ನವದೆಹಲಿ:ಗಂಭೀರ ಸೋಂಕಿನ ವಿರುದ್ಧ ಹೋರಾಡುವ ಉದ್ದೇಶದಿಂದ ಮಕ್ಕಳಿಗೆ ಅನೇಕ ಲಸಿಕೆಗಳನ್ನು ನೀಡಲಾಗುತ್ತದೆ. ಅದರಲ್ಲಿ ದಡಾರದ ಲಸಿಕೆ ಕೂಡ ಒಂದು. ಈ ದಡಾರದಿಂದ ಮಕ್ಕಳನ್ನು ರಕ್ಷಿಸುವ ಸಲುವಾಗಿ ಬಾಲ್ಯದಲ್ಲಿ ನೀಡುವ ಲಸಿಕೆಯನ್ನು ಭಾರತದಲ್ಲಿ 2022ರಲ್ಲಿ 1.1 ಮಿಲಿಯನ್ ಮಕ್ಕಳು ಪಡೆದಿಲ್ಲ. ಇದರಿಂದ ಅವರಲ್ಲಿ ದಡಾರದ ವಿರುದ್ಧ ಹೋರಾಡುವ ಅವರ ಪ್ರತಿರೋಧಕತೆ ಕಡಿಮೆಯಾಗಿದ್ದು, ಅವರು ಈ ರೋಗದ ಕಣ್ಗಾವಲಿನಲ್ಲಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ರೋಗ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಡಿ) ತನ್ನ ಜಾಗತಿಕ ವರದಿಯಲ್ಲಿ ತಿಳಿಸಿದೆ.
ದಡಾರ ಎಂಬುದು ಸಾಂಕ್ರಾಮಿಕ ರೋಗವಾಗಿದ್ದು, ಲಸಿಕೆ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ. ಈ ಸೋಂಕು ಹೆಚ್ಚಿನ ಜನರಿಗೆ ಹರಡುವುದನ್ನು ತಡೆಯಲು ಇದರ ವಿರುದ್ಧ ಪ್ರತಿರಕ್ಷಣೆ ಅಗತ್ಯವಾಗಿದೆ.
194 ದೇಶಗಳ ಜಾಗತಿಕ ವರದಿಯನ್ನು ಡಬ್ಲ್ಯೂಎಚ್ಒ ಮತ್ತು ಸಿಡಿಸಿ ಬಿಡುಗಡೆ ಮಾಡಿದ್ದು, ಇದರಲ್ಲಿ 10 ದೇಶಗಳ ದಡಾರ ಲಸಿಕೆ ಕುರಿತ ಮಾಹಿತಿ ನೀಡಲಾಗಿದೆ. ಇದರಲ್ಲಿ ಜಾಗತಿಕವಾಗಿ ಶೇ 55ರಷ್ಟು ಮಕ್ಕಳು ಈ ರೋಗ ಸಂಬಂಧ ಲಸಿಕೆಯನ್ನು ಪಡೆದಿಲ್ಲ. ಶಿಶುಗಳು ಈ ರೋಗದ ವಿರುದ್ಧ ಹೋರಾಡುವ ಎಂಸಿವಿ1 ಲಸಿಕೆಯನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಹತ್ತು ದೇಶಗಳ ಅಂಕಿ ಅಂಶ ಹೀಗಿದೆ. ಭಾರತದಲ್ಲಿ 1.1 ಮಿಲಿಯನ್, ನೈಜೀರಿಯಾದಲ್ಲಿ 3 ಮಿಲಿಯನ್, ಡೆಮೋಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ 1.8 ಮಿಲಿಯನ್, ಇಥಿಯೋಪಿಯಾ 1.7 ಮಿಲಿಯನ್, ಪಾಕಿಸ್ತಾನ 1.1 ಮಿಲಿಯನ್, ಅಂಗೊಲಾ 0.8 ಮಿಲಿಯನ್, ಫಿಲಿಫೈನ್ಸ್ 0.8 ಮಿಲಿಯನ್, ಇಂಡೋನೇಷ್ಯಾ 0.7 ಮಿಲಿಯನ್, ಬ್ರೆಜಿಲ್ 0.5 ಮಿಲಿಯನ್ ಮತ್ತು ಮಡ್ಗಾಸ್ಕರ್ 0.5 ಮಿಲಿಯನ್ ಮಕ್ಕಳು ಲಸಿಕೆ ಪಡೆದಿಲ್ಲ.
2021ರಲ್ಲಿ 22 ದೇಶಗಳಿಗೆ ಹೋಲಿಸಿದರೆ, 2022ರಲ್ಲಿ 37 ದೇಶಗಳ ಪೈಕಿ ಭಾರತದಲ್ಲಿ 40,967 ಪ್ರಕರಣಗಳು ದಾಖಲಾಗಿವೆ. ಜಾಗತಿಕವಾಗಿ 2022ರಲ್ಲಿ 33 ಮಿಲಿಯನ್ ಮಕ್ಕಳಿಗೆ ದಡಾರ ಲಸಿಕೆಯನ್ನು ತಪ್ಪಿಸಿದೆ. ಇದರಲ್ಲಿ 22 ಮಿಲಿಯನ್ ಮಕ್ಕಳು ಮೊದಲ ಡೋಸ್ ಲಸಿಕೆ ತಪ್ಪಿಸಿದರೆ, 11 ಮಿಲಿಯನ್ ಮಕ್ಕಳು ಎರಡನೇ ಡೋಸ್ ಲಸಿಕೆ ತಪ್ಪಿಸಿದ್ದಾರೆ. 2008ರ ಸಾಂಕ್ರಾಮಿಕಕ್ಕೆ ಹೋಲಿಸಿದಾಗ ಜಗತ್ತಿನಾದ್ಯಂತ ದಡಾರ ಪ್ರತಿರಕ್ಷಣೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ 2021ಕ್ಕೆ ಹೋಲಿಸಿದಾಗ 2022ರಲ್ಲಿ 9 ಮಿಲಿಯನ್ ದಡಾರ ಪ್ರಕರಣ ಮತ್ತು ಅಂದಾಜು 1,36,00 ದಡಾರ ಸಾವುಗಳು ಸಂಭವಿಸಿದೆ.