ನ್ಯೂಯಾರ್ಕ್: ನಿದ್ರೆ ಸಮಸ್ಯೆ ಅನುಭವಿಸುವುದು, ರಾತ್ರಿಯಿಡೀ ಎಚ್ಚರಿದಿಂದಿರುವುದು ಅಥವಾ ಬಲು ಬೇಗ ಎಚ್ಚರವಾಗುವುದು ನಿದ್ರಾಹೀನತೆಯ ಪ್ರಮುಖ ಸಮಸ್ಯೆ. ನಿದ್ರಾಹೀನತೆ ಸಮಸ್ಯೆ ಅನುಭವಿಸುತ್ತಿರುವ ಜನರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ನ್ಯೂರಾಲಾಜಿ ಜರ್ನಲ್ನಲ್ಲಿ ವರದಿ ಪ್ರಕಟಿಸಲಾಗಿದೆ.
ಅಧ್ಯಯನ ವರದಿಯಲ್ಲಿ ನಿದ್ರಾಹೀನತೆಯ ಲಕ್ಷಣಗಳು ಮತ್ತು ಪಾರ್ಶ್ವವಾಯುನೊಂದಿಗಿನ ಸಂಬಂಧದ ಕುರಿತು ವಿವರಿಸಲಾಗಿದೆ. ಇದರಲ್ಲಿ 50ರ ವಯೋಮಿತಿಗಿಂತ ಕಡಿಮೆ ವಯಸ್ಸಿನವರು 5ರಿಂದ 8 ಗಂಟೆ ನಿದ್ರಾಹೀನತೆ ಲಕ್ಷಣ ಹೊಂದಿರುವವರು ಯಾವುದೇ ಲಕ್ಷಣ ಹೊಂದಿಲ್ಲದವರಿಗೆ ಹೋಲಿಕೆ ಮಾಡಿದರೆ, ಪಾರ್ಶ್ವವಾಯುಗೆ ತುತ್ತಾಗುವ ಅಪಾಯ ನಾಲ್ಕು ಪಟ್ಟು ಹೆಚ್ಚಿದೆ ಎಂದು ತಿಳಿಸಲಾಗಿದೆ.
ನಿದ್ರಾಹೀನತೆಯ ಒಂದು ಲಕ್ಷಣ ಹೊಂದಿರುವವರು ಶೇ. 16ರಷ್ಟು ಪಾರ್ಶ್ವವಾಯು ಅಪಾಯ ಹೊಂದಿದ್ದರೆ, ಐದು ನಿದ್ರಾಹೀನತೆ ಲಕ್ಷಣ ಹೊಂದಿರುವ ಜನರಲ್ಲಿ ಪಾರ್ಶ್ವವಾಯು ಅಪಾಯ ಶೇ. 51ರಷ್ಟಿದೆ. ಈ ಅಧ್ಯಯನವೂ ನಿದ್ರಾಹೀನತೆ ಲಕ್ಷಣ ಪಾರ್ಶ್ವವಾಯುಗೆ ತುತ್ತಾಗುತ್ತದೆ ಎಂಬುದನ್ನು ಸಾಬೀತು ಮಾಡಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಹಲವು ಚಿಕಿತ್ಸೆಗಳು ನಿದ್ರಾ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ. ನಿದ್ರಾಹೀನತೆ ಪಾರ್ಶ್ವವಾಯು ಸಮಸ್ಯೆ ಹೆಚ್ಚಿಸುವ ಅಪಾಯವನ್ನು ತಡೆಯಲು ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಬಹುದು. ಇದರಿಂದ ಅವರು ಮುಂದಿನ ಜೀವನದಲ್ಲಿ ಎದುರಾಗುವ ಪ್ರಾಣಾಪಾಯ ಕಡಿಮೆ ಮಾಡಬಹುದು ಎಂದು ಅಮೆರಿಕದ ವರ್ಜಿನಿಯಾ ಕಾಮಮನ್ವೇಲ್ತ್ ಯುನಿವರ್ಸಿಟಿಯ ವೆನ್ಡೆಮಿ ಸವಡೊಗೊ ಸಲಹೆ ನೀಡಿದ್ದಾರೆ.
ಈ ಅಧ್ಯಯನಕ್ಕಾಗಿ 31,126 ಜನರನ್ನು ಭಾಗಿದಾರರನ್ನಾಗಿ ಮಾಡಲಾಗಿತ್ತು. ಇವರ ಸರಾಸರಿ ವಯೋಮಿತಿ 61 ವರ್ಷ ಆಗಿತ್ತು. ಇವರ ಸರಾಸರಿ ನಿದ್ರೆ ಅವಧಿ 9 ಗಂಟೆಗಳಾಗಿದೆ. ಪೂರ್ವದಲ್ಲಿ ಯಾವುದೇ ಪಾರ್ಶ್ವವಾಯುವಿನ ಇತಿಹಾಸ ಹೊಂದಿರದ ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 9 ವರ್ಷಗಳ ಅಧ್ಯಯನದ ಬಳಿಕ 2,101 ಮಂದಿಯಲ್ಲಿ ಸ್ಟ್ರೋಕ್ ಪತ್ತೆಯಾಗಿದೆ.
ಇದರಲ್ಲಿ 458 ಮಂದಿ 50 ವರ್ಷದ ಒಳಗಿನವರಾಗಿದ್ದು, ಇವರಲ್ಲಿ ಐದರಿಂದ ಎಂಟು ನಿದ್ರಾಹೀನತೆ ಲಕ್ಷಣಗಳಿವೆ. 27 ಮಂದಿ ಪಾರ್ಶ್ವವಾಯುಗೆ ತುತ್ತಾಗಿದ್ದಾರೆ. 50 ಮತ್ತು ಅದಕ್ಕಿಂತ ಹೆಚ್ಚಿನವರು ಶೇ 38ರಷ್ಟು ಮಂದಿ ರಷ್ಟು ಪಾರ್ಶ್ವವಾಯುವಿನ ಅಪಾಯ ಹೊಂದಿದ್ದಾರೆ. ಪಾರ್ಶ್ವವಾಯುವಿನ ಅಪಾಯದ ಅಂಶ ಹೊಂದಿರುವವರಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಕೂಡ ಅಭಿವೃದ್ಧಿ ಕಂಡಿದೆ. ಕಡಿಮೆ ವಯಸ್ಸಿನಲ್ಲಿ ನಿದ್ರಾಹೀನತೆ ಲಕ್ಷಣಗಳು ಭವಿಷ್ಯದ ಅಪಾಯವನ್ನು ನಿರ್ವಹಣೆ ಮಾಡಲಿದೆ. ಭವಿಷ್ಯದ ಸಂಶೋಧನೆಯಲ್ಲಿ ಉತ್ತಮ ನಿದ್ರೆ ನಿರ್ವಹಣೆ ಹೊಂದುವ ಮೂಲಕ ಪಾರ್ಶ್ವವಾಯು ಅಪಾಯ ಪತ್ತೆ ಮಾಡಬಹುದು. ನಿದ್ರಾಹೀನತೆ, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಮಸ್ಯೆ ಮತ್ತು ಖಿನ್ನತೆಯೊಂದಿಗಿನ ಸಮಸ್ಯೆ ನಂಟು ಹೊಂದಿದೆ. ಈ ಅಧ್ಯಯನವೂ ಸೀಮಿತವಾಗಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ಇದನ್ನೂ ಓದಿ:ನಿದ್ರಾಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆ.. ಸುಖ ನಿದ್ರೆಗೆ ಇಲ್ಲಿದೆ ಸಲಹೆ