ಕರ್ನಾಟಕ

karnataka

ETV Bharat / sukhibhava

ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆ ದಿನ 2023: ಈ ದಿನದ ಮಹತ್ವ ಮತ್ತು ಉದ್ದೇಶ - ಬಡತನವನ್ನು ನಿರ್ಮೂಲನೆ ಮಾಡುವ ಗುರಿ

ಬಡತನ ಎಂಬುದು ಆರ್ಥಿಕ ಸಮಸ್ಯೆ ಹೊರತಾಗಿಯೂ ಜೀವನದ ಅನೇಕ ಆಯಾಮಗಳಲ್ಲಿ ಇರುತ್ತದೆ..

International Day for the Eradication of Poverty 2023 day significance importance
International Day for the Eradication of Poverty 2023 day significance importance

By ETV Bharat Karnataka Team

Published : Oct 17, 2023, 10:49 AM IST

ಬೆಂಗಳೂರು: ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆ ದಿನವನ್ನು ಪ್ರತಿ ವರ್ಷ ಅಕ್ಟೋಬರ್​​ 17ರಂದು ಆಚರಿಸಲಾಗುತ್ತದೆ. ಈ ಮೂಲಕ ಸಮಾಜದಲ್ಲಿ ಅರಿವು ಹೆಚ್ಚಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡುವ ಗುರಿಯನ್ನು ಇದು ಹೊಂದಿದೆ. ಈ ಜಾಗತಿಕ ಉಪಕ್ರಮವೂ ಬಡತನ, ಹಿಂಸೆ ಮತ್ತು ಹಸಿವು ಅನ್ನು ಗುರುತಿಸಿ ಅದಕ್ಕೆ ಪರಿಹಾರ ನೀಡುವುದು ಮತ್ತು ಬಡತನದಲ್ಲಿರುವವರಿಗೆ ಧ್ವನಿಯಾಗಿಸಲು ಪ್ರಯತ್ನಿಸುವುದಾಗಿದೆ.

ಇತಿಹಾಸ:ಇದರ ಮೂಲ ಅರ್ಥವು ಮಾನವ ಹಕ್ಕುಗಳೊಂದಿಗೆ ಆಳವಾದ ನಂಬಿಕೆಯನ್ನು ಹೊಂದಿದ್ದು, ಹಕ್ಕನ್ನು ಗೌರವಿಸಲು ಜಾಗತಿಕ ಸಹಯೋಗವನ್ನು ಒತ್ತಾಯಿಸುತ್ತದೆ. ಜೊತೆಗೆ ಬಡತನ ಮುಕ್ತ ಮಾನವ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. 1987ರಲ್ಲಿ ನಡೆದ ಮಹತ್ವ ಸಭೆಯಲ್ಲಿ ಬಡತನಕ್ಕೆ ಒಳಗಾದವರು ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ಗೌರವಿಸಲು ಒಂದುಗೂಡಲಾಯಿತು.

ಧ್ಯೇಯ ವಾಕ್ಯ: ಸಭ್ಯ ಕೆಲಸ ಮತ್ತು ಸಾಮಾಜಿಕ ರಕ್ಷಣೆ: ಎಲ್ಲರಿಗೂ ಗೌರವಯುತ ಆಚರಣೆ ಎಂಬುದು ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆಯ ಧ್ಯೇಯ ವಾಕ್ಯವಾಗಿದೆ, ಈ ಮೂಲಕ ಬಡತನದಲ್ಲಿರುವವರ ಪರಿಸ್ಥಿತಿಯನ್ನು ತೋರಿಸುವ ಪ್ರಯತ್ನ ನಡೆಸಲಾಗಿದೆ. ತಮ್ಮನ್ನು ಮತ್ತು ಕುಟುಂಬದ ಪೋಷಣೆ ಮಾಡಲು ಸಾಮಾಜಿಕ ನ್ಯಾಯ ಉತ್ತೇಜಿಸಿ, ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಸಾರ್ವತ್ರಿಕ ಸಾಮಾಜಿಕ ರಕ್ಷಣೆಗಾಗಿ ಪ್ರತಿಪಾದಿಸುತ್ತದೆ.

ಬಹು ಆಯಾಮದ ಬಡತನ: ಬಡತನ ಎಂಬುದು ಆರ್ಥಿಕ ಸಮಸ್ಯೆ ಹೊರತಾಗಿಯೂ ಜೀವನದ ಅನೇಕ ಮಾದರಿಗಳಲ್ಲಿ ಇರುತ್ತದೆ. ಆರೋಗ್ಯ, ಶಿಕ್ಷಣ, ಬದುಕಿನ ಗುಣಮಟ್ಟ ಹೀಗೆ.. ವಿಶ್ವ ಬ್ಯಾಂಕ್​ ಬಡತನ ನಿರ್ಮೂಲನೆಗೆ ಕರೆ ನೀಡಿದೆ. ಇದು ಸಾಕಷ್ಟು ಪೋಷಣೆ, ಶಿಕ್ಷಣ, ಆಶ್ರಯ ಮತ್ತು ಸುರಕ್ಷತೆಯನ್ನು ಒದಗಿಸಲು ಪ್ರಯತ್ನಗಳನ್ನು ಪ್ರೇರೇಪಿಸುತ್ತದೆ.

