ಕರ್ನಾಟಕ

karnataka

ETV Bharat / sukhibhava

ಮಳೆಗಾಲದ ಸಾಂಕ್ರಾಮಿಕ ರೋಗವು ಶ್ವಾಸಕೋಶ ಸೋಂಕಿಗೆ ದಾರಿ - lungs desease

ಡಿಎಎಫ್ ಎನ್ನುವುದು ಕೋಶಗಳ ಮೇಲೆ ಕಂಡು ಬರುವ ಪ್ರತಿರೋಧ ಎದುರಿಸಲು ಇರುವ ಕಣ್ಗಾವಲು ವ್ಯವಸ್ಥೆ ಎನ್ನಬಹುದು. ರೋಗಾಕಾರಕಗಳ ಪತ್ತೆ ಹಚ್ಚಿದ ಬಳಿಕ ಅವುಗಳ ನಿಷ್ಕ್ರಿಯಗೊಳಿಸುವ ಮೂಲಕ ಅಥವಾ ಕೋಶಗಳಿಂದ ಅವುಗಳನ್ನು ತೆಗೆದು ಹಾಕುವ ಮೂಲಕ ನಮ್ಮ ಶ್ವಾಸಕೋಶವನ್ನು ಸೋಂಕಿನಿಂದ ರಕ್ಷಿಸುತ್ತದೆ..

inside-the-lungs-a-new-hope-for-protection-against-flu
ಮಳೆಗಾಲದ ಸಾಂಕ್ರಾಮಿಕ ರೋಗವು ಶ್ವಾಸಕೋಶ ಸೋಂಕಿಗೆ ದಾರಿ

By

Published : Jul 10, 2021, 8:29 PM IST

ಭಾರತದಲ್ಲಿ ಅನೇಕ ಕಾಯಿಲೆಗಳು ಮಾನ್ಸೂನ್ ಕಾಲದಲ್ಲಿ ಹರಡುತ್ತವೆ. ಕಾಲೋಚಿತ ಜ್ವರದಂತೆ ಸೋಂಕು ಈ ಕಾಲದಲ್ಲಿಯೇ ಆರಂಭವಾಗುತ್ತದೆ. ಪೋರ್ಚುಗಲ್​ನ ಅಧ್ಯಯನವೊಂದರ ಪ್ರಕಾರ ಜ್ವರವು ಶ್ವಾಸಕೋಶದ ಮೇಲೆ ಹಾನಿ ಮಾಡಲು ಮೊಲೆಕ್ಯೂಲರ್​​ ಮಾಡ್ಯೂಲೇಟ್​ಗಳೇ ಕಾರಣ ಎಂದು ತಿಳಿಸಿದೆ.

ಈ ಜ್ವರವು ವಿಶ್ವದಾದ್ಯಂತ ವರ್ಷಕ್ಕೆ 6 ಲಕ್ಷ ಜನರನ್ನು ಬಲಿಪಡೆಯುತ್ತದೆ. ಅಲ್ಲದೆ ಈ ಸೋಂಕುಗಳು ಶತನಮಾನ ಇತಿಹಾಸ ಹೊಂದಿವೆ. 1910ರ ಉತ್ತರಾರ್ಧದಲ್ಲಿ ಸ್ಪ್ಯಾನಿಷ್ ಜ್ವರ ಅಥವಾ 2009ರಲ್ಲಿ ಹೆಚ್​​​1ಎನ್​​1 ಸೇರಿವೆ. ಎರಡೂ ಕಾಯಿಲೆಯಲ್ಲಿ 50 ದಶಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

