'ಈಟಿವಿ ಭಾರತ'ದೊಂದಿಗೆ ಬಾಬಾ ರಾಮದೇವ್ ಸಂದರ್ಶನ ನವದೆಹಲಿ: ಯೋಗ ಗುರು ಬಾಬಾ ರಾಮದೇವ್ "ಈಟಿವಿ ಭಾರತ"ದೊಂದಿಗಿನ ವಿಶೇಷ ಸಂದರ್ಶನದಲ್ಲಿ ಆರೋಗ್ಯಕರ ಮತ್ತು ರೋಗಮುಕ್ತ ಜೀವನವನ್ನು ನಡೆಸಲು ಯೋಗದ ಮಹತ್ವದ ಕುರಿತು ಮಾತನಾಡಿದರು. ಜನರು ಆರೋಗ್ಯಕರ ಮತ್ತು ಒತ್ತಡ ಮುಕ್ತ ಜೀವನ ನಡೆಸಲು ಪತಂಜಲಿ ಹೇಗೆ ನಿರ್ವಹಿಸುತ್ತಿದೆ ಎಂಬುದರ ಕುರಿತು ಅವರು ಮಾತನಾಡಿದರು.
ತಮ್ಮ ಹೋರಾಟದ ದಿನಗಳ ಬಗ್ಗೆ ಮಾತನಾಡಿದ ರಾಮ್‌ದೇವ್ "ಅಡೆ - ತಡೆಗಳೊಂದಿಗಿನ ಜೀವನ ನಿರ್ಜೀವವಾಗಿದೆ. ನಾವು ಉತ್ತರಾಖಂಡದ ಹರಿದ್ವಾರದಲ್ಲಿ ಪತಂಜಲಿ ಪ್ರಾರಂಭಿಸಿದಾಗ ಅದು ನಮಗೆ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವು ಫಲಿತಾಂಶವನ್ನು ತಂದಿತು. ಈಗ ಹಿಂತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ನಮ್ಮ ಉತ್ಪನ್ನಗಳು ಮನೆ ಮಾತಾಗಿವೆ. ನಾವು ಈಗ ನಮ್ಮ ಕಠಿಣ ಪರಿಶ್ರಮದ ಲಾಭವನ್ನು ಪಡೆಯುತ್ತಿದ್ದೇವೆ" ಎಂದರು.
ಇದನ್ನೂ ಓದಿ:ಅಲೋಪತಿಯಿಂದ ಅನಾರೋಗ್ಯ, ನಿರಂತರ ಔಷಧಿ ಸೇವನೆಯಿಂದ ಹಲವರಿಗೆ ಕಿಡ್ನಿ ಸಮಸ್ಯೆ: ಬಾಬಾ ರಾಮದೇವ್
ಪತಂಜಲಿ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿವೆ: "ಸಮಾಜ ಮತ್ತು ರಾಷ್ಟ್ರಕ್ಕೆ ನನ್ನ ನಿಸ್ವಾರ್ಥ ಸೇವೆ ಎಂದೆಂದಿಗೂ ಮುಂದುವರಿಯುತ್ತದೆ. ಇದು ಕೇವಲ ಪ್ರಾರಂಭವಾಗಿದೆ. ನಾವು ಹೋಗಲು ಮೈಲಿಗಳಷ್ಟು ದೂರವಿದೆ. ನಮ್ಮ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿವೆ. ನಾವು ನಮ್ಮ ಉತ್ಪನ್ನಗಳಲ್ಲಿ ಪ್ರಾಣಿ ಪ್ರೋಟೀನ್ ಅನ್ನು ಬಳಸುವುದಿಲ್ಲ. ಪತಂಜಲಿಯ ಪ್ರೋಟೀನ್ ಪುಡಿಯಲ್ಲಿ ಪ್ರಾಣಿ ಪ್ರೋಟೀನ್ ಇಲ್ಲ" ಎಂದು ಅವರು ಹೇಳಿದರು.
