ಕರ್ನಾಟಕ

karnataka

ETV Bharat / sukhibhava

ಆರೋಗ್ಯ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಪರಿಸರ ಹೊಂದಿದೆ ಭಾರತೀಯ ಸ್ಟಾರ್ಟ್​ಅಪ್​ಗಳು; ಗೋಯಲ್​ - ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್​ಅಪ್

ಭಾರತದ ಆರೋಗ್ಯ ರಕ್ಷಣೆಯ ರೋಗ ಪತ್ತೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಳು ನಡೆಯುತ್ತಿದ್ದು, ಇವು ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಭರವಸೆ ನೀಡಿದೆ.

India s start up ecosystem has immense potential to tackle healthcare challenges Goyal
India s start up ecosystem has immense potential to tackle healthcare challenges Goyal

By ETV Bharat Karnataka Team

Published : Sep 2, 2023, 11:41 AM IST

ನವದೆಹಲಿ: ಜಾಗತಿಕವಾಗಿ ಮೂರನೇ ಅತಿ ದೊಡ್ಡ ದೇಶವಾಗಿರುವ ಭಾರತವೂ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಸ್ಟಾರ್ಟ್​ಅಪ್​ ವ್ಯವಸ್ಥೆ ಹೊಂದಿದೆ. ಈ ಮೂಲಕ ಜಾಗತಿಕ ಮಟ್ಟದಲ್ಲಿ ಆರೋಗ್ಯ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯುಷ್​ ಗೋಯಲ್​ ತಿಳಿಸಿದರು.

ಮುಂಬೈನಲ್ಲಿ ನಡೆಯುತ್ತಿರುವ ಗ್ಲೋಬಲ್​ ಡಿಜಿಟಲ್​ ಹೆಲ್ತ್​​ ಶೃಂಗಸಭೆ 2023ರಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಡಿಜಿಟಲ್​ ಹೆಲ್ತ್​ಕೇರ್​​ ಆರೋಗ್ಯ ರಕ್ಷಣೆಯ ಲಭ್ಯತೆಯ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಜೊತೆಗೆ ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎಲ್ಲರಿಗೂ ಆರೋಗ್ಯ ರಕ್ಷಣೆ ದೃಷ್ಟಿಯನ್ನು ಹೊಂದಿದೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದ ಮಾರುಕಟ್ಟೆಯ ಬೆಳವಣಿಗೆಯು ಅವಕಾಶ ಹೊಂದಲು ಸಹಕಾರಿಯಾಗಿದೆ ಎಂದರು.

ಸಾಂಕ್ರಾಮಿಕ ಸಮಯದಲ್ಲಿ ಭಾರತ 300 ಮಿಲಿಯನ್​ ಲಸಿಕೆಗಳನ್ನು ತಯಾರಿ 100 ದೇಶಗಳಿಗೆ ನೀಡಿತು. ಇದು ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಬಗ್ಗೆ ಭಾರತ ಹೊಂದಿರುವ ಬದ್ಧತೆಯಾಗಿದೆ ಎಂದು ಗೋಯಲ್​ ತಿಳಿಸಿದರು. ಭಾರತದ ಆರೋಗ್ಯ ರಕ್ಷಣೆಯ ರೋಗ ಪತ್ತೆಯಲ್ಲಿನ ಕ್ರಾಂತಿಕಾರಿ ಬದಲಾವಣೆಗಳು ನಡೆಯುತ್ತಿದ್ದು, ಇವು ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಭರವಸೆ ನೀಡಿದೆ.

ಭಾರತ ಜಗತ್ತಿನ ದೊಡ್ಡ ಆರೋಗ್ಯ ಸೇವಾ ವಿಮೆ ಯೋಜನೆ ಆಯುಷ್ಮಾನ್​ ಭಾರತ್​ ಅನ್ನು ಜಾರಿಗೆ ಮಾಡಿದ್ದು, ಆರೋಗ್ಯ ಕ್ಷೇತ್ರದಲ್ಲಿ ಇದೊಂದು ಹೊಸ ಮೈಲಿಗಲ್ಲು ಆಗಿದೆ ಎಂದರು. ಮುಖ್ಯ ಆರೋಗ್ಯ ಅಧಿಕಾರಿ ಕರೆನ್​ ಡೆಸಲ್ವೊ ಹೇಳುವಂತೆ ತಂತ್ರಜ್ಞಾನವು ರೋಗಿಗಳ ಆರೋಗ್ಯ ವ್ಯವಸ್ಥೆಯನ್ನು ಪೂರೈಸಲು ಸಹಾಯ ಮಾಡುತ್ತದೆ.

ಈ ಪ್ರಯೋಜನವೂ ಮಾಹಿತಿ ಮತ್ತು ಸೇವೆಗಳನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವರಿಗೆ ಸೀಮಿತವಾಗಬಾರದು. ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನವು ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕಾರಣವಾಗುತ್ತದೆ ಎಂದು ಗ್ಲೋಬಲ್​ ಡಿಜಿಟಲ್​ ಹೆಲ್ತ್​​ ಶೃಂಗಸಭೆಯ ಅಧ್ಯಕ್ಷ ರಾಜೇಂದ್ರ ಪ್ರತಾಪ್​ ಗುಪ್ತಾ ತಿಳಿಸಿದ್ದಾರೆ.

ಗ್ಲೋಬಲ್ ಡಿಜಿಟಲ್ ಹೆಲ್ತ್‌ಕೇರ್ ಶೃಂಗಸಭೆ 2023 ಆರೋಗ್ಯ ರಕ್ಷಣೆಯ ಆವಿಷ್ಕಾರದ ಮುಂಚೂಣಿಯಲ್ಲಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಡಿಜಿಟಲ್ ಹೆಲ್ತ್‌ಕೇರ್‌ನಲ್ಲಿ ಇತ್ತೀಚಿನ ಟ್ರೆಂಡ್‌ಗಳು ಮತ್ತು ಪ್ರಗತಿಗಳನ್ನು ಅನ್ವೇಷಿಸಲು ಇದು ಸಹಾಯ ಮಾಡುತ್ತದೆ. ಜೊತೆಗೆ ಇದು ವೈದ್ಯಕೀಯ ಜ್ಞಾನ ವಿನಿಮಯದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಉದ್ಯಮದಲ್ಲಿ ಹೊಸ ಬೆಳವಣಿಗೆ ಪ್ತಸ್ತುತ ಪಡಿಸಲು ವೇದಿಕೆಯಾಗುತ್ತದೆ.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾದಲ್ಲಿನ ಮಾನಸಿಕ ಆರೋಗ್ಯದ ಚರ್ಚೆಗಳು ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ: ಅಧ್ಯಯನ

ABOUT THE AUTHOR

...view details