ಆರೋಗ್ಯ: ಅಪೌಷ್ಟಿಕಾಂಶ, ಶಿಶು ಮರಣದ ದರ

ಶಿಕ್ಷಣ: ಕಳಪೆ ಶಿಕ್ಷಣ, ಬಾಲ್ಯ ವಿವಾಹ

ಜೀವನದ ಗುಣಮಟ್ಟ:

  • ಕಡಿಮೆ ನೀರಿನ ಮೂಲ
  • ಶಾಶ್ವತ ಮನೆ ಇಲ್ಲದಿರುವುದು
  • ಕಡಿಮೆ ಕೊಳ್ಳುವ ಶಕ್ತಿ
  • ಅಡುಗೆ ಎಣ್ಣೆ
  • ಶುಚಿತ್ವ
  • ಕಡಿಮೆ ಆಸ್ತಿ

ಇತರೆ

  • ಬಾಲ ಕಾರ್ಮಿಕರು
  • ಜನರ ಮೇಲೆ ದೌರ್ಜನ್ಯ

ಮೂಲಭೂತ ಅಗತ್ಯತೆ ಪೂರೈಕೆಗೆ ಅಪರಾಧ ಚಟುವಟಿಕೆ..ವಿಶ್ವ ಸಾಮಾಜಿಕ ಶೃಂಗಸಭೆಯಲ್ಲಿ ಬಡತನ ನಿರ್ಮೂಲನೆಯನ್ನು ನೈತಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಗತ್ಯ ಎಂದು ಗುರುತಿಸಲಾಗಿದೆ. ಬಡತನದ ಮೂಲ ಕಾರಣಗಳನ್ನು ಪರಿಹರಿಸಲು ಸರ್ಕಾರ ಕರೆ ನೀಡಿದೆ. ಮೂಲಭೂತ ಅವಶ್ಯಕತೆಯನ್ನು ನೀಡಿ, ಉತ್ಪಾದನೆ ಮೂಲಗಳಾದ ಸಾಲ, ಶಿಕ್ಷಣ ಮತ್ತು ತರಬೇತಿಯನ್ನು ಲಭ್ಯವಾಗುವಂತೆ ನೋಡಿಕೊಳ್ಳುವುದು.

ಭಾರತದಲ್ಲಿನ ಸವಾಲು: ಭಾರತದಲ್ಲಿ ಅನೇಕ ಅಭಿವೃದ್ಧಿಯ ಹೊರತಾಗಿ ಇಂದಿಗೂ ಬಡತನದ ಸವಾಲು ಹಾಗೇ ಉಳಿದಿದೆ. ದೇಶದಲ್ಲಿ ಅಸಮಾನ ಸಂಪತ್ತಿನ ಹಂಚಿಕೆ, ಶಿಕ್ಷಣದ ಸೀಮಿತ ಮೌಲ್ಯ ಮತ್ತು ಆರೋಗ್ಯ, ಲಿಂಗತಾರತಮ್ಯ, ಜಾತಿ ಮತ್ತು ಧರ್ಮಗಳು ಬಡತನಕ್ಕೆ ಕೊಡುಗೆಯನ್ನು ನೀಡುತ್ತಿವೆ.

ವಿಶ್ವ ಬ್ಯಾಂಕ್​ ಅನುಸಾರ, 2019ರಲ್ಲಿ ಶೇ 22.4ರಷ್ಟು ಭಾರತೀಯರು ಬಡತನದ ಗಡಿಯಲ್ಲಿ ಜೀವನ ಕಳೆಯುತ್ತಿದ್ದಾರೆ. 2023ರ ರಾಷ್ಟ್ರೀಯ ಬಹು ಆಯಾಮ ಬಡತನ ಸೂಚ್ಯಂಕ ವರದಿಯಲ್ಲಿ 135 ಮಿಲಿಯನ್​ ಜನರು 2015 ಮತ್ತು 16 ಹಾಗೂ 2019-21ರ ನಡುವೆ ಬಹು ಆಯಾಯದ ಬಡತನದಿಂದ ಪಾರಾಗಿದ್ದಾರೆ. ದೇಶದಲ್ಲಿ ಬಹು ಆಯಾಮದ ಬಡತನದ ಶೇ 9.89ರಷ್ಟು ಗಮನಾರ್ಹ ಇಳಿಕೆ ಕಂಡಿದೆ.

ಗ್ರಾಮೀಣ ಪ್ರದೇಶದಲ್ಲಿ ಬಡತನ ವೇಗವಾಗಿ ಶೇ 32.59ರಿಂದ ಶೇ19.28ರಷ್ಟು ಇಳಿಕೆ ಕಂಡಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು 707 ಆಡಳಿತಾತ್ಮಕ ಜಿಲ್ಲೆಗಳಿಗೆ ಬಹುಆಯಾಮದ ಬಡತನದ ಅಂದಾಜುಗಳನ್ನು ಒದಗಿಸುವ ವರದಿಯು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬಹುಆಯಾಮದ ಬಡವರ ಅನುಪಾತದಲ್ಲಿ ವೇಗದ ಇಳಿಕೆ ಕಂಡಿದೆ.

ಇದನ್ನೂ ಓದಿ: 2023 ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತಕ್ಕೆ 111ನೇ ಸ್ಥಾನ: ವರದಿ ದೋಷಪೂರಿತ ಎಂದ ಸರ್ಕಾರ

ABOUT THE AUTHOR

...view details