ಕರ್ನಾಟಕ

karnataka

ETV Bharat / sukhibhava

ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನಾಚರಣೆ: ಏನೀ ದಿನದ ಉದ್ದೇಶ, ಪ್ರಾಮುಖ್ಯತೆ?

International Civil Aviation Day 2023: ಜಾಗತಿಕ ವಾಯು ಸಾರಿಗೆ ವಲಯದಲ್ಲಿ ಐಸಿಇಒ ಪ್ರಯತ್ನದಿಂದಾಗಿ 65.5 ಮಿಲಿಯನ್​ ಉದ್ಯೋಗ ಸೃಷ್ಟಿಯಾಗಿದ್ದು, ಇದು ಜಾಗತಿಕ ಆರ್ಥಿಕ ಚಟುವಟಿಕೆಗೆ 2.7 ಟ್ರಿಲಿಯನ್​ ಅಮೆರಿಕ ಡಾಲರ್​​ ಕೊಡುಗೆ ನೀಡುತ್ತಿದೆ

international-civil-aviation-day-importance-theme
international-civil-aviation-day-importance-theme

By ETV Bharat Karnataka Team

Published : Dec 7, 2023, 2:11 PM IST

ಹೈದರಾಬಾದ್​: ಅಂತಾರಾಷ್ಟ್ರೀಯ ನಾಗರಿಕ ವಿಮಾನ ದಿನವನ್ನು ಪ್ರತಿ ವರ್ಷ ಡಿಸೆಂಬರ್​ 7ರಂದು ಆಚರಿಸಲಾಗುವುದು. ಈ ಮೂಲಕ ಜಾಗತಿಕ ವಾಯು ಸಾರಿಗೆಯಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ (ಐಸಿಎಒ) ಪಾತ್ರದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ನಡೆಸಲಾಗುತ್ತದೆ. ಅಲ್ಲದೇ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನವು ದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿನ ನಿರ್ಣಾಯಕ ಪಾತ್ರದ ಕುರಿತು ಜಾಗತಿಕವಾಗಿ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುವುದು. ಐಸಿಒಎಸ್​ ಜಾಗತಿಕ ಸಹಕಾರ ಅಭಿವೃದ್ಧಿಯ ಪಾತ್ರದ ಕುರಿತು ಒತ್ತಿ ಹೇಳಲಾಗುವುದು.

1994ರಲ್ಲಿ ಐಸಿಎಒ ಆರಂಭವಾದಾಗಿನಿಂದ ಸಂಘಟನೆ ಜಾಗತಿಕ ಸಮಾರಂಭವಾಗಿ ಆಚರಿಸಲಾಗುತ್ತಿದೆ. ಐಸಿಎಒ ವಿಶ್ವಸಂಸ್ಥೆಯ ಭಾಗವಾಗಿದ್ದು, ವಾಯುಯಾನ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಮಾನದಂಡಗಳನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ವರ್ಷ ಅಂದರೆ 2023ರಲ್ಲಿ ಜಾಗತಿಕ ವಾಯುಯಾನ ಅಭಿವೃದ್ಧಿಗಾಗಿ ಅಭಿವೃದ್ಧಿ ಅವಿಷ್ಕಾರ ಎಂಬುದು ಐಸಿಎಒನ ಧ್ಯೇಯವಾಕ್ಯವಾಗಿದೆ.

ಅಂತಾರಾಷ್ಟ್ರೀಯ ವಾಯುಯಾನ ದಿನ ಆಚರಣೆ ಕಾರಣ?:ವಿಶ್ವಸಂಸ್ಥೆ ಪ್ರಕಾರ, ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ದಿನದ ಉದ್ದೇಶ ಜಗತ್ತಿನ ಏರ್​ ಟ್ರಾಫಿಕ್​ನಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನದ ಪ್ರಾಮುಖ್ಯತೆಗೆ ಒತ್ತು ನೀಡುವುದಾಗಿದೆ. ವಿಶ್ವಸಂಸ್ಥೆಯ ಏಜೆನ್ಸಿ ಐಸಿಎಒನ ಚಟುವಟಿಕೆ ಕುರಿತು ಮೇಲ್ವಿಚಾರಣೆ ನಡೆಸುತ್ತದೆ. ಈ ಮೂಲಕ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನದ ಸುರಕ್ಷಾ ಗುಣಮಟ್ಟ ಜಾರಿಯ ಜವಾಬ್ದಾರಿ ಹೊಂದಿದೆ.

ಐಸಿಎಒ ಮತ್ತು ನಾಗರಿಕ ವಾಯುಯಾನದ ಪ್ರಾಮುಖ್ಯತೆ: ಐಸಿಎಒ ಜೊತೆಗೆ ನಾಗರಿಕ ವಾಯುಯಾನ ಅನೇಕ ಕಾರಣಗಳಿಂದ ಪ್ರಾಮುಖ್ಯತೆ ಹೊಂದಿದೆ.

