ನವದೆಹಲಿ: 2013ರ ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್ಐ)ದ 125 ದೇಶಗಳ ಪಟ್ಟಿಯಲ್ಲಿ ಭಾರತವೂ 111ನೇ ಸ್ಥಾನ ಪಡೆದಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ನಾಲ್ಕು ಸ್ಥಾನ ಕುಸಿತ ಕಂಡಿದೆ. ಆದರೆ, ಸರ್ಕಾರ ಈ ವರದಿಯನ್ನು ದೋಷ ಪೂರಿತ ಎಂದು ತಿರಸ್ಕರಿಸಿದೆ. 2023ರ ಜಾಗತಿಕ ಹಸಿವಿನ ಸೂಚ್ಯಂಕವು ಶೇ 28.7ರಷ್ಟು ಸ್ಕೋರ್ ಮಾಡಿದೆ. ಭಾರತದ ಹಸಿವಿನ ಮಟ್ಟ ಗಂಭೀರ ಸ್ವರೂಪದ್ದಾಗಿದೆ ಎಂದು ಜಾಗತಿಕ ವರದಿ ತಿಳಿಸಿದೆ. ಐರ್ಲೆಂಡ್ ಮತ್ತು ಜರ್ಮನಿಯಿಂದ ಸರ್ಕಾರೇತರ ಸಂಸ್ಥೆ ಕನ್ಸರ್ನ್ ವರ್ಲ್ಡ್‌ವೈಡ್ ಮತ್ತು ವೆಲ್ಟ್ ಹಂಗರ್ ಹಿಲ್ಫ್ ಈ ವರದಿಯನ್ನು ಬಿಡುಗಡೆ ಮಾಡಿದೆ.
ಕಳೆದ ವರ್ಷದ ಅಂದರೆ 2022ರ 125 ದೇಶದಗಳ ಈ ಪಟ್ಟಿಯಲ್ಲಿ ಭಾರತ 107ನೇ ಸ್ಥಾನ ಪಡೆದಿತ್ತು.
ವರದಿ ಅಲ್ಲಗಳೆದ ಕೇಂದ್ರ: ಈ ವರದಿಯು ದೋಷ ಪುರಿತವಾಗಿದೆ. ಇದರಲ್ಲಿ ಹಸಿವಿನ ಮಾಪನವನ್ನು ಸರಿಯಾಗಿ ನಡೆಸಿಲ್ಲ. ಇದು ಭಾರತದ ನೈಜ ಸ್ಥಾನವನ್ನು ಸರಿಯಾಗಿ ಪ್ರತಿನಿಧಿಸಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ವರದಿಯಲ್ಲಿ ಪಾಕಿಸ್ತಾನ 102, ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀ ಲಂಕಾ 60 ಮತ್ತು ದಕ್ಷಿಣ ಏಷ್ಯಾ ಮತ್ತು ಉಪ ಸಹಾರನ್ ಆಫ್ರಿಕಾದಲ್ಲಿ ಅಧಿಕ ಹಸಿವಿನ ಮಟ್ಟವನ್ನು ಹೊಂದಿರುವುದಾಗಿ ತಿಳಿಸಿದೆ.
ಸೂಚ್ಯಂಕದಲ್ಲಿ ಭಾರತದ ಹಸಿವಿನ ಮಾಪಕವನನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದಕ್ಕೆ ಬಳಕೆ ಮಾಡಿರುವ ಮಾದರಿಗಳು ತಪ್ಪಾಗಿವೆ. ಇದರಲ್ಲಿ ನಾಲ್ಕು ಮಕ್ಕಳಲ್ಲಿ ಮೂರು ಮಗುವಿಒನ ಆರೋಗ್ಯದ ಸೂಚ್ಯಕವಾಗಿದ್ದು, ಇದು ಒಟ್ಟಾರೆ ಜನಸಂಖ್ಯೆಯನ್ನು ಪ್ರತಿನಿಧಿಸುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಮಾದರಿಗಳ ಬಳಕೆ ಅಸಮಪರ್ಕ: ನಾಲ್ಕನೇ ಮತ್ತು ಪ್ರಮುಖ ಸೂಚ್ಯಕವಾಗಿರುವ ಅಪೌಷ್ಟಿಕತೆಯ ಜನಸಂಖ್ಯೆಯ ಅನುಪಾತವನ್ನು ಅಭಿಪ್ರಾಯದ ಮತಗಳ ಮೂಲಕ ಪಡೆಯಲಾಗಿದ್ದು, ಇದಕ್ಕೆ ಕೇವಲ 3000 ಗಾತ್ರದ ಸಣ್ಣ ಮಾದರಿಯನ್ನು ಪಡೆಯಲಾಗಿದೆ ಎಂದರು.