ಹೈದರಾಬಾದ್: ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 761 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿರುವ ಒಟ್ಟಾರೆ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,334. ಕೇರಳದಲ್ಲಿ 1,249 ಪ್ರಕರಣಗಳು ಕಂಡುಬಂದಿದ್ದು, ಕರ್ನಾಟಕದಲ್ಲಿ 1,240, ಮಹಾರಾಷ್ಟ್ರದಲ್ಲಿ 914, ತಮಿಳುನಾಡಿನಲ್ಲಿ 190 ಮತ್ತು ಛತ್ತೀಸ್ಗಡ ಮತ್ತು ಆಂಧ್ರ ಪ್ರದೇಶದಲ್ಲಿ ತಲಾ 128 ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ಐದು, ಕರ್ನಾಟಕದಲ್ಲಿ ನಾಲ್ಕು, ಮಹಾರಾಷ್ಟ್ರದಲ್ಲಿ 2 ಮತ್ತು ಉತ್ತರ ಪ್ರದೇಶದಲ್ಲಿ ಒಂದು ಸಾವು ಸಂಭವಿಸಿದೆ.
ಕೋವಿಡ್ 19 ಉಪತಳಿ ಜೆಎನ್.1 ಪ್ರಕರಣಗಳು ದೇಶದ 12 ರಾಜ್ಯದಲ್ಲಿ ಪತ್ತೆಯಾಗಿದ್ದು, 619 ಪ್ರಕರಣಗಳು ದಾಖಲಾಗಿವೆ. ರಾಜ್ಯವಾರು ನೋಡುವುದಾದರೆ, ಕೇರಳದಲ್ಲಿ 148, ಮಹಾರಾಷ್ಟ್ರದಲ್ಲಿ 110, ಗೋವಾದಲ್ಲಿ 47, ಗುಜರಾತ್ನಲ್ಲಿ 36, ಆಂಧ್ರ ಪ್ರದೇಶದಲ್ಲಿ 30, ತಮಿಳುನಾಡಿನಲ್ಲಿ 26 ಹಾಗೂ ದೆಹಲಿಯಲ್ಲಿ 15 ಮತ್ತು ರಾಜಸ್ಥಾನದಲ್ಲಿ 4 ಮತ್ತು ತೆಲಂಗಾಣದಲ್ಲಿ 2 ಹಾಗೂ ಒಡಿಶಾ ಮತ್ತು ಹರಿಯಾಣದಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.