ಆರ್ಥಿಕ ಪ್ರಯೋಜನ: ಆರ್ಥಿಕ ಚಟುವಟಿಕೆಗೆ, ಏರ್​ಲೈನ್ಸ್​​, ಏರ್​​ಪೋರ್ಟ್​ ಮತ್ತು ಏರ್​ ನಾವಿಗೇಷನ್​ ಸೇವೆಗಳಲ್ಲಿ ಉದ್ಯೋಗ ಸೃಷ್ಟಿಸುವ ಪ್ರಮುಖ ಉದ್ಯಮ ವಾಯುಯಾನವಾಗಿದೆ. ಇದರ ಜೊತೆಗೆ ವಾಯುಯಾನ ಉತ್ಪಾದನೆ, ಏರ್​​ಕ್ರಾಫ್ಟ್​​, ಇಂಜಿನ್​ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಉದ್ಯೋಗ ಸೃಷ್ಟಿಗೆ ವೇದಿಕೆ ನೀಡುತ್ತದೆ. ಪರೋಕ್ಷವಾಗಿ ಇಂಧನ ಪೂರೈಕೆ ಮತ್ತು ಕಟ್ಟಡ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ವಿಶ್ವಸಂಸ್ಥೆ ಪ್ರಕಾರ, ವಾಯುಯಾನವೂ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಹೊಂದಿದೆ.

ಸಾಮಾಜಿಕ ಪ್ರಯೋಜನ: ವಾಯುಯಾನವೂ ಇದು ರಾಷ್ಟ್ರ ಮತ್ತು ಜನರ ನಡುವೆ ಸಕರಾತ್ಮಕ ಸಾಮಾಜಿಕ ಬದಲಾವಣೆಯನ್ನು ತರುತ್ತದೆ. ಜನರ ಜೀವನ ಮಟ್ಟ ಅಭಿವೃದ್ಧಿ, ಆಹಾರ, ಆರೋಗ್ಯ ಸೇವೆ, ಶಿಕ್ಷಣ ಮತ್ತು ಸಮುದಾಯ ಸುರಕ್ಷತೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತದೆ. ವಾಯುಯಾನವೂ ಜಾಗತಿಕ ಸಾಮಾಜಿಕ ಕಾರಣಗಳಿಂದ ನಿರ್ಣಾಯಕ ಪಾತ್ರವಹಿಸುತ್ತದೆ. ಇದು ದುರ್ಬಲ ಗುಂಪು, ವಲಸೆ ಮತ್ತು ರಿಮೋಟ್​​ ಪ್ರದೇಶದಲ್ಲಿ ಇದು ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ.

ಐಸಿಎಒ ಚೀನಿ ಮತ್ತು ಅರೇಬಿಕ್​ ಭಾಷೆಯನ್ನು ತಮ್ಮ ಅಧಿಕೃತ ಕಾರ್ಯನಿರ್ವಹಣಾ ಭಾಷೆಯಾಗಿ 1995ರಿಂದ ಪರಿಚಯಿಸಿದೆ. ಜಾಗತಿಕ ವಾಯು ಸಾರಿಗೆ ವಲಯದಲ್ಲಿ ಐಸಿಇಒ ಪ್ರಯತ್ನದಿಂದಾಗಿ 65.5 ಮಿಲಿಯನ್​ ಉದ್ಯೋಗ ಸೃಷ್ಟಿಯಾಗಿದ್ದು, ಇದು ಜಾಗತಿಕ ಆರ್ಥಿಕ ಚಟುವಟಿಕೆಗೆ 2.7 ಟ್ರಿಲಿಯನ್​ ಅಮೆರಿಕ ಡಾಲರ್​​ ಕೊಡುಗೆ ನೀಡುತ್ತಿದೆ. ನಿತ್ಯ 10 ಮಿಲಿಯನ್​ ವಾಯುಯಾನದಲ್ಲಿ ತೊಡಗಿಸಿಕೊಂಡ ಸಿಬ್ಬಂದಿಗಳು 1,20,00 ವಿಮಾನಗಳಲ್ಲಿ 12 ಮಿಲಿಯನ್​ ಪ್ರಯಾಣಿಕರ ಸುರಕ್ಷತೆಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅಡುಗೆ ಎಣ್ಣೆ ಬಳಸಿ ವಿಮಾನ ಹಾರಾಟ! ಇತಿಹಾಸ ಸೃಷ್ಟಿಸಿದ ವರ್ಜಿನ್ ಅಟ್ಲಾಂಟಿಕ್ ಏರ್​ಲೈನ್ಸ್​

ABOUT THE AUTHOR

...view details