ಹೈದರಾಬಾದ್:ತಂತ್ರಜ್ಞಾನ ಬೆಳೆದಂತೆಲ್ಲಾ ಮನುಷ್ಯ ಅದರ ಲಾಭವನ್ನು ಪಡೆಯುವುದು ಸುಳ್ಳಲ್ಲ. ಅಂತಹದ್ದೇ ತಂತ್ರಜ್ಞಾನವನ್ನೇ ಬಳಕೆ ಮಾಡಿ, ಪ್ರೇಮಿಗಳ ದಿನವನ್ನು ಕೆಲವರು ಸಂಭ್ರಮಿಸಲು ಇಚ್ಛಿಸುತ್ತಾರೆ ಎಂಬ ಅಂಶವನ್ನು ಸಂಶೋಧನೆಯೊಂದು ತಿಳಿಸಿದೆ. ಪ್ರೇಮಿಗಳ ದಿನ ಎಂದರೆ, ಎದುರಿಗೆ ಪ್ರೇಮಿಯಿಂದ ನಿವೇದನೆ, ಕೈ ಕೈ ಹಿಡಿದು ಶಾಪಿಂಗ್, ಪ್ರಯಾಣ ಮಾಡಲು ಕೆಲವರು ಇಷ್ಟಪಡುತ್ತಾರೆ.
ಮತ್ತೆ ಕೆಲವು ಭಾರತೀಯರು ಮಾತ್ರ ಇದಕ್ಕೆ ವಿಭಿನ್ನವಾಗಿ ಚಿಂತಿಸುತ್ತಾರೆ ಎಂಬುದನ್ನು ಈ ಸಂಶೋಧನೆ ಹೊರ ಹಾಕಿದೆ. ಅದು ಹೇಗೆ ಎಂದರೆ, ವರ್ಚುಯಲ್ ಡೇಟಿಂಗ್. ಅಚ್ಚರಿಯಾದರೂ ಹೌದು, ಭಾರತೀಯರು ಮೆಟಾವರ್ಸೆಯಲ್ಲಿ ವರ್ಚುಯಲ್ ಡೇಟಿಂಗ್ ಮಾಡಲು ಸಿಕ್ಕಾಪಟ್ಟೆ ಉತ್ಸುಕರಾಗಿದ್ದಾರೆ ಎಂದು ಇದು ತಿಳಿಸಿದೆ. ಫೈನಾನ್ಸಿಯಲ್ ಸರ್ವಿಸ್ ಟೆಕ್ನಾಲಾಜಿ ಸಂಸ್ಥೆ ಅನುಸಾರ, ಶೇ 60 ರಷ್ಟು ಪುರುಷರು ಮತ್ತು ಶೇ 48ರಷ್ಟು ಮಹಿಳೆಯರು ಈ ರೀತಿ ಮೆಟಾವರ್ಸೆ ಮೂಲಕ ಈ ರೀತಿ ವರ್ಚಯಲ್ ಡೇಟಿಂಗ್ ನಡೆಸಲು ಇಚ್ಚಿಸುವುದಾಗಿ ತಿಳಿಸಿದ್ದಾರೆ.
ಭಾರತದಲ್ಲಿ ಅರೇಂಜ್ ಮ್ಯಾರೇಜ್ ಎಂಬುದು ಸಾಮಾನ್ಯ. ಡೇಟಿಂಗ್ ಅವಕಾಶಗಳಿಗೆ ಇಲ್ಲಿ ಮಿತಿ ಇದೆ. ಆದರೆ, ಮೆಟಾವರ್ಸೆ ತಮ್ಮ ಸಂಗಾತಿಗಳನ್ನು ಹುಡುಕಲು ಹೊಸ ಹಾದಿಯನ್ನು ಹುಡುಕಿಕೊಡಲಿದೆ ಎಂಬುದನ್ನು ಸಂಶೋಧನೆ ತಿಳಿಸಿದೆ. ಈ ಮೆಟಾವರ್ಸೆ ಮೂಲಕ ವರ್ಚುಯಲ್ ವರ್ಲ್ಡ್ನಲ್ಲಿ ಹೊಸ ಅವತಾರ್ಗಳನ್ನು ಬಳಕೆ ಮಾಡಿಕೊಂಡು ತಮ್ಮನ್ನು ಪ್ರತಿನಿಧಿಸಬಹುದಾಗಿದೆ.
ನಾಚಿಕೆ ಮತ್ತು ಅಂತರ್ಮುಖಿ ಜನರಿಗೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಈ ಹಿನ್ನೆಲೆ ಈ ವರ್ಚುಯಲ್ ಪ್ಲಾಟ್ಫರ್ಮ್ ಅವರಿಗೆ ಸಹಾಯ ಮಾಡಲಿದೆ ಎಂದು ಸಂಶೋಧನೆ ತಿಳಿಸಿದೆ. ವರ್ಚುಯಲ್ ಡೇಟಿಂಗ್ ವೈಯಕ್ತಿಕ ಡೇಟಿಂಗ್‌ನಂತೆಯೇ ಅನುಭೂತಿ ನೀಡದಿದ್ದರೂ ಸಹ, ಜನರ ನಡುವೆ ಸಂಪರ್ಕ ಸಾಧಿಸಲು ಮತ್ತು ಸಂಬಂಧಗಳನ್ನು ಸೃಷ್ಟಿಸಲು ಹೊಸ ಹಾದಿ ಸೃಷ್ಟಿಸಲಿದೆ.