ಕರ್ನಾಟಕ

karnataka

ETV Bharat / sukhibhava

2023ರ ಏಷ್ಯಾ ಪೆಸಿಫಿಕ್‌ನಲ್ಲಿ ಆರೋಗ್ಯ ವಲಯದ ಡೀಲ್ ಮೌಲ್ಯದಲ್ಲಿ ಭಾರತದ ಪಾಲು ಅಧಿಕ

ಭಾರತದ ಆರ್ಥಿಕತೆ ಬೆಳವಣಿಗೆ ಕಾಣುತ್ತಿದ್ದು, ಉದ್ಯಮಿ ಸ್ನೇಜಿ ಸರ್ಕಾರ, ಫಾರ್ಮಾಸ್ಯುಟಿಕಲ್​ ಉತ್ಪಾದನೆ ಬೆಳವಣಿಗೆ ಮತ್ತು ಬೆಳವಣಿಗೆ ಕಾಣುತ್ತಿರುವ ಮಧ್ಯಮ ವರ್ಗದ ಹೂಡಿಕೆ ಮಾಡುವುದನ್ನು ಮುಂದುವರೆಸುತ್ತಿದೆ.

India registered the largest share of deal value in the healthcare sector
India registered the largest share of deal value in the healthcare sector

By ETV Bharat Karnataka Team

Published : Jan 4, 2024, 7:02 PM IST

ನವದೆಹಲಿ: 2023 ಏಷ್ಯಾ- ಫೆಸಿಫಿಕ್​ನಲ್ಲಿ ಆರೋಗ್ಯ ವಲಯದ ಅತಿ ದೊಡ್ಡ ಡೀಲ್​ ಮೌಲ್ಯದಲ್ಲಿ ಭಾರತವು ಅತಿದೊಡ್ಡ ಪಾಲನ್ನು ಪಡೆದಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.

ಕಳೆದ ವರ್ಷ ದೇಶವೂ 22 ಆರೋಗ್ಯವಲಯದ ಡೀಲ್​ನ ಆಥಿತ್ಯವಹಿಸಿದ್ದು, ಈ ಡೀಲ್​ಗಳ ಮೌಲ್ಯವೂ 4.6 ಬಿಲಿಯನ್​ ತಲುಪಿದೆ. ಏಷ್ಯಾ- ಫೆಸಿಫಿಕ್​ ಪ್ರದೇಶದಲ್ಲಿ ಡೀಲ್​ನ ಮೌಲ್ಯವೂ 14 ಬಿಲಿಯನ್​ ಡಾಲರ್​​ ತಲುಪಿದೆ.

ಭೌಗೋಳಿಕ ರಾಜಕೀಯ ಅಪಾಯವನ್ನು ನಿರ್ವಹಿಸಲು ಬಯಸುವ ಹೂಡಿಕೆದಾರರು ತಮ್ಮ ಪರಿಧಿಯನ್ನು ವಿಸ್ತರಿಸಲು ಪ್ರಾರಂಭಿಸಿದರು, ಭಾರತವು ಈ ಡೀಲ್​ ಮೌಲ್ಯದಲ್ಲಿ ಅತಿ ದೊಡ್ಡ ಪಾಲನ್ನು ಪ್ರತಿನಿಧಿಸುತ್ತಿದೆ. ಹಾಗೇ ಬಯೋಫಾರ್ಮ್​​ ಸಂಬಂಧಿಸಿದ ಕ್ರಿಯೆಯಲ್ಲಿ ದೀರ್ಘಕಾಲದ ಬೆಳವಣಿಗೆ ಕಾಣುತ್ತಿದೆ ಎಂದು ಬೈನ್​ ಅಂಡ್​ ಕಂಪನಿಯ ವಾರ್ಷಿಕ ಗ್ಲೋಬಲ್​ ಹೆಲ್ತ್​ಕೇರ್​ ಪ್ರೈವೇಟ್​ ಈಕ್ವಿಟಿ ಮತ್ತು ಎಂ ಅಂಡ್​ಎ ವರದಿ ತಿಳಿಸಿದೆ.

ಭಾರತದ ಆರ್ಥಿಕತೆ ಬೆಳವಣಿಗೆ ಕಾಣುತ್ತಿದ್ದು, ಉದ್ಯಮಿ ಸ್ನೇಜಿ ಸರ್ಕಾರ, ಫಾರ್ಮಾಸ್ಯುಟಿಕಲ್​ ಉತ್ಪಾದನೆ ಬೆಳವಣಿಗೆ ಮತ್ತು ಬೆಳವಣಿಗೆ ಕಾಣುತ್ತಿರುವ ಮಧ್ಯಮ ವರ್ಗದ ಹೂಡಿಕೆಯನ್ನು ಮುಂದುವರೆಸುತ್ತಿದೆ.