ಆರೋಗ್ಯಕರ ಜೀವನಕ್ಕೆ ಎರಡು ಕೆಲಸಗಳನ್ನು ಮಾಡಲು ಅವರು ಸಲಹೆ ನೀಡಿದರು.
- ಜಿಮ್‌ನಲ್ಲಿ ತಾಲೀಮು ಮಾಡಬಹುದು
- ಯೋಗಾಸನಗಳನ್ನು ಮಾಡಬಹುದು.
"ಜಿಮ್‌ನಲ್ಲಿ ವರ್ಕೌಟ್ ಮಾಡುವುದರಿಂದ ಸ್ನಾಯುಗಳು ಗಟ್ಟಿಯಾಗುತ್ತವೆ. ಆದ್ದರಿಂದ ವ್ಯಾಯಾಮ ಮತ್ತು ಯೋಗದ ಸಂಯೋಜನೆಯು ಮನಸ್ಸು ಮತ್ತು ದೇಹ ಎರಡಕ್ಕೂ ಒಳ್ಳೆಯದು. ನಾನು ಹೇಳುವ ವಿಷಯವೆಂದರೆ ಸ್ನಾಯುವಿನ ದ್ರವ್ಯರಾಶಿಯನ್ನು ಪಡೆಯಲು ಪ್ರೋಟೀನ್ ಪುಡಿಯನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಹಾಲು, ತುಪ್ಪ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು" ಎಂದರು.
ರಾಸಾಯನಿಕ ಆಧಾರಿತ ಉತ್ಪನ್ನ ಮಾರಕ:ಸಿಂಥೆಟಿಕ್ ಅಥವಾ ರಾಸಾಯನಿಕ ಆಧಾರಿತ ಉತ್ಪನ್ನಗಳನ್ನು ಸೇವಿಸಿ ಜನರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬಾಬಾ ರಾಮದೇವ್ ಹೇಳಿದರು. "ಸಿಂಥೆಟಿಕ್ ಅಥವಾ ರಾಸಾಯನಿಕ ಆಧಾರಿತ ಉತ್ಪನ್ನಗಳ ಸೇವನೆಯು ಮೂತ್ರಪಿಂಡ, ಹೃದಯ ಅಥವಾ ಪಿತ್ತಜನಕಾಂಗದ ಕಾಯಿಲೆಗಳಿಗೆ ಕಾರಣವಾಗುತ್ತಿದೆ.
ಆದ್ದರಿಂದ, ನಮ್ಮ ಕಂಪನಿಯು ನೈಸರ್ಗಿಕ ವಿಟಮಿನ್ ಬಿ 12, ಡಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಒಮೆಗಾ -3 ಕೊಬ್ಬಿನ ಅಮ್ಲಗಳನ್ನು ಹೊಂದಿರುವ ಶೇ.100 ರಷ್ಟು ರಾಸಾಯನಿಕ ಮುಕ್ತ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿತು. ನಮ್ಮ ಉತ್ಪನ್ನಗಳು ಸಕ್ರಿಯ ಪ್ರೋಟೀನ್ ಅನ್ನು ಹೊಂದಿರುತ್ತವೆ. ನಮ್ಮ ಉತ್ಪನ್ನಗಳಲ್ಲಿ ಬಳಸುವ ಪದಾರ್ಥಗಳು ನೈಸರ್ಗಿಕ ಮತ್ತು ಜೈವಿಕ ಹುದುಗುವಿಕೆಯಿಂದ ಕೂಡಿರುತ್ತವೆ. ನಾವು ಪ್ರಾಣಿಗಳನ್ನು ಕೊಲ್ಲುವ ಮೂಲಕ ಪದಾರ್ಥಗಳನ್ನು ಬಳಸುವುದಿಲ್ಲ ಎಂದರು.
ಇದನ್ನೂ ಓದಿ:1000 ಅಲೋಪತಿ ಡಾಕ್ಟರ್ಗಳನ್ನ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್