ಇನ್‌ಫ್ಲ್ಯೂಯೆನ್ಸಾದಂತಹ ವೈರಸ್​ಗಳು ನಮ್ಮ ಶ್ವಾಸಕೋಶಕ್ಕೆ ಪ್ರವೇಶ ಪಡೆದಾಗ. ಅದನ್ನು ಗುರುತಿಸಲು ಹಾಗೂ ವಿರೋಧ ಎದುರಿಸಲು ಸಿದ್ದಗೊಳ್ಳುವಂತೆ ಎಚ್ಚರಿಸಲು ಕಾಕ್ಟೈಲ್​ಗಳನ್ನು ಮೊಲೆಕ್ಯೂಲರ್​​ ಶೀಘ್ರವಾಗಿ ಪ್ರತಿರೋದಕ್ಕೆ ತಯಾರು ಮಾಡಲಿವೆ. ಈ ಪ್ರಕ್ರಿಯೆಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಸಕ್ರಿಯವಾಗುತ್ತದೆ.

ಕೆಲವರಲ್ಲಿ ಇನ್‌ಫ್ಲ್ಯೂಯೆನ್ಸಾ ವೈರಸ್ ದಾಳಿ ಮಾಡಿದಾಗ ಮೊದಲು ಹಾನಿಗೊಳಗಾಗುವುದು ಶ್ವಾಸಕೋಶವಾಗಿರುತ್ತದೆ. ಆದರೆ, ಕೆಲವರಲ್ಲಿ ಈ ಸೋಂಕು ಹಾನಿ ಮಾಡುವ ಮೊದಲೇ ಕ್ಷೀಣವಾಗುತ್ತವೆ.

ಡೀಕೇ ಆಕ್ಸಲರೇಟಿಂಗ್ ಫ್ಯಾಕ್ಟರ್​​​ಗಳು ಇನ್‌ಫ್ಲ್ಯೂಯೆನ್ಸಾ ವೈರಸ್​ನ ಪ್ರಭಾವ ಉಲ್ಬಣಗೊಳಿಸಲಿದೆ. ಇವು ಇಲಿಗಳಲ್ಲಿನ ಶ್ವಾಸಕೋಶದ ಮೇಲಿನ ಹಾನಿ ಹೆಚ್ಚಿಸುತ್ತವೆ ಎಂದು ಪೋರ್ಚುಗಲ್​ ಅಧ್ಯಯನ ತಂಡದ ಸದಸ್ಯೆ ಮಾರಿಯಾ ಜೊನೊ ಅಮೋರಿಮ್ ಬಹಿರಂಗಪಡಿಸಿದ್ದಾರೆ.

ಡಿಎಎಫ್ ಎನ್ನುವುದು ಕೋಶಗಳ ಮೇಲೆ ಕಂಡು ಬರುವ ಪ್ರತಿರೋಧ ಎದುರಿಸಲು ಇರುವ ಕಣ್ಗಾವಲು ವ್ಯವಸ್ಥೆ ಎನ್ನಬಹುದು. ರೋಗಾಕಾರಕಗಳ ಪತ್ತೆ ಹಚ್ಚಿದ ಬಳಿಕ ಅವುಗಳ ನಿಷ್ಕ್ರಿಯಗೊಳಿಸುವ ಮೂಲಕ ಅಥವಾ ಕೋಶಗಳಿಂದ ಅವುಗಳನ್ನು ತೆಗೆದು ಹಾಕುವ ಮೂಲಕ ನಮ್ಮ ಶ್ವಾಸಕೋಶವನ್ನು ಸೋಂಕಿನಿಂದ ರಕ್ಷಿಸುತ್ತದೆ.

ಆದರೆ, ಈ ಪ್ರಕ್ರಿಯೆಯ ವೇಳೆ ಶ್ವಾಸಕೋಶಕ್ಕೂ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಸೋಂಕಿನ ವಿರುದ್ಧ ಹೋರಾಡುವಾಗ ಪ್ರೇಕ್ಷಕ ಕೋಶಗಳ ಮೇಲೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದು ಉರಿಯೂತಕ್ಕೆ ಕಾರಣವಾಗುವ ಅಪಾಯವಿದೆ.

ABOUT THE AUTHOR

...view details