ನವದೆಹಲಿ: ಇಂದಿನ ಕಾಲದಲ್ಲಿ ಆರೋಗ್ಯಯುತ ಆಹಾರ ಸೇವನೆ ನಿಜಕ್ಕೂ ಸವಾಲಾಗಿದೆ. ಇಂದು ಬಹುತೇಕ ನಾವು ಪ್ಯಾಕೇಜ್ಡ್ ಮತ್ತು ಸಂಸ್ಕರಿತ ಆಹಾರಗಳ ಸೇವನೆ ಮಾಡುತ್ತಿದ್ದು, ಇದರಿಂದ ಒತ್ತಡ ಹೆಚ್ಚುವ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಜನರ ಆರೋಗ್ಯ ದುರ್ಬಲತೊಳ್ಳುತ್ತಿದೆ. ಈ ಹಿನ್ನೆಲೆ ಶುದ್ಧ ಮತ್ತು ತಾಜಾ ಆಹಾರ ಸೇವನೆ ಪ್ರಮುಖವಾಗುತ್ತಿದೆ.
ನಾವು ಪರಿಸರ ಮಾಲಿನ್ಯಕ್ಕೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂಬುದನ್ನು ನಿಯಂತ್ರಣ ಮಾಡಲಾಗುವುದಿಲ್ಲ. ಆದರೆ, ನಾವು ಆರೋಗ್ಯಯುತ ಡಯಟ್ ಅಳವಡಿಸಿಕೊಳ್ಳಬಹುದು. ಈ ಬಗ್ಗೆ ಈಗಾಗಲೇ ಜನರು ಅರಿವು ಹೊಂದಿದ್ದಾರೆ. ನ್ಯೂಟ್ರಿಷಿಯನ್ ಬ್ರಾಂಡ್ನ ವೈದ್ಯಕೀಯ ಮತ್ತು ವಿಜ್ಞಾನ ವಿಚಾರಗಳ ಮುಖ್ಯಸ್ಥ ಡಾ ಇರ್ಫಾನ್ ಶೇಖ್, ಆರೋಗ್ಯಯುತ ಆಹಾರಗಳ ಕುರಿತು ಒತ್ತು ನೀಡುವ ಬಗ್ಗೆ ತಿಳಿಸಿದ್ದಾರೆ. ಸಮತೋಲಿತ ಆಹಾರಗಳ ಜೊತೆಗೆ ಚಟುವಟಿಕೆಗಳನ್ನು ವಯಸ್ಸಿಗೆ ಅನುಗುಣವಾಗಿ ನಡೆಸಬೇಕು ಎಂದಿದ್ದಾರೆ.
ಹದಿ ವಯಸ್ಸಿನಲ್ಲೇ ಆರಂಭ: ಹದಿ ಹರೆಯದವರು ಬೆಳವಣಿಗೆಯಲ್ಲಿ ದೇಹದ ಮೂರು ಮುಖ್ಯ ವ್ಯವಸ್ಥೆಗಳು ಬದಲಾಗುತ್ತವೆ. ಸ್ನಾಯುಗಳು ಜೊತೆಗೆ ದೊಡ್ಡ ಮೂಳೆಗಳ ಬೆಳವಣಿಗೆ, ಹಾರ್ಮೋನ್ ಪಕ್ವತೆ ಮತ್ತು ರಕ್ತ ಹಾಗೂ ಇಮ್ಯೂನಿಟಿಯಲ್ಲಿ ಬದಲಾವಣೆ ಕಾಣಬಹುದು. ಈ ಅಂಶಗಳು ಸರಿಯಾಗಿ ಬೆಳವಣಿಗೆ ಆಗುತ್ತಿದ್ಯಾ ಎಂಬುದನ್ನು ಗಮನಿಸುವುದು ಅಗತ್ಯವಾಗಿದೆ.
ಮೂಳೆಗಳ ಆರೋಗ್ಯ: ಬಹುತೇಕ ಜನರು ಮೂಳೆಗಳ ಬಗ್ಗೆ ಯೋಚಿಸುವಾಗ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ, ವಿಟಮಿನ್ ಡಿ, ಮೆಗ್ನಿಶಿಯಂ, ಫಾಸ್ಫರಸ್, ವಿಟಮಿನ್ಕೆ, ಕೊಲೆಜನ್ ಮತ್ತು ಅಗತ್ಯ ಫ್ಯಾಟಿ ಆಸಿಡ್ಗಳು ಮೂಳೆಗಳ ಆರೋಗ್ಯಕ್ಕೆ ಅವಶ್ಯವಾಗಿದೆ. ಈ ಪೋಷಕಾಂಶಗಳ ಸೇವನೆ ಮೂಳೆಗಳ ಮುರಿತದಿಂದ ಕಾಪಾಡುತ್ತದೆ. ಮೀನು, ಮೊಟ್ಟೆ, ಕಡಲೆಕಾಳು ಪಲ್ಯ, ತರಕಾರಿ ಮಿಶ್ರಿತ ಪಲ್ಯ, ದಾಲ್ ತಡ್ಕಾ ಮತ್ತು ಇತರೆ ಅಗಸೆ ಬೀಜದ ಚಟ್ನಿಗಳಂತಹ ಆಹಾರಗಳು ನಿಮಗೆ ಸಮೃದ್ಧ ಪೋಷಕಾಂಶ ನೀಡುತ್ತದೆ.
ರಕ್ತ:ಆರೋಗ್ಯಯುತ ಕೆಂಪು ರಕ್ತ ಕೋಶಗಳಿಗೆ ಕಬ್ಬಿಣ, ವಿಟಮಿನ್ ಬಿ 12 ಮತ್ತು ಫೊಲಟ್ ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದ ಕಬ್ಬಿಣ ಅಂಶ ಇಲ್ಲದಿರುವುದರಿಂದ ಕೆಂಪು ರಕ್ತ ಕೋಶಗಳು ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುವುದಿಲ್ಲ. ಇದಕ್ಕಾಗಿ ಅಹಾರದಲ್ಲಿ ಪಾಲಕ್ ಬಳಕೆಗೆ ಒತ್ತು ನೀಡಬೇಕು. ಮೆಂತ್ಯೆ, ಬೀಟ್ರೂಟ್ನಂತಹ ಸಮೃದ್ಧ ಆಹಾರ ಸೇವಿಸಬೇಕು.
ಹಾರ್ಮೋನ್ ಪಕ್ವತೆ: ಸಮತೋಲಿತ ಡಯಟ್, ಸಾಕಷ್ಟು ಪ್ರೋಟಿನ್, ಹೆಚ್ಚಿನ ಫೈಬರ್, ಒತ್ತಡ ರಹಿತ ಜೀವನ, ನಿಯಮಿತ ವ್ಯಾಯಾಮ, ತೂಕ ನಿರ್ವಹಣೆ ಮತ್ತು ಉತ್ತಮ ನಿದ್ದೆ ಈ ಸಮಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಾರ್ಮೋನ್ಗಳ ಪಕ್ವತೆ ಬದಲಾವಣೆ ಆರಂಭಿಕ ಜೀವನಶೈಲಿಯ ಅಡಿಪಾಯವನ್ನು ಹೊಂದಿದೆ.
30- 40ರಲ್ಲಿ ಕಾಳಜಿ: ಜನರು 30-40ಕ್ಕೆ ಕಾಲಿಡುತ್ತಿದ್ದಂತೆ ರೋಗಗಳನ್ನು ತಡೆಗಟ್ಟುವ ಕುರಿತು ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೃದಯದ ಬಗ್ಗೆ ಜೋಪಾನ ಹೆಚ್ಚಿರುತ್ತದೆ.
ಕೊಲೆಸ್ಟ್ರಾಲ್: ಕಡಿಮೆ ಕೊಲೆಸ್ಟ್ರಾಲ್, ಸಾಕಷ್ಟು ತರಕಾರಿ, ಹಣ್ಣು ಸೇವನೆ, ಧಾನ್ಯಗಳು, ಪೋಷಕಾಂಶಯುಕ್ತ ಆಹಾರಗಳು, ಒಣ ಹಣ್ಣು ಮತ್ತು ಬೀಜಗಳು ನಿಮಗೆ ಸಹಾಯ ಮಾಡುತ್ತವೆ.