗಳು ವಯಸ್ಕ ರೋಗಿಗಳಿಗೆ ಅಸ್ತಿತ್ವದಲ್ಲಿವೆ. ಯಾವುದೂ ಮಕ್ಕಳಿಗೆ ನಿರ್ದಿಷ್ಟವಾಗಿಲ್ಲ.
ಅಡ್ಡ ಪರಿಣಾಮದ ಸಾಧ್ಯತೆ: ಹೊಸ ಕ್ಯಾನ್ಸರ್ ಔಷಧಗಳು ಚಿಕಿತ್ಸೆ ವೇಳೆ ಕೆಲವು ದಿನಗಳೊಳಗೆ ಹೃದಯದ ಅಡ್ಡ ಪರಿಣಾಮಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ಅಸೋಸಿಯೆಟ್ ಪ್ರೊಫೆಸರ್ ತಿಳಿಸಿದ್ದಾರೆ. ಬಾಲ್ಯದ ಕ್ಯಾನ್ಸರ್ ಬಗ್ಗೆಗಿನ ಇತ್ತೀಚಿಗಿನ ಅಭಿವೃದ್ಧಿ ಚಿಕಿತ್ಸೆಯಲ್ಲಿ ಬದುಕುಳಿಯುವ ದರ ಶೇ 80ಕ್ಕಿಂತ ಹೆಚ್ಚಿನ ಉತ್ತಮ ಫಲಿತಾಂಶ ಹೊಂದಿದೆ. ಆದಾಗ್ಯೂ, ಕ್ಯಾನ್ಸರ್ನಿಂದ ಪರಾದವರಲ್ಲಿ ಗಂಭೀರ ಆರೋಗ್ಯದ ಅಭಿವೃದ್ಧಿ ಪ್ರಮುಖವಾಗಿದ್ದು, ಪ್ರಮುಖ ಗಮನ ಮತ್ತು ತಡೆಗಟ್ಟುವ ಕ್ರಮ ಅಗತ್ಯವಾಗಿದೆ ಎನ್ನುತ್ತಾರೆ.