ಕರ್ನಾಟಕ

karnataka

ETV Bharat / sukhibhava

ಮಕ್ಕಳಲ್ಲಿ ಏಕಾಗ್ರತೆ ಮತ್ತು ಆರೋಗ್ಯ ವೃದ್ಧಿಸಲಿದೆ ಯೋಗ - ಮಕ್ಕಳಿಗೆ ಯೋಗ

ಮಕ್ಕಳಿಗೆ ಯೋಗ ಕಲಿಸಲು ವಿವಿಧ ಮಾರ್ಗಗಳಿವೆ. ಯೋಗವು ಶಿಸ್ತು, ಜೀವನ ಶೈಲಿ ನಿರ್ವಹಣೆ, ಆರೋಗ್ಯಕರ ಅಭ್ಯಾಸಗಳು, ಆಹಾರ ಪ್ರಜ್ಞೆ, ಜಾಗೃತಿ, ಏಕಾಗ್ರತೆ, ನಿರ್ಧಾರ ಶಕ್ತಿ, ಆರೋಗ್ಯಕರ ದೇಹ ಮನಸ್ಸಿನ ಸೂಚ್ಯಂಕ, ಬುದ್ಧಿಶಕ್ತಿಯ ಸುಧಾರಣೆ, ಕಲಿಕೆಯ ಸಾಮರ್ಥ್ಯಗಳನ್ನು ತೀಕ್ಷ್ಣಗೊಳಿಸುವುದು, ಸಾಮಾಜಿಕ ಕೌಶಲ್ಯಗಳು, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳು, ಇತರರ ಬಗ್ಗೆ ಸಹಾನುಭೂತಿ, ಅವರ ಭಾವನೆಗಳ ನಿರ್ವಹಣೆ, ಇತ್ಯಾದಿಗಳನ್ನು ಕಲಿಸುತ್ತದೆ.

introducing-yoga-to-children
introducing-yoga-to-children

By

Published : Jun 3, 2021, 8:33 PM IST

ಹೈದರಾಬಾದ್:ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶವೆಂದರೆ ಒತ್ತಡ. ನಮಗೆ ತಿಳಿದೋ ತಿಳಿಯದೆಯೋ ಮಕ್ಕಳು ಕೋವಿಡ್-19 ಪರಿಸ್ಥಿತಿಯಿಂದಾಗಿ ತೀವ್ರ ಒತ್ತಡದಲ್ಲಿದ್ದಾರೆ.

ಯೋಗವು ಶ್ವಾಸಕೋಶದ ಪರಿಸ್ಥಿತಿ ಉತ್ತಮಗೊಳಿಸುತ್ತದೆ ಮತ್ತು ದೇಹದಲ್ಲಿ ಆಮ್ಲಜನಕಯುಕ್ತ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಇದು ನಮ್ಮ ಅಂಗಗಳ ಅತ್ಯುತ್ತಮ ಕಾರ್ಯಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ. ಈ ಕುರಿತು ಈಟಿವಿ ಭಾರತ ಸುಖೀಭವ ತಂಡವು ಭೌತಚಿಕಿತ್ಸಕಿ, ಪರ್ಯಾಯ ಔಷಧ ವೈದ್ಯೆ ಮತ್ತು ಯೋಗ ಶಿಕ್ಷಕಿ ಡಾ. ಜಾನ್ವಿ ಕತ್ರಾನಿ ಅವರೊಂದಿಗೆ ಮಾತುಕತೆ ನಡೆಸಿದೆ.

ಯೋಗ, ತತ್ವಶಾಸ್ತ್ರ ಮತ್ತು ಅದರಲ್ಲಿ ಉಲ್ಲೇಖಿಸಲಾದ ಪ್ರಾಯೋಗಿಕ ತಂತ್ರಗಳನ್ನು ಪ್ರಾಚೀನ ಕಾಲದಿಂದಲೂ ಅಭ್ಯಾಸ ಮಾಡಲಾಗುತ್ತಿದೆ ಮತ್ತು ಆಧುನಿಕ ಯುಗದವರೆಗೆ ವಿವಿಧ ರೂಪಗಳಲ್ಲಿ ಗ್ರಹಿಸಲಾಗುತ್ತಿದೆ. ದೇಹ, ಮನಸ್ಸು ಮತ್ತು ಬುದ್ಧಿಶಕ್ತಿ ಸೇರಿದಂತೆ ವ್ಯಕ್ತಿಗಳ ಸುಧಾರಣಾ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಲು ಮತ್ತು ರೂಪಿಸಲು ಯೋಗ ಒಂದು ಮಾರ್ಗವಾಗಿದೆ.

ಮಕ್ಕಳನ್ನು ಉತ್ತಮ ಮಾನವರನ್ನಾಗಿ ರೂಪಿಸುವುದು, ಅವರಲ್ಲಿ ಆರೋಗ್ಯಕರ ಚಟುವಟಿಕೆ ಬೆಳೆಸುವುದು ಹಾಗೂ ಮಾನಸಿಕವಾಗಿ ದೃಢಗೊಳಿಸುವುದು ಪೋಷಕರ ಜವಾಬ್ದಾರಿಯಾಗಿದೆ. ಜೀವನದ ಇತರ ಹಂತಗಳಿಗೆ ಹೋಲಿಸಿದರೆ ಬಾಲ್ಯವು ಹೆಚ್ಚು ಶಕ್ತಿಯುತ ಹಂತವಾಗಿದೆ ಮತ್ತು ಈ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು.

ಮಕ್ಕಳಿಗೆ ಯೋಗವನ್ನು ಕಲಿಸಲು ವಿವಿಧ ಮಾರ್ಗಗಳಿವೆ. ಇದನ್ನು ಕ್ರೀಡೆ ಅಥವಾ ಕಲಾ ವರ್ಗಕ್ಕೆ ಸೇರಿಸಿಕೊಳ್ಳಬಹುದು. ಯೋಗವು ಶಿಸ್ತು, ಜೀವನ ಶೈಲಿ ನಿರ್ವಹಣೆ, ಆರೋಗ್ಯಕರ ಅಭ್ಯಾಸಗಳು, ಆಹಾರ ಪ್ರಜ್ಞೆ, ಜಾಗೃತಿ, ಏಕಾಗ್ರತೆ, ನಿರ್ಧಾರ ಶಕ್ತಿ, ಆರೋಗ್ಯಕರ ದೇಹ ಮನಸ್ಸಿನ ಸೂಚ್ಯಂಕ, ಬುದ್ಧಿಶಕ್ತಿಯ ಸುಧಾರಣೆ, ಕಲಿಕೆಯ ಸಾಮರ್ಥ್ಯಗಳನ್ನು ತೀಕ್ಷ್ಣಗೊಳಿಸುವುದು, ಸಾಮಾಜಿಕ ಕೌಶಲ್ಯಗಳು, ನೈತಿಕ ಮೌಲ್ಯಗಳು, ಸಾಮಾಜಿಕ ಜವಾಬ್ದಾರಿಗಳು, ಇತರರ ಬಗ್ಗೆ ಸಹಾನುಭೂತಿ, ಅವರ ಭಾವನೆಗಳ ನಿರ್ವಹಣೆ, ಇತ್ಯಾದಿಗಳನ್ನು ಕಲಿಸುತ್ತದೆ.

ನಾವು ಮಕ್ಕಳಿಗೆ ಯೋಗವನ್ನು ಹೇಗೆ ಪರಿಚಯಿಸಬಹುದು?

ಮೊದಲಿಗೆ, ನಾವು ಮಕ್ಕಳಿಗೆ ಯೋಗವನ್ನು ಪರಿಚಯಿಸುವ ವಿವಿಧ ರೂಪಗಳು ಮತ್ತು ವಿಧಾನಗಳ ಸಾಧ್ಯತೆಗಳ ಬಗ್ಗೆ ತಿಳಿದಿರಬೇಕು.

  • ಯಮ ಮತ್ತು ನಿಯಮ ಪರಿಕಲ್ಪನೆಯನ್ನು ಒಳಗೊಳ್ಳುವ ಯಾವುದೇ ಯೋಗಾಭ್ಯಾಸದ ಆರಂಭಿಕ ಹಂತವೇ ಶಿಸ್ತು. ಇವು ವೈಯಕ್ತಿಕ ನಿಯಮಗಳು ಮತ್ತು ಅಭ್ಯಾಸಗಳಾಗಿರಬಹುದು.
  • ದೇಹವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೇ ಭಾವನೆಗಳನ್ನು ಸಮತೋಲನಗೊಳಿಸುವ ವಿಧಾನಗಳೊಂದಿಗೆ ಮನಸ್ಸು ಮತ್ತು ಬುದ್ಧಿಶಕ್ತಿ ಸ್ವಚ್ಛತೆಯನ್ನು ಒಳಗೊಂಡಿರುವ ಶುದ್ಧೀಕರಣ ತಂತ್ರ ರೂಪವಾಗಿ ಯೋಗವನ್ನು ಕಾಣಬಹುದು.
  • ಶಕ್ತಿ, ಸಹಿಷ್ಣುತೆ ಮತ್ತು ಹಿಗ್ಗಿಸುವಿಕೆ ಪಡೆಯಲು ದೇಹದ ಚೌಕಟ್ಟಿನ ಭಂಗಿಗಳ ಮಸ್ಕ್ಯುಲೋಸ್ಕೆಲಿಟಲ್ ಆರೋಗ್ಯ ಪರಿಕಲ್ಪನೆ ಮುಖ್ಯ. ಸ್ನಾಯುಗಳು ಮತ್ತು ಮೂಳೆಗಳಿಗೆ ಗಾಯವಾಗುವುದನ್ನು ತಡೆಯಲು ದೈಹಿಕ ಆರೋಗ್ಯ ಅತ್ಯಗತ್ಯ. ಅಲ್ಲದೆ, ಇದು ದೇಹದ ರಚನೆಗಳ ಬೆಳವಣಿಗೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತದೆ.
  • ಏಕಾಗ್ರತೆ ತೀಕ್ಷ್ಣಗೊಳಿಸುವ ತಂತ್ರಗಳಾದ ಪ್ರಾಣಾಯಾಮ, ಉಸಿರಾಟದ ಅಭ್ಯಾಸಗಳು ಏಕಾಗ್ರತೆ ಸೇರಿದಂತೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ ಮತ್ತು ದೇಹದಲ್ಲಿ ಸಾಕಷ್ಟು ಪ್ರಮಾಣದ ಆಮ್ಲಜನಕವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
  • ಮಕ್ಕಳಿಂದ ಧ್ಯಾನ ಮಾಡಿಸುವುದು ಹಲವರಿಗೆ ಕ್ಷುಲ್ಲಕ ವಿಷಯವಾಗಿರಬಹುದು. ಆದರೆ ಧ್ಯಾನದ ಮೂಲಕ ಶಾಂತವಾಗಿ ಕುಳಿತುಕೊಳ್ಳುವ ಭಂಗಿಗಳೊಂದಿಗೆ ಅಭ್ಯಾಸ ಮಾಡುವುದು ಮಕ್ಕಳ ಮಾನಸಿಕ ಆರೋಗ್ಯಕ್ಕೂ ಉತ್ತಮ.
  • ಮಕ್ಕಳಿಗೆ ಬಾಲ್ಯದಲ್ಲಿಯೇ ಯೋಗ ತತ್ವಶಾಸ್ತ್ರವನ್ನು ಪರಿಚಯಿಸುವುದು, ಭವಿಷ್ಯದಲ್ಲಿ ಅವರ ಪಾತ್ರಗಳ ಬಗ್ಗೆ ಅವರಿಗೆ ಅರಿವು ಮೂಡಿಸುವುದು ಮತ್ತು ಅವರ ಜೀವನದ ಮುಂಬರುವ ವರ್ಷಗಳಲ್ಲಿ ಸಂವೇದನಾಶೀಲ ಮಾನವನನ್ನು ರೂಪಿಸಲು ಸಹಾಯ ಮಾಡುತ್ತದೆ.

ABOUT THE AUTHOR

...view details