ಅವಧಿಗಿಂತ ಮುಂಚಿತವಾಗಿ ಶಿಶುಗಳ ಜನನ ಆತಂಕ ಮೂಡಿಸುವ ವಿಷಯ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿಯೊಂದಿಗೆ ಮತ್ತಿತರ ಸಮಸ್ಯೆಗಳನ್ನು ಹೊತ್ತು ತರುತ್ತದೆ. ಆದರೂ ಹಲವು ವೈದ್ಯಕೀಯ ಕಾರಣದಿಂದ ಮಗು ಅವಧಿಗೆ ಮುನ್ನ ಜನಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಅಂಕಿಅಂಶಗಳು ಆತಂಕ ಮೂಡಿಸುವಂತಿದೆ. ವಿಶ್ವದಲ್ಲಿ ಈ ರೀತಿ ಅವಧಿಪೂರ್ವವಾಗಿ ಶಿಶುಗಳು ಜನಿಸುವ ಪ್ರಮುಖ ಐದು ದೇಶಗಳಲ್ಲಿ ಭಾರತವೂ ಒಂದು ಅನ್ನೋದು ಕಳವಳ ಮೂಡಿಸುತ್ತಿದೆ. ಕೋವಿಡ್ ಕಾಲಘಟ್ಟದಲ್ಲಿ ಅಂದರೆ 2020ರಲ್ಲಿನ ಅಂಕಿಅಂಶವನ್ನು ಇದು ಬಿತ್ತರಿಸಿದೆ.
ಪ್ರಮುಖ ಐದು ದೇಶಗಳು ಯಾವುವು?: ಭಾರತ, ಪಾಕಿಸ್ತಾನ, ನೈಜೀರಿಯಾ, ಚೀನಾ ಮತ್ತು ಇಥಿಯೋಪಿಯಗಳಲ್ಲಿ ಶೇ 45ರಷ್ಟು ಪ್ರತಿಶತ ಮಕ್ಕಳು ಅವಧಿಗೆ ಮುನ್ನ ಜನಿಸಿವೆ. ಇದು ಒಂದು ರೀತಿಯ ಸೈಲೆಂಟ್ ಎಮೆರ್ಜೆನ್ಸಿ ಎಂದು ವರದಿ ತಿಳಿಸಿದೆ. 2020ರಲ್ಲಿ 13.4 ಮಿಲಿಯನ್ ಮಕ್ಕಳು ಅವಧಿ ಪೂರ್ವವಾಗಿ ಜನಿಸಿದ್ದು, ಇದರಲ್ಲಿ 1 ಮಿಲಿಯನ್ ಮಕ್ಕಳು ಪ್ರಸವ ಪೂರ್ವ ಸಮಸ್ಯೆಯಿಂದ ಸಾವನ್ನಪ್ಪಿವೆ. ಜಾಗತಿಕವಾಗಿ 10 ಮಕ್ಕಳಲ್ಲಿ 1 ಮಗು ಪ್ರಸವ ಪೂರ್ವವಾಗಿ ಹುಟ್ಟುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಜೊತೆಗೆ ಪಿಎಂಎನ್ಸಿಎಚ್ ದಶಕಗಳ ಹಿಂದೆ ಅವಧಿ ಪೂರ್ವ ಮಗುವಿನ ಜನನಕ್ಕೆ ಕಾರ್ಯ ರೂಪಿಸಿದೆ. ಮಹಿಳೆ, ಮಕ್ಕಳ ಮತ್ತು ಹದಿಹರೆಯದವರ ಸಂಖ್ಯೆ ವಿಶ್ವದ ಅತಿ ದೊಡ್ಡ ಒಕ್ಕೂಟವಾಗಿದ್ದು, ಸಮಸ್ಯೆಯನ್ನು ಪತ್ತೆ ಮಾಡುವುದನ್ನು ಕಡಿಮೆ ತೋರಿಸುತ್ತಿದೆ. ಅವಧಿ ಪೂರ್ವ ಜನನ, ಮಕ್ಕಳ ಆರೋಗ್ಯ ಮತ್ತು ಬದುಕುಳಿಯುವಿಕೆಯ ಸುಧಾರಿಸುವ ಪ್ರಗತಿಗೆ ಅಡ್ಡಿಯಾಗಿದೆ.
ಯಾವುದೇ ಸುಧಾರಣೆ ಇಲ್ಲ: ಕಳೆದೊಂದು ದಶಕಗಳಿಂದ ಪ್ರಪಂಚದ ಯಾವುದೇ ದೇಶಗಳಲ್ಲಿ ಅವಧಿ ಪೂರ್ವ ಮಕ್ಕಳ ಜನನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 2010 ರಿಂದ 2020ರ ವರೆಗೆ 152 ಮಿಲಿಯನ್ ಮಕ್ಕಳು ಅವಧಿಗೆ ಮುನ್ನ ಜನಿಸಿವೆ. 2020 ರಲ್ಲಿ ಬಾಂಗ್ಲಾದೇಶದಲ್ಲಿ ಅತಿ ಹೆಚ್ಚಿನ ಮಕ್ಕಳು (ಶೇ 16.2 ರಷ್ಟು) ಅವಧಿ ಪೂರ್ವವಾಗಿ ಜನಿಸಿದ್ದವು. ಇದರ ಬಳಿಕ ಮಲವಿ (14.5ರಷ್ಟು) ಮತ್ತು ಪಾಕಿಸ್ತಾನ (ಶೇ 14.4ರಷ್ಟು), ಭಾರತ (13ರಷ್ಟು) ಮತ್ತು ದಕ್ಷಿಣ ಆಫ್ರಿಕಾ (13ರಷ್ಟು)ಮಕ್ಕಳು ಪ್ರಸವ ಪೂರ್ವವಾಗಿ ಜನಿಸಿವೆ. ಇನ್ನು ಅತಿ ಹೆಚ್ಚು ಆದಾಯ ಹೊಂದಿರುವ ದೇಶವಾದ ಗ್ರೀಸ್ನಲ್ಲಿ ಈ ಪ್ರಕರಣವನ್ನು ಶೇ 11.6ರಷ್ಟು ಕಂಡರೆ, ಅಮೆರಿಕದಲ್ಲಿ ಶೇ 10.0ರಷ್ಟು ಕಾಣಬಹುದು. ದಕ್ಷಿಣ ಏಷ್ಯಾ ಮತ್ತು ಸಬ್ ಸಹರಾ ಆಫ್ರಿಕಾ ಹೆಚ್ಚಿನ ಅವಧಿ ಪೂರ್ವ ಜನನ ದರ ಹೊಂದಿದ್ದು, ಈ ಪ್ರದೇಶದಲ್ಲಿ ಈ ಶಿಶುಗಳ ಸಾವಿನ ಅಪಾಯವೂ ಹೆಚ್ಚಿದೆ. ಜಾಗತಿಕವಾಗಿ ಈ ಎರಡು ಪ್ರದೇಶಗಳಲ್ಲಿ ಹೆಚ್ಚಿನ ದರ ಇದ್ದು, ಇದು ಶೇ 65ರಷ್ಟಿದೆ.