ಭಾರತದಲ್ಲಿನ ಮಧ್ಯಮ ವರ್ಗದ ಆರೋಗ್ಯ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಇದರ ನಡುವೆ ಅವರ ಆದಾಯ ಕೂಡ ಏರಿಕೆ ಕಾಣುತ್ತಿದೆ. ಇದರ ಜೊತೆಗೆ ಆದಾಯದಲ್ಲಿನ ಏರಿಕೆ ಮತ್ತು ಖಾಸಗಿ ಪಾವತಿದಾರರ ಉಪಸ್ಥಿತಿಯೊಂದಿಗೆ ಇನ್ಸರ್ಟೆಕ್ ಪ್ಲಾಟ್‌ಫಾರ್ಮ್‌ಗಳ ವಿಸ್ತರಿಕೆಯಿಂದ ಪ್ರೇರೇಪಿಸಲ್ಪಟ್ಟಿದೆ. ಇವು ಆರೋಗ್ಯ ವೆಚ್ಚದಲ್ಲಿ ಬೆಳವಣಿಗೆಯ ನಿರಂತರ ಮಾರ್ಗವನ್ನು ಸೂಚಿಸುತ್ತವೆ.

ಸರ್ಕಾರದ ನೀತಿಗಳು ಮತ್ತು ನುರಿತ ಪ್ರತಿಭೆಗಳಿಂದ ಭಾರತದ ಔಷಧೀಯ ವಲಯ ಉತ್ತೇಜಿತವಾಗಿದೆ. ಜಾಗತಿಕ ಸಣ್ಣ ಅಣು ಮತ್ತು ಜೆನೆರಿಕ್​ ಉತ್ಪಾದನೆಯಲ್ಲಿ ಜಾಗತಿಕವಾಗಿ ಮೂರನೇ ಸ್ಥಾನ ಪಡೆದಿದ್ದು, ಜಾಗತಿಕ ಮಟ್ಟದಲ್ಲಿ ಶೇ 50ರಷ್ಟು ಲಸಿಕೆ ಬೇಡಿಕೆಯನ್ನು ಪೂರೈಸಿದೆ.

ಜೆನರಿಕ್​ನಲ್ಲಿ ಚೀನಾದ ಪ್ರಾಬಲ್ಯದ ನಡುವೆ ಭಾರತವೂ ಜೈವಿಕ ಉಗಮವೂ ಜೆನೆರಿಕ್​ ಅಳವಡಿಕೆ ಸಾಮರ್ಥ್ಯವನ್ನು ತೋರಿಸಿದೆ. ಸ್ಪರ್ಧಾತ್ಮಕವಾಗಿ ಮುಂದುವರೆದಿದೆ ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ ಆರೋಗ್ಯ ವಲಯವೂ 2023ರಲ್ಲಿ ಖಾಸಗಿ ಈಕ್ವಿಟಿ ಹಬ್​ ಆಗಿ ಮುಂದುವರೆದಿದ್ದು, ಈ ಡೀಲ್​ ಮೌಲ್ಯವು 60 ಬಿಲಿಯನ್​ ಡಾಲರ್​ ತಲುಪಿದೆ ಎಂದು ಘೋಷಿಸಿದೆ. ಇದರ ಹೊರತಾದ ಜಾಗತಿಕ ಆಸಕ್ತಿ ದರ, ಹಣದುಬ್ಬರದ ಒತ್ತಡ ಮತ್ತು ಗಡಿ ಭೌಗೋಳಿಕ ರಾಜಕೀಯ ಅಸ್ಥಿರತೆ ಕಂಡಿದೆ.

ಭಾರತವು ಐತಿಹಾಸಿಕವಾಗಿ ಅನೇಕ ಅಮೆರಿಕ ಮತ್ತು ಯುರೋಪ್​ ಕೇಂದ್ರಿತ ಆರೋಗ್ಯ ದತ್ತಾಂಶ ಮತ್ತು ವಿಶ್ಲೇಷಣ ಕಂಪನಿಗೆ ಕಾರ್ಯ ನಿರ್ವಹಿಸಿದೆ. ಇತ್ತೀಚಿನ ದಿನದಲ್ಲಿ ನೇರವಾಗಿ ಗ್ರಾಹಕರ ಡಿಜಿಟಲ್​ ಆರೋಗ್ಯದ ಕಂಪನಿಗಳೊಂದಿಗೆ ಬೆಳವಣಿಗೆ ಕಂಡಿದೆ. ಅದರಲ್ಲೂ ವಿಶೇಷವಾಗಿ ಫಿಟ್ನೆಸ್​, ವೆಲ್​ನೆಸ್​, ಟೆಲಿ ಮೆಡಿಸಿನ್​ ಮತ್ತು ಇನ್ಸುರ್​ಟೆಕ್​ನಲ್ಲಿ ಎಂದು ವರದಿ ತಿಳಿಸಿದೆ.

ಕಡಿಮೆ ಡೀಲ್​ ಚಟುವಟಿಕೆಯ ಹೊರತಾಗಿಯೂ ಹೆಲ್ತ್​ಕೇರ್​-ಟೆಕ್​ ನೆಕ್ಸಸ್​​ನಲ್ಲಿ ಡಿಜಿಟಲ್​ ಪ್ರೇರಿತ ಯುವ ಜನಸಂಖ್ಯೆಯ ಚಾಲಿತ ದೃಢವಾದ ಮೂಲಭೂತ ಅಂಶಗಳಿಂದ ಪ್ರಯೋಜನ ಪಡೆದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಬಾಹ್ಯಾಕಾಶಯಾನಿಗಳಿಗೆ ರುಚಿಕರ ಪೌಷ್ಟಿಕಾಂಶಯುಕ್ತ ವೆಜ್​ ಸಲಾಡ್​​

ABOUT THE AUTHOR